More

    ಸಿಎಲ್​ಪಿ ಮೀಟಿಂಗ್​ಗೆ ಎರಡನೆ ಬಾರಿ ಗೈರಾದ ಸಚಿನ್ ಪೈಲಟ್​

    ಜೈಪುರ: ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ತೀವ್ರಗೊಂಡಿದ್ದು ಶಮನಗೊಳ್ಳುವ ಲಕ್ಷಣಗಳಿಲ್ಲ. ಜೈಪುರದ ಫೇರ್​​ಮೋಂಟ್​ ಹೋಟೆಲ್​ನಲ್ಲಿ ಮಂಗಳವಾರ ಆರಂಭವಾದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಎರಡನೇ ಸಭೆಗೂ ಭಿನ್ನಮತೀಯ ನಾಯಕ ಸಚಿನ್ ಪೈಲಟ್ ಗೈರಾಗಿದ್ದಾರೆ.
    ಎರಡನೇ ಸಲ ಸಭೆ ನಡೆಸುವ ಮೂಲಕ ಸಭೆಗೆ ಆಗಮನಿಸುವಂತೆ ಪೈಲಟ್ ಬಣದ ಶಾಸಕರಿಗೆ ಕಾಂಗ್ರೆಸ್ ವರಿಷ್ಠರು ಆಹ್ವಾನ ನೀಡಿದ್ದರು. ಎರಡನೇ ಸಲದ ಆಹ್ವಾನವನ್ನೂ ಅವರು ತಿರಸ್ಕರಿಸಿದರೆ ಮುಂದಿನ ಹಾದಿ ಕಠಿಣವಾಗಲಿದೆ ಎಂದೂ ಅವರು ಎಚ್ಚರಿಸಿದ್ದರು.

    ಏತನ್ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಜನರಲ್ ಸೆಕ್ರಟರಿ ಪ್ರಿಯಾಂಕಾ ಗಾಂಧಿ ವಾದ್ರಾ, ಹಿರಿಯ ನಾಯಕರಾದ ಅಹ್ಮದ್ ಪಟೇಲ್​, ಪಿ.ಚಿದಂಬರಂ, ಕೆ.ಸಿ.ವೇಣುಗೋಪಾಲ್ ಅವರು ಪೈಲಟ್​ ಜತೆಗೆ ಸಂಪರ್ಕ ಸಾಧಿಸಿದ್ದಾರೆ. ಅವರು ಪೈಲಟ್​ ಅವರ ಅಸಮಾಧಾನವನ್ನು ಕಡಿಮೆಗೊಳಿಸುವ ಪ್ರಯತ್ನದಲ್ಲಿದ್ದಾರೆ. ನಾಳೆ ಅವರು ಪಕ್ಷ ತ್ಯಜಿಸಿದರೆ, ನಾವ್ಯಾರೂ ಅವರನ್ನು ಸಂಪರ್ಕಿಸಿಲ್ಲ ಎಂದು ಆರೋಪಿಸಬಾರದಲ್ಲ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾಗಿ ವರದಿಯಾಗಿದೆ.

    ಇದನ್ನೂ ಓದಿ: ರಾಜಸ್ಥಾನ ರಾಜಕೀಯ ನಾಟಕದಲ್ಲಿ ಕ್ಷಣಕ್ಕೊಂದು ತಿರುವು; ಪತನದ ಅಂಚಿನಲ್ಲಿ ಗೆಹ್ಲೋಟ್​ ಸರ್ಕಾರ

    ಸದ್ಯದ ಪರಿಸ್ಥಿತಿ ಗಮನಿಸಿದರೆ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗರನ್ನು ಕಾಂಗ್ರೆಸ್ ನಡೆಸಿಕೊಳ್ಳುತ್ತಿರುವ ರೀತಿ ನೋಡುತ್ತಿದ್ದೇವೆ. ಅದು ಅವರ ಆಂತರಿಕ ವಿಚಾರವಾದ್ದರಿಂದ ನಾವೇನೂ ಪ್ರತಿಕ್ರಿಯಿಸುವುದಿಲ್ಲ. ಅಷ್ಟೇ ಅಲ್ಲ, ವಿಶ್ವಾಸಮತ ಎದುರಿಸಿ ಎಂದು ನಾವು ಸರ್ಕಾರವನ್ನು ಒತ್ತಾಯಿಸುವುದಿಲ್ಲ ಎಂದು ಬಿಜೆಪಿ ನಾಯಕ ಸತೀರ್ಶ್ ಪೂನಿಯಾ ಹೇಳಿದ್ದಾರೆ. (ಏಜೆನ್ಸೀಸ್​)

    ರಾಜಸ್ಥಾನ ರಾಜಕೀಯ: ಬಲ ಪ್ರದರ್ಶನಕ್ಕೆ ಸಜ್ಜಾಯಿತು ಸಚಿನ್ ಪೈಲಟ್​ ಬಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts