More

    ‘ಬೆಂಕಿಯ ಭೂಮಿ’ಯಲ್ಲಿ ಕಿಚ್ಚು ಹಚ್ಚಿತು ಸದ್ಗುರು ಮಣ್ಣು ರಕ್ಷಿಸಿ ಅಭಿಯಾನ

    ಅಜೆರ್ಬೈಜಾನ: ಮಣ್ಣು ರಕ್ಷಣೆ ಸಲುವಾಗಿ ಈಶ ಫೌಂಡೇಷನ್​​ನ ಸದ್ಗುರು ಹಮ್ಮಿಕೊಂಡಿರುವ ಮಣ್ಣು ರಕ್ಷಿಸಿ ಅಭಿಯಾನ ಇದೀಗ ಬೆಂಕಿಯ ಭೂಮಿ ಎಂದೇ ಕರೆಯಲಾಗುವ ಅಜೆರ್ಬೈಜಾನ ದೇಶವನ್ನು ತಲುಪಿದ್ದು ಅಲ್ಲಿ ಮಣ್ಣು ರಕ್ಷಣೆಯ ಕಿಚ್ಚು ಹಚ್ಚಿದೆ.

    ಮಣ್ಣಿನ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ನೂರು ದಿನಗಳೊಳಗೆ 27 ರಾಷ್ಟ್ರಗಳಲ್ಲಿ ಏಕಾಂಗಿಯಾಗಿ ಬೈಕ್​ನಲ್ಲಿ ಪ್ರಯಾಣ ಹಮ್ಮಿಕೊಂಡಿರುವ ಸದ್ಗುರು, ಅಭಿಯಾನದ 40ನೇ ದಿನವಾದ ಇಂದು ಅಜೆರ್ಬೈಜಾನ ದೇಶದ ರಾಜಧಾನಿ ಬಕುವನ್ನು ತಲುಪಿದರು. ಬಕು ನಗರ ವಾಸಿಗಳು ಸದ್ಗುರು ಅವರನ್ನು ಸ್ವಾಗತಿಸಿ, ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದರು.

    ಸದ್ಗುರು ಬಕುವಿನ ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿದರು. ನಂತರ ಅಜೆರ್ಬೈಜಾನಿನ ಕೃಷಿ ಸಚಿವರು ಮಣ್ಣಿನ ಅಭಿಯಾನದ ಅರಿವಿನ ಬಗ್ಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು. ಹಾಗೆಯೇ ಅವರಿಗೆ ಸದ್ಗುರು ಅವರು ನೀತಿಚಾಲಿತ ಪುನರುಜ್ಜೀವನ ಕೈಪಿಡಿ ನೀಡಿದರು. ಅಲ್ಲಿಯ ಭೂಮಿ ಮಿತ್ರರ ಒಂದು ಅದ್ಭುತ ಗುಂಪು, ಸದ್ಗುರು ಜತೆ ಮಣ್ಣನ್ನು ಉಳಿಸುವ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದು ಹೃದಯಸ್ಪರ್ಶಿಯಾಗಿತ್ತು. 500 ಯುವ ಭೂಮಿ ಮಿತ್ರರು ಈ ಅಭಿಯಾನದ ಹಾಡಿಗೆ ಕುಣಿದು ಕುಪ್ಪಳಿಸಿದರು. ನಟ- ನಿರೂಪಕ ತುರಲ್ ಅಸಡೋವ್ ಅವರೊಂದಿಗೆ ಸದ್ಗುರು ಹೇದರ್ ಅಲಿಯೆವ್ ಕೇಂದ್ರದ ಮುಂದೆ ಈ ಅಭಿಯಾನದ ಬಗ್ಗೆ ಮಾತನಾಡಿದರು.

    ಮಣ್ಣಿನ ಮಹತ್ವವನ್ನು ಸಾರುವ ಪ್ರೊಜೆಕ್ಟ್ ಸಂಸ್ಕೃತಿ ಅವರ ಮನಮೋಹಕ ಪ್ರಸ್ತುತಿಯಿಂದ ಈ ಕಾರ್ಯಕ್ರಮ ಪ್ರಾರಂಭವಾಯಿತು. ಸದ್ಗುರುಗಳಿಂದ ಕಲ್ಪಿಸಲ್ಪಟ್ಟ ಪ್ರೊಜೆಕ್ಟ್ ಸಂಸ್ಕೃತಿ ಸಂಗೀತ, ನೃತ್ಯ ಮತ್ತು ಕಳರಿಪಯಟ್ಟು ಮುಂತಾದ ಭಾರತದ ಶಾಸ್ತ್ರೀಯ ಕಲೆಗಳನ್ನು ಕಲಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

    'ಬೆಂಕಿಯ ಭೂಮಿ'ಯಲ್ಲಿ ಕಿಚ್ಚು ಹಚ್ಚಿತು ಸದ್ಗುರು ಮಣ್ಣು ರಕ್ಷಿಸಿ ಅಭಿಯಾನ

    ಅಜೆರ್ಬೈಜಾನ ದೇಶಕ್ಕೆ ಭಾರತ ರಾಯಭಾರಿ ಆಗಿರುವ ಬಿ. ವನಲಾಲ್ವವ್ನಾ ಮಣ್ಣನ್ನು ಉಳಿಸುವ ಅಭಿಯಾನದ ಮಹತ್ವದ ಬಗ್ಗೆ ತಿಳಿಸಿ ಜನರಿಗೆ ಇದರ ಸಂದೇಶವನ್ನು ಪರಿಗಣಿಸುವಂತೆ ಮನವಿ ಮಾಡಿಕೊಂಡರು. ಮಣ್ಣಿನ ಅವನತಿಯ ಬಗ್ಗೆ ನೀತಿಗಳ ಪುನರ್ ರಚನೆಯ ಅಗತ್ಯವನ್ನು ಸದ್ಗುರು ಎತ್ತಿ ತೋರಿಸಿದರು. ಹಾಗೆಯೇ ಮಣ್ಣು ಅತಿ ದೊಡ್ಡ ಜೀವನದ ವ್ಯವಸ್ಥೆ ಎಂದು ನೆನಪಿಸಿದರು. ಒಂದು ಹುಳ, ಕೀಟ, ಚಿಟ್ಟೆ ಅಥವಾ ಯಾವುದೇ ಪ್ರಾಣಿ – ಇವು ಎಲ್ಲವೂ ಬರುವುದು ಮಣ್ಣಿನಿಂದ. ನಾನು ಮಣ್ಣು ಎಂದು ಕರೆಯುವುದು, ಕೇವಲ 15-18 ಇಂಚಿನ ಮಣ್ಣು. ಇದೇ ಇಡೀ ಮಣ್ಣಿನ ಜೀವಾಳವಾಗಿದೆ ಎಂದು ಸದ್ಗುರು ಹೇಳಿದರು.

    ಮುಂದಿನ ಪೀಳಿಗೆಯವರು ಮಣ್ಣಿನ ಆರೋಗ್ಯವನ್ನು ಕಾಪಾಡುವುದು ಖಚಿತವಿಲ್ಲ ಎಂದ ಸದ್ಗುರು, ಒಂದು ವೇಳೆ ನಿಮ್ಮ ಕೃಷಿ ಭೂಮಿ ಇದ್ದರೆ, ಅದರಲ್ಲಿ ಕನಿಷ್ಠ ಶೇ. 3-6 ಸಾವಯವ ಅಂಶ ತರಬೇಕು. ಇದನ್ನು ಪ್ರೋತ್ಸಾಹಿಸುವ ನೀತಿಯ ರಚನೆ ಆಗಬೇಕಾಗಿದೆ ಎಂದು ಹೇಳಿದರು.

    ಸರ್ಕಾರಗಳೊಂದಿಗೆ ಸಹಿ ಮಾಡಿದ ಒಪ್ಪಂದಗಳ ಬಗ್ಗೆ ಸದ್ಗುರು ವಿವರಣೆಯನ್ನು ನೀಡಿದರು. ಇವುಗಳ ಮೂಲಕ ಮಣ್ಣಿನ ಗುಣಮಟ್ಟವನ್ನು ಸುಧಾರಿಸಲು ಸರಕಾರ ಬದ್ಧವಾಗಿದೆ ಎಂಬುದು ಗೊತ್ತಾಗುತ್ತದೆ. ಈಗಾಗಲೇ ಇದರ ಬಗ್ಗೆ 192 ದೇಶಗಳು ಏನು ಮಾಡಬೇಕೆಂಬುದನ್ನು ಒಂದು ಕೈಪಿಡಿಯಲ್ಲಿ ದಾಖಲಿಸಿದ್ದೇವೆ. ಒಟ್ಟು 192 ನೀತಿ ದಾಖಲೆಗಳನ್ನು ರೂಪಿಸಿದ್ದೇವೆ. ಈ ಕೈಪಿಡಿಗಳಲ್ಲಿ ನೀತಿಯನ್ನು ಹೇಗೆ ರಚಿಸಬೇಕೆಂದು ಹೇಳಲಾಗಿದೆ. ರಾಷ್ಟ್ರಗಳು ಅವರವರ ನೀತಿಯನ್ನು ರಚಿಸಲು ಒಂದು ಮುನ್ನುಡಿಯನ್ನು ಪ್ರಸ್ತುತ ಪಡಿಸಲಾಗಿದೆ. ಖ್ಯಾತ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಈ ಕೈಪಿಡಿಯನ್ನು ಮಾಡಲು ಸುಮಾರು ಎರಡು ವರುಷ ಹಿಡಿದಿದೆ ಎಂದು ಸದ್ಗುರು ಹೇಳಿದರು.

    'ಬೆಂಕಿಯ ಭೂಮಿ'ಯಲ್ಲಿ ಕಿಚ್ಚು ಹಚ್ಚಿತು ಸದ್ಗುರು ಮಣ್ಣು ರಕ್ಷಿಸಿ ಅಭಿಯಾನ

    ಕುಟುಂಬ ರಾಜಕಾರಣ ಏಯ್ಡ್ಸ್​ ಥರ, ಎಲ್ಲ ಪಕ್ಷದಲ್ಲೂ ಇದೆ: ಯತ್ನಾಳ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts