More

    ಚಿತ್ರ ವಿಮರ್ಶೆ: ಈ ವಿಚಾರಣೆಯಲ್ಲಿ ಅವರನ್​ ಬಿಟ್​, ಇವರನ್​ ಬಿಟ್​, ಅವರ್ಯಾರು?

    ಚಿತ್ರ; ಸದ್ದು ವಿಚಾರಣೆ ನಡೆಯುತ್ತಿದೆ
    ನಿರ್ಮಾಣ: ಸುರಭಿ ಲಕ್ಷ್ಮಣ್​
    ನಿರ್ದೇಶನ: ಭಾಸ್ಕರ್​ ನೀನಾಸಂ
    ತಾರಾಗಣ: ರಾಕೇಶ್​ ಮಯ್ಯ, ಪಾವನಾ ಗೌಡ, ಅಚ್ಯುತ್​ ಕುಮಾರ್​, ಮಧುನಂದನ್​, ರಾಘು ಶಿವಮೊಗ್ಗ ಮುಂತಾದವರು

    ಮೊದಲು ಹುಡುಗಿಯ ಕುಟುಂಬದವರೇ ಈ ಕೊಲೆಗಳಿಗೆ ಕಾರಣವಿರಬಹುದಾ ಎಂಬ ಪ್ರಶ್ನೆ ಮೂಡುತ್ತದೆ. ನಂತರ ದ್ವೇಷಕ್ಕಾಗಿ ಕೊಲೆ ನಡೆದಿರಬಹುದಾ ಎಂದನಿಸುತ್ತದೆ. ಯಾರೋ ಕಳ್ಳರು ನಡೆಸಿರಬಹುದಾದ ದುಷ್ಕೃತ್ಯವಾ ಎಂಬ ಯೋಚನೆಯೂ ಮನಸ್ಸಿನಲ್ಲಿ ಸುಳಿಯುತ್ತದೆ …
    ಹೀಗೆ ಟ್ವಿಸ್ಟ್​ಗಳ ಮೇಲೆ ಟ್ವಿಸ್ಟ್​ಗಳನ್ನು ಕೊಡುತ್ತಾ ಹೋಗುತ್ತದೆ ‘ಸದ್ದು ವಿಚಾರಣೆ ನಡೆಯುತ್ತಿದೆ. ಇವಿಷ್ಟರಲ್ಲೇ ಯಾವುದೋ ಒಂದು ಟ್ವಿಸ್ಟು ಇರಬಹುದು, ಇವಿಷ್ಟು ಜನರಲ್ಲೇ ಯಾರೋ ಒಬ್ಬ ಕೊಲೆಗಾರ ಇರಬಹುದು ಎಂದುಕೊಂಡರೆ ತಪ್ಪು. ಇವೆಲ್ಲವನ್ನೂ ಬಿಟ್ಟು ಕೊನೆಗೆ ಇನ್ನೊಂದು ಹೊಸ ಟ್ವಿಸ್ಟು ಸಿಗುತ್ತದೆ. ಯಾರು ಕೊಲೆ ಮಾಡಿರಲಿಕ್ಕಿಲ್ಲ ಎಂಬ ಅಂದಾಜು ಇರುತ್ತದೋ, ಅವರೇ ಕೊಲೆಗಾರರಾಗಿರುತ್ತಾರೆ. ಆದರೆ, ಅಷ್ಟರಲ್ಲಿ ಬಹಳ ತಡವಾಗಿರುತ್ತದೆ ಹಲವು ಟ್ವಿಸ್ಟ್​ಗಳನ್ನು ಹಾದು ಹೋಗುವ ಪ್ರೇಕ್ಷಕ ನಿಜಕ್ಕೂ ಸುಸ್ತಾಗಿರುತ್ತಾನೆ.

    ಇದನ್ನೂ ಓದಿ: ಬೆಳ್ಳಿ ಪರದೆ ಮೇಲೆ ರತನ್ ಟಾಟಾ ಬಯೋಪಿಕ್​; ನಿರ್ದೇಶನಕ್ಕೆ ಸಜ್ಜಾದ ಸುಧಾ ಕೋಂಗಾರ!

    ಹಾಗೆ ನೋಡಿದರೆ, ಚಿತ್ರದ ಕಥೆ ಅಷ್ಟೇನೂ ಕ್ಲಿಷ್ಟವಲ್ಲ. ಆಗಷ್ಟೇ ಹೊಸದಾಗಿ ಪೊಲೀಸ್​ ಇಲಾಖೆಗೆ ಪೇದೆಯಾಗಿ ಸೇರಿರುವ ಜನನಿ (ಪಾವನ ಗೌಡ) ತನ್ನ ಗಂಡನೊಂದಿಗೆ ನಿಗೂಢವಾಗಿ ಕಣ್ಮರೆಯಾಗುವ ಮೂಲಕ ಚಿತ್ರದ ಕಥೆ ಪ್ರಾರಂಭವಾಗುತ್ತದೆ. ಈ ಕೇಸನ್ನು ದಕ್ಷ ಅಧಿಕಾರಿ ಪೃಥ್ವಿರಾಜ್​ಗೆ (ಮಧುನಂದನ್​) ವಹಿಸಲಾಗುತ್ತದೆ. ಆತ ತನಿಖೆ ಮಾಡುತ್ತಾ ಹೋದಂತೆ ಇದು ಮರ್ಯಾದಾ ಹತ್ಯೆಯಾ ಎಂದನಿಸುತ್ತದೆ. ಆಕೆಯಿಂದ ತಿರಸ್ಕೃತನಾದ ಭಾವನ ತಮ್ಮನೇ ದ್ವೇಷದಿಂದ ಕೊಲೆ ಮಾಡಿರಬಹುದಾ ಎಂಬ ಪ್ರಶ್ನೆ ಮೂಡುತ್ತದೆ. ಹೀಗೆ ತನಿಖೆ ಚುರುಕಾಗುತ್ತಿದ್ದಂತೆ ಒಂದೊಂದೇ ರಹಸ್ಯಗಳು ತೆರೆದುಕೊಳ್ಳುತ್ತ ಹೋಗುತ್ತದೆ. ಈ ಕಣ್ಣಾಮುಚ್ಚಾಲೆ ಆಟ ಕ್ಷಣಕ್ಷಣಕ್ಕೂ ಹೊಸಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ.

    ಬಹುಶಃ ಇಂಥ ಅತಿಯಾದ ತಿರುವುಗಳೇ ಚಿತ್ರದ ದೊಡ್ಡ ಮೈನಸ್​ ಪಾಯಿಂಟ್​ ಎಂದರೆ ತಪ್ಪಿಲ್ಲ. ಹೀಗೆ ಟ್ವಿಸ್ಟ್​ ಕೊಡುವ ಭರದಲ್ಲಿ ಚಿತ್ರವನ್ನು ಅನಾವಶ್ಯಕವಾಗಿ ಎಳೆಯಲಾಗುತ್ತದೆ. ಕೊನೆಗೆ ಚಿತ್ರ ಸಮಂಜಸವಾಗಿ ಮುಗಿಯುತ್ತದಾ ಎಂದರೆ ಅದೂ ಇಲ್ಲ. ಬೇರೆ ವಿಷಯಗಳ ಡೀಟೇಲಿಂಗ್​ಗೆ​ ಮಹತ್ವ ಕೊಡುವ ನಿರ್ದೇಶಕರು ಕೊನೆಗೆ ಬಹಳ ಮುಖ್ಯವಾದ ಅಂಶವನ್ನೇ ಮಿಸ್​ ಮಾಡುತ್ತಾರೆ. ಈ ಮೂಲಕ ಒಂದೊಳ್ಳೆಯ ಸಸ್ಪೆನ್ಸ್​ ಥ್ರಿಲ್ಲರ್​ ಆಗಬಹುದಾಗಿದ್ದ ‘ಸದ್ದು ವಿಚಾರಣೆ ನಡೆಯುತ್ತಿದೆ’ ನೀರಸವಾಗಿ ಮುಗಿಯುತ್ತದೆ.

    ಇದನ್ನೂ ಓದಿ: ರಶ್ಮಿಕಾ ಚಿತ್ರಗಳಿಗೆ ಕರ್ನಾಟಕದಲ್ಲಿ ಬ್ಯಾನ್​? ಸೋಷಿಯಲ್​ ಮೀಡಿಯಾದಲ್ಲಿ ಹೀಗೊಂದು ಸುದ್ದಿ!

    ರಾಕೇಶ್​ ಮಯ್ಯ, ಪಾವನಾ ಗೌಡ, ಮಧುನಂದನ್​, ರಾಘು ಶಿವಮೊಗ್ಗ, ಅಚ್ಯುತ್​ ಕುಮಾರ್​, ಗೌತಮ್​ ರಾಜು ತಮ್ಮ ಕೆಲಸವನ್ನು ಚೆನ್ನಾಗಿ ಮಾಡಿದ್ದಾರೆ. ಸಿನಿಮಾದ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಖುಷಿ ಕೊಡುತ್ತದೆ.

    ಇವತ್ತಿನ ಕಾಲಘಟ್ಟಕ್ಕೆ ಹೇಳಿ ಮಾಡಿಸಿದ ಚಿತ್ರ ‘ಸದ್ದು ವಿಚಾರಣೆ ನಡೆಯುತ್ತಿದೆ’. ಆದರೆ, ಪ್ರೇಕ್ಷಕರನ್ನು ದಿಕ್ಕು ತಪ್ಪಿಸುವುದಕ್ಕೆ ಹೋಗಿ, ಚಿತ್ರತಂಡದವರೇ ದಿಕ್ಕು ತಪ್ಪಿದ್ದು ಬೇಸರದ ಸಂಗತಿ.

    – ಚೇತನ್​ ನಾಡಿಗೇರ್​

    ಅಜನೀಶ್ ಲೋಕನಾಥ್ ಕಿಡ್ನಾಪ್​ … ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts