More

    ರಫೇಲ್​ ಆಗಮನಕ್ಕೆ ಕ್ರೀಡಾತಾರೆಯರಿಂದ ಸ್ವಾಗತ, ಸಂಭ್ರಮ

    ಬೆಂಗಳೂರು: ಯುದ್ಧ ವಿಮಾನಗಳ ಸಾಲಿನಲ್ಲಿ ಅಗ್ರಣಿಯಾದ ಫ್ರಾನ್ಸ್​ ನಿರ್ಮಿತ ಐದು ರಫೇಲ್​ ಯುದ್ಧ ವಿಮಾನಗಳು ಬುಧವಾರ ಭಾರತದ ಸೇನಾ ಬತ್ತಳಿಕೆಗೆ ಸೇರ್ಪಡೆಗೊಂಡ ಬಗ್ಗೆ ದೇಶದ ಕ್ರೀಡಾತಾರೆಯರು ಸಂಭ್ರಮ ವ್ಯಕ್ತಪಡಿಸಿದ್ದು, ಸೇನೆಗೆ ಬ್ರಹ್ಮಾಸ್ತ್ರದ ಬಲ ಸಿಕ್ಕಿರುವುದನ್ನು ಸ್ವಾಗತಿಸಿದ್ದಾರೆ ಮತ್ತು ಹೆಮ್ಮೆ ಪಟ್ಟಿದ್ದಾರೆ. ಭಾರತೀಯ ವಾಯುಸೇನೆಯ ಗೌರವ ಗ್ರೂಪ್​ ಕ್ಯಾಪ್ಟನ್​ ಕೂಡ ಆಗಿರುವ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​, ಸುರೇಶ್​ ರೈನಾ, ಮೊಹಮದ್​ ಶಮಿ, ಶಿಖರ್​ ಧವನ್​, ಕುಸ್ತಿಪಟು ಪೂಜಾ ದಾಂಢ ಮತ್ತಿತರರು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.

    ‘ಫೈಟರ್​ ಜೆಟ್​ ರಫೇಲ್​ ಅನ್ನು ನಮ್ಮ ವಾಯುಪಡೆಗೆ ಸೇರ್ಪಡೆಗೊಳಿಸಿರುವುದಕ್ಕೆ ವಾಯುಸೇನೆಗೆ ಹೃದಯಪೂರ್ವಕ ಅಭಿನಂದನೆಗಳು. ಇದು ಅವಿಶ್ರಾಂತವಾಗಿ ವಾಯುಮಾರ್ಗದಲ್ಲಿ ನಮ್ಮನ್ನು ರಕ್ಷಣೆ ಮಾಡುತ್ತಿರುವ ನಮ್ಮ ರಕ್ಷಣಾ ಪಡೆಯ ಬಲಕ್ಕೆ ಭಾರಿ ಶಕ್ತಿ ತುಂಬಿದೆ. ಜೈ ಹಿಂದ್​’ ಎಂದು ಸಚಿನ್​ ತೆಂಡುಲ್ಕರ್​ ಟ್ವೀಟಿಸಿದ್ದಾರೆ.

    ಇದನ್ನೂ ಓದಿ: ಫ್ರಾನ್ಸ್​ ಟು ಇಂಡಿಯಾ : ರಫೇಲ್ ಭಾರತಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಿಲಾಲ್

    ‘ಭಾರತೀಯ ವಾಯುಸೇನೆಗೆ ಬತ್ತಳಿಕೆಗೆ 5 ರಫೇಲ್​ ಸೇರ್ಪಡೆಯಾಗಿರುವುದು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. ಇದು ಖಂಡಿತವಾಗಿಯೂ ನಮ್ಮ ದೇಶದ ಭದ್ರತೆಗೆ ಬಲ ತುಂಬಲಿದೆ. ಇಡೀ ದೇಶಕ್ಕೆ ಅಭಿನಂದನೆಗಳು, ಜೈ ಹಿಂದ್​’ ಎಂದು ಸುರೇಶ್​ ರೈನಾ ಟ್ವೀಟಿಸಿದ್ದಾರೆ. ‘ಚಿನ್ನದ ಬಾಣಗಳೇ ತವರಿಗೆ ಸ್ವಾಗತ. ನಮ್ಮ ದೇಶಕ್ಕೆ ಇದೊಂದು ಅಪೂರ್ವವಾದ ಕ್ಷಣ’ ಎಂದು ಶಿಖರ್​ ಧವನ್​ ಟ್ವೀಟಿಸಿದ್ದಾರೆ.

    ‘ಚಿನ್ನದ ಬಾಣಗಳೇ ಸುಸ್ವಾಗತ. ದೊಡ್ಡ ಹಕ್ಕಿಗಳು (ರಫೇಲ್​) ಯಾವಾಗಲೂ ಆಕಾಶದಲ್ಲಿರುತ್ತವೆ’ ಎಂದು ವೇಗಿ ಮೊಹಮದ್​ ಶಮಿ ಸಂಭ್ರಮಿಸಿದ್ದಾರೆ. ಕುಸ್ತಿಪಟು ಪೂಜಾ ದಾಂಢ ಚಪ್ಪಾಳೆಯ ಇಮೋಜಿಯೊಂದಿಗೆ ಭಾರತೀಯ ವಾಯುಸೇನೆಯ ಟ್ವೀಟ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ರಫೇಲ್​ಗೆ ಭಾರತ ಭೂಮಿಗೆ ಅಭಿನಂದನೆಗಳು. ಎಲ್ಲರಿಗೂ ಅಭಿನಂದನೆಗಳು. ಭಾರತೀಯ ಸೇನೆಗೆ ಸೆಲ್ಯೂಟ್​. ಜೈ ಹಿಂದ್​, ವಂದೇಮಾತರಂ’ ಎಂದು ಒಲಿಂಪಿಕ್ಸ್​ ಕಂಚು ವಿಜೇತ ಪೈಲ್ವಾನ್​ ಯೋಗೇಶ್ವರ್​ ದತ್​ ಟ್ವೀಟಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts