More

    ಮಣ್ಣು ರಕ್ಷಿಸಿ ಅಭಿಯಾನ; ಮಳೆಯಲ್ಲೂ ತಡೆ ಇಲ್ಲದೆ ಸಾಗಿದೆ ಸದ್ಗುರು ಬೈಕ್ ಯಾನ..

    ವೆನಿಸ್​: ಈಶ ಫೌಂಡೇಷನ್​ನ ಸದ್ಗುರು ಅವರು ಮಣ್ಣು ರಕ್ಷಣೆ ಸಲುವಾಗಿ ಹಮ್ಮಿಕೊಂಡಿರುವ ಮಣ್ಣು ರಕ್ಷಿಸಿ ಅಭಿಯಾನ ಕೈಗೊಂಡಿದ್ದು, ಆ ಸಲುವಾಗಿ ಅವರು ನಡೆಸುತ್ತಿರುವ ಸಾವಿರಾರು ಕಿ.ಮೀ. ದೂರದ ಏಕಾಂಗಿ ಬೈಕ್​ ಯಾನ ಮಳೆಯಲ್ಲೂ ತಡೆ ಇಲ್ಲದೆ ಸಾಗಿದೆ.

    ರೋಮ್​ ತಲುಪುವ ಮಾರ್ಗದಲ್ಲಿನ ಭಾರಿ ಗಾಳಿ-ಮಳೆಯನ್ನೂ ಲೆಕ್ಕಿಸದೆ ಸದ್ಗುರು ಬೈಕ್ ಚಲಾಯಿಸಿಕೊಂಡು ಮಣ್ಣು ರಕ್ಷಿಸಿ ಅಭಿಯಾನ ಮುಂದುವರಿಸಿದ್ದಾರೆ. ಯುಕೆ, ನೆದರ್ಲೆಂಡ್ಸ್​, ಜರ್ಮನಿ, ಜೆಕ್ ರಿಪಬ್ಲಿಕ್, ಆಸ್ಟ್ರಿಯಾ ಮತ್ತು ಸ್ಲೊವೇನಿಯಾದ ನಂತರ ಮಾ.30ರಂದು ವೆನಿಸ್​ ತಲುಪಿದ ಸದ್ಗುರುಗೆ ಜನರು ಅಗಾಧ ಬೆಂಬಲ ತೋರಿದರು. ಅಲ್ಲಿಂದ ಮಾ. 31ರಂದು ಸದ್ಗುರು ರೋಮ್​ನತ್ತ ಪ್ರಯಾಣಿಸಿದರು.

    ಇನ್ನು ವೆನೆಸ್​ನಲ್ಲಿ ಸದ್ಗುರು ಎಲ್ಲಾ ಅರ್ಥ್ ಬಡ್ಡೀಸ್ (ಭೂಮಿಯ ಸ್ನೇಹಿತರಿಂದ) ಆತ್ಮೀಯ ಸ್ವಾಗತ ಪಡೆದರು ಮತ್ತು ಹರ್ಷಚಿತ್ತದಿಂದ ತುಂಬಿದ ಜನಸಮೂಹದ ನಡುವೆ ಯೂನಿವರ್ಸಿಟಾ ಕ್ಯಾ’ ಫೋಸ್ಕರಿಗೆ (Università Ca’ Foscari) ಆಗಮಿಸಲು ಗೊಂಡೊಲಾ ಸವಾರಿ ಮಾಡಿದರು.

    ಯೂನಿವರ್ಸಿಟಾ ಕ್ಯಾ’ ಫೋಸ್ಕರಿಯಲ್ಲಿ ತಜ್ಞರೊಂದಿಗಿನ ಸಂವಾದದಲ್ಲಿ ವಿಶ್ವದ ಮಣ್ಣನ್ನು ರಕ್ಷಿಸುವ ಮಹತ್ವದ ಕುರಿತು ಸದ್ಗುರು ಮಾತನಾಡಿದರು. ಪರಿಸರವಾದಿ ಅಥವಾ ಪರಿಸರ ವಿಜ್ಞಾನಿ ಎಂದು ಕರೆದುಕೊಳ್ಳುವುದು ಅವಮಾನದ ಮಾತಾಗಿದೆ, ಏಕೆಂದರೆ ನಾವೇ ಸ್ವತಃ ಜೀವಾವರಣ ಎಂದು ಹೇಳಿದರು.

    ಮಣ್ಣು ರಕ್ಷಿಸಿ ಅಭಿಯಾನ; ಮಳೆಯಲ್ಲೂ ತಡೆ ಇಲ್ಲದೆ ಸಾಗಿದೆ ಸದ್ಗುರು ಬೈಕ್ ಯಾನ..

    ಮಣ್ಣನ್ನು ಉಳಿಸಲು ಪುರುಷ ಮತ್ತು ಸ್ತ್ರೀಯ ನಡುವಿನ ಸಾಮರಸ್ಯವು ಅತ್ಯಗತ್ಯ ಅಂಶವಾಗಿದೆಯೇ? ಎಂಬ ಪ್ರಶ್ನೆಗೆ, ಪುರುಷ ಸ್ವಭಾವ ಜಯಿಸುವುದು ಅಥವಾ ನಿಗ್ರಹಣೆ ಮಾಡುವುದಾಗಿದೆ ಹಾಗೂ ಸ್ತ್ರೀಯ ಸ್ವಭಾವವು ಸಂರಕ್ಷಿಸುವುದು ಮತ್ತು ಒಗ್ಗೂಡಿಸುವುದು ಎಂದು ಸದ್ಗುರು ಪ್ರತಿಕ್ರಿಯಿಸಿದರು.

    ನಾವು ಭೂಮಿಯ ಮಣ್ಣನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲಿ, ಇದು ಪುರುಷ ಸ್ವಭಾವಕ್ಕಿಂತ ಹೆಚ್ಚಾಗಿ ಸ್ತ್ರೀಯ ಸ್ವಭಾವವು ಹೆಚ್ಚು ಪ್ರಬಲವಾಗಿರಬೇಕು. ಪ್ರತಿ ಮನುಷ್ಯನು ಪುರುಷ ಮತ್ತು ಸ್ತ್ರೀಯ ಗುಣಗಳನ್ನು ಹೊಂದಿದ್ದಾನೆ ಮತ್ತು ನಮ್ಮ ಸ್ತ್ರೀಯ ಸ್ವಭಾವದ ಸಂರಕ್ಷಣೆಯ ಗುಣಗಳು ಹೆಚ್ಚು ಪ್ರಬಲವಾಗಿಸಲು ಇದು ಸಮಯವಾಗಿದೆ ಎಂಬ ಅಂಶವನ್ನು ಸದ್ಗುರು ಪ್ರಸ್ತಾಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts