More

    ಅಶ್ರಫ್ ಚೌಧರಿ ನೆರವಿಗೆ ಧಾವಿಸಿದ ದಿಗ್ಗಜ ಸಚಿನ್​ ತೆಂಡುಲ್ಕರ್​

    ಮುಂಬೈ: ದಿಗ್ಗಜ ಸಚಿನ್​ ತೆಂಡುಲ್ಕರ್​, ನಾಯಕ ವಿರಾಟ್​ ಕೊಹ್ಲಿ ಸೇರಿದಂತೆ ರಾಷ್ಟ್ರೀಯ ತಂಡದ ಬಹುತೇಕ ಸದಸ್ಯರಿಗೆ ಬ್ಯಾಟ್​ ಫಿಕ್ಸ್​ ಮಾಡಿಕೊಡುತ್ತಿದ್ದ ಅಶ್ರಫ್ ಚೌಧರಿ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದೆ. ಸೋಮವಾರವಷ್ಟೇ ನಟ ಸೋನು ಸೂದ್​ ನೆರವಿಗೆ ಧಾವಿಸಿದ್ದರು. ಇದೀಗ ದಿಗ್ಗಜ ಸಚಿನ್​ ತೆಂಡುಲ್ಕರ್​ ಕೂಡ ನೆರವಾಗಿದ್ದಾರೆ. ಮದುಮೇಹದಿಂದ ಬಳಲುತ್ತಿರುವ ಅಶ್ರಫ್ ಆಸ್ಪತ್ರೆಗೆ ಸೇರ್ಪಡೆಯಾಗಿದ್ದು, ಆಥಿರ್ಕವಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಶ್ರಫ್ ಮಿತ್ರ ಪ್ರಶಾಂತ್​ ಹಂಚಿಕೊಂಡಿದ್ದರು.

    ಇದನ್ನೂ ಓದಿ: ಕ್ರಿಕೆಟ್​ನಲ್ಲಿ 24 ಸಾವಿರ ರನ್, 66ನೇ ಶತಕ ಪೂರೈಸಿದ ಅಲಸ್ಟೈರ್ ಕುಕ್

    ಕ್ರಿಕೆಟ್​ ವಲಯದಲ್ಲಿಅಶ್ರಫ್ ಚಾಚಾ ಎಂದೇ ಕರೆಸಿಕೊಳ್ಳುವ ಅಶ್ರಫ್, ಕಳೆದ 12 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿನ್​ ತೆಂಡುಲ್ಕರ್​, ಚಾಚಾ ಜತೆ ಮಾತನಾಡಿದ್ದು, ಹಣಕಾಸಿನ ನೆರವು ನೀಡುವುದಾಗಿ ತಿಳಿಸಿದ್ದಾರೆ. ದಿಗ್ಗಜ ನೆರವಿನಿಂದ ಅಶ್ರಫ್​ಗೆ ಉತ್ತಮ ಚಿಕಿತ್ಸೆ ಸಿಗುವ ನಿರೀಕ್ಷೆಯಿದೆ ಎಂದು ಅಶ್ರಫ್ ಸ್ನೇಹಿತ ಪ್ರಶಾಂತ್​ ತಿಳಿಸಿದ್ದಾರೆ.

    ಇದನ್ನೂ ಓದಿ: VIDEO |ದುಬೈನಲ್ಲಿ ರೋಹಿತ್ ಶರ್ಮ ಕ್ವಾರಂಟೈನ್ ವರ್ಕ್‌ಔಟ್‌ಗೆ ಪತ್ನಿ ರಿತಿಕಾ ಸಾಥ್

    ಸಚಿನ್​ ತೆಂಡುಲ್ಕರ್​, ವಿರಾಟ್​ ಕೊಹ್ಲಿಯಂಥ ದಿಗ್ಗಜರಿಗೆ ಬ್ಯಾಟ್​ ತಯಾರಿಸಿಕೊಟ್ಟಿರುವ ಅಶ್ರಫ್ ​, ಕೋವಿಡ್​-19ರ ಲಾಕ್​ಡೌನ್​ನಿಂದಾಗಿ ಸಂಕಷ್ಟದಲ್ಲಿ ಸಿಲುಕಿದರು. ಈ ವೇಳೆ ಸಂಪೂರ್ಣ ವ್ಯಾಪಾರ ನಿಂತಿದ್ದಲ್ಲದೆ, ಆರೋಗ್ಯದ ಪರಿಸ್ಥಿತಿಯೂ ಬಿಗಡಾಯಿಸಿತ್ತು. ವಾಂಖೆಡೆಯಲ್ಲಿ ನಡೆಯಲಿರುವ ಐಪಿಎಲ್​ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಗಳಿಗೆ ಅಶ್ರಫ್ ತಪ್ಪದೇ ಹಾಜರಿರುತ್ತಾರೆ. ಕೇವಲ ಭಾರತೀಯ ಕ್ರಿಕೆಟಿಗರಲ್ಲದೆ, ವೆಸ್ಟ್​ ಇಂಡೀಸ್​ ದೈತ್ಯರಾದ ಕ್ರಿಸ್​ ಗೇಲ್​, ಕೈರಾನ್​ ಪೊಲ್ಲಾರ್ಡ್​, ಆಸೀಸ್​ ತಂಡದ ಸ್ಟೀವ್​ ಸ್ಮಿತ್​ಗೂ ಅಶ್ರಫ್ ಬ್ಯಾಟ್​ ತಯಾರಿಸಿಕೊಟ್ಟಿದ್ದಾರೆ. ಯುವ ಕ್ರಿಕೆಟಿಗರಿಗೆ ಉಚಿತವಾಗಿಯೂ ಬ್ಯಾಟ್​ ರಿಪೇರಿ ಮಾಡಿಕೊಟ್ಟಿದ್ದಾರೆ.

    ಸಚಿನ್​ ನಿವೃತ್ತಿ ಬಳಿಕ ಐಪಿಎಲ್​ ನೋಡುವುದನ್ನೇ ನಿಲ್ಲಿಸಿದ್ದಾರೆ ಈ ಮಹಿಳಾ ಕ್ರಿಕೆಟರ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts