More

    ಫ್ರಾನ್ಸ್​ ಟು ಇಂಡಿಯಾ : ರಫೇಲ್ ಭಾರತಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಿಲಾಲ್

    ಕೇಪ್​ಟೌನ್ : ಏರ್ ಕಮಡೋರ್ ಹಿಲಾಲ್ ಅಹ್ಮದ್ ಹೆಸರು ಈಗ ಎಲ್ಲೆಡೆ ಕೇಳಿಬರುತ್ತಿದೆ. ಹಿಲಾಲ್, ಫ್ರಾನ್ಸ್‌ನಿಂದ ಭಾರತಕ್ಕೆ ಹೊರಟ ಮೊದಲ ಕಂತಿನ ರಾಫೆಲ್ ಜೆಟ್‌ಗಳನ್ನು ಸೋಮವಾರ ವೀಕ್ಷಿಸಿದರು.
    ವಿಶೇಷವೆಂದರೆ ಅವರು ಭಾರತ – ಫ್ರಾನ್ಸ್ ಮಧ್ಯೆ ರಫೇಲ್ ಒಪ್ಪಂದ ಏರ್ಪಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
    ಹಿಲಾಲ್ ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರ ತಂದೆ, ಮೊಹಮ್ಮದ್ ಅಬ್ದುಲ್ಲಾ ಜಮ್ಮು ಕಾಶ್ಮಿರ ಪೊಲೀಸ್ ಇಲಾಖೆಯಲ್ಲಿ ಡಿವೈ ಎಸ್‌ಪಿ ಆಗಿ ನಿವೃತ್ತರಾಗಿದ್ದರು. 

    ಇದನ್ನೂ ಓದಿ: LIVE| ಭಾರತಕ್ಕೆ ಪಂಚ ಬ್ರಹ್ಮಾಸ್ತ್ರ: ಅಂಬಾಲ ವಾಯುನೆಲೆಗೆ ಬಂದಿಳಿಯಲಿದೆ ರಫೇಲ್ ರಣಧೀರ!


    ಜಮ್ಮು ಜಿಲ್ಲೆಯ ನಾಗ್ರೋಟಾ ಪಟ್ಟಣದ ಸೈನಿಕ ಶಾಲೆಯಲ್ಲಿ ಶಿಕ್ಷಣ ಪೂರೈಸಿದರು. ಅವರು 1988 ರಲ್ಲಿ ಭಾರತೀಯ ವಾಯುಸೇನೆಯಲ್ಲಿ ಫೈಟರ್ ಪೈಲಟ್ ಆಗಿ ನಿಯೋಜನೆಗೊಂಡರು. 1993 ರಲ್ಲಿ ಫ್ಲೈಟ್ ಲೆಫ್ಟಿನೆಂಟ್, 2004ರಲ್ಲಿ ವಿಂಗ್ ಕಮಾಂಡರ್, 2016 ರಲ್ಲಿ ಗ್ರೂಪ್ ಕ್ಯಾಪ್ಟನ್ ಮತ್ತು 2019 ರಲ್ಲಿ ಏರ್ ಕಮೋಡೋರ್ ಆದರು.
    ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜಿನಿಂದ (ಡಿಎಸ್ಎಸ್ಸಿ) ಪದವಿ, ಏರ್ ವಾರ್ ಕಾಲೇಜಿನಿಂದ ಕೂಡ(ಯುಎಸ್ಎ) ಉನ್ನತ ದರ್ಜೆಯಲ್ಲಿ ಪದವಿ ಪಡೆದಿದ್ದಾರೆ. ವಾಯುಸೇನಾ ಪದಕ, ವಿಶಿಷ್ಟ ಸೇವಾ ಪದಕ ಹಾಗೂ ಗೌರವಕ್ಕೆ ಪಾತ್ರರಾಗಿದ್ದಾರೆ.
    ಫ್ರಾನ್ಸ್​ ವಾಯುಸೇನೆಯ ರಫೇಲ್ ಯುದ್ಧ ವಿಮಾನಗಳ ಶಕ್ತಿಯನ್ನು ಮನಗಂಡಿದ್ದ ಅವರು ಈ ಯುದ್ಧ ವಿಮಾನಗಳು ಭಾರತೀಯ ವಾಯುಸೇನೆಗೆ ಸೇರಬೇಕೆಂದು ಕನಸು ಕಂಡಿದ್ದರು. ಆ ಕಾರಣಕ್ಕಾಗಿಯೇ ಭಾರತ ಹಾಗೂ ಫ್ರಾನ್ಸ್ ನಡುವಿನ ರಫೇಲ್ ಒಪ್ಪಂದದಲ್ಲಿ ಇವರು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಬಹುದು.

    ಇದನ್ನೂ ಓದಿ:  ಮುಜಾಹಿದ್ದೀನ್​​ ಅಂತ್ಯಗೊಂಡಿದೆ ಎಂದು ಭಾರತ ಭಾವಿಸುವ ಅಗತ್ಯವಿಲ್ಲ: ಹಿಜ್ಬುಲ್​ ಉಗ್ರರಿಂದ ಬೆದರಿಕೆ


    ಎರಡೂ ರಾಷ್ಟಗಳ ಮಧ್ಯೆ ಒಪ್ಪಂದ ಏರ್ಪಟ್ಟು ಮೊದಲ ಕಂತಿನ ಐದು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬರುವಲ್ಲಿ ಇವರ ಪಾತ್ರ ಮಹತ್ವಪೂರ್ಣ ಎನ್ನಬಹುದು.
    ಮಿಗ್ -21 ಮತ್ತು ಮಿರಾಜ್, ಕಿರಣ್ ವಿಮಾನಗಳನ್ನು ಚಲಾಯಿಸಿದ ಪರಿಣತಿ, 3,000 ಗಂಟೆಗಳ ಯುದ್ಧ ವಿಮಾನ ಚಾಲನೆಯ ಅನುಭವ ಹೊಂದಿರುವುದು ವಿಶೇಷ. ಭಾರತದಲ್ಲಿ ರಫೇಲ್‌ ಯುದ್ಧ ವಿಮಾನದ ಜತೆಗೆ ಹಿಲಾಲ್ ಅವರ ಹೆಸರು ಈಗ ಭಾರತದಲ್ಲಿ ಶಾಶ್ವತವಾಗಿ ಉಳಿಯುವುದರಲ್ಲಿ ಸಂಶಯವಿಲ್ಲ.  

    ಫ್ರಾನ್ಸ್‌ನಿಂದ ರಫೇಲ್‌ ವಿಮಾನದಲ್ಲಿ ಬರಲಿದ್ದಾರೆ ಕರುನಾಡ ವಿದ್ಯಾರ್ಥಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts