More

    ರಾಜಸ್ಥಾನ ರಾಜಕೀಯ: ಬಲ ಪ್ರದರ್ಶನಕ್ಕೆ ಸಜ್ಜಾಯಿತು ಸಚಿನ್ ಪೈಲಟ್​ ಬಣ

    ಜೈಪುರ: ರಾಜಸ್ಥಾನದ ಸರ್ಕಾರದ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಸಚಿನ್ ಪೈಲಟ್ ಬಣ ಬಲ ಪ್ರದರ್ಶನಕ್ಕೆ ಮುಂದಾಗಿದೆ. ಈ ಸಂಬಂಧ 16 ಶಾಸಕರು ಜತೆಗೆ ಕುಳಿತಿರುವ ವಿಡಿಯೋವನ್ನು ಸೋಮವಾರ ಈ ಬಣ ಬಿಡುಗಡೆ ಮಾಡಿದೆ.

    ಕಾಂಗ್ರೆಸ್ ಶಾಸಕಾಂಗ ಪಕ್ಷ ಸೋಮವಾರ ಸಭೆ ನಡೆಸಿದ ಬೆನ್ನಿಗೆ ಸಚಿನ್​ ಪೈಲಟ್ ಬಣ ಆ ಸಭೆಯಲ್ಲಿ 122 ಶಾಸಕರ ಪೈಕಿ 106 ಶಾಸಕರು ಹಾಜರಿದ್ದರು ಎಂದು ಸಾಬೀತುಪಡಿಸುವಂತೆ ಈ ವಿಡಿಯೋವನ್ನು ಬಿಡುಗಡೆ ಮಾಡಿತ್ತು. 10 ಸೆಕೆಂಡ್​ನ ವಿಡಿಯೋವನ್ನು ವಾಟ್ಸ್​ಆ್ಯಪ್​ ಗ್ರೂಪ್ ಮೂಲಕ ಪೈಲಟ್ ಕಚೇರಿ ಶೇರ್ ಮಾಡಿತ್ತು.

    ಇದನ್ನೂ ಓದಿ: ರಾಜಸ್ಥಾನ ರಾಜಕೀಯ ನಾಟಕದಲ್ಲಿ ಕ್ಷಣಕ್ಕೊಂದು ತಿರುವು; ಪತನದ ಅಂಚಿನಲ್ಲಿ ಗೆಹ್ಲೋಟ್​ ಸರ್ಕಾರ

    ವಿಡಿಯೋ ದೃಶ್ಯಾವಳಿ ಗಮನಿಸಿದರೆ ಅದರಲ್ಲಿ ಕನಿಷ್ಠ 16 ಶಾಸಕರು ಕುಳಿತಿರುವ ದೃಶ್ಯ ಕಾಣುತ್ತಿದೆ. ಕೆಲವರ ಗುರುತು ಸಿಗುತ್ತಿಲ್ಲ. ಗುರುತಿಸಲಾದ ಶಾಸಕರ ಪೈಕಿ ಇಂದ್ರರಾಜ್​ ಗುರ್ಜಾರ್​, ಮುಖೇಶ್ ಭಕಾರ್​, ಹರೀಶ್ ಮೀನಾ ಇದ್ದಾರೆ. ಪ್ರವಾಸಿ ಸಚಿವ ವಿರ್ಶವೇಂದ್ರ ಸಿಂಗ್ ಈ ವಿಡಿಯೋವನ್ನು ಟ್ವೀಟ್ ಮಾಡಿ ಫ್ಯಾಮಿಲಿ ಎಂಬ ಶೀರ್ಷಿಕೆ ನೀಡಿ ಗಮನಸೆಳೆದಿದ್ದಾರೆ.

    ಲಡ್​ನಾನ್​ ಶಾಶಕ ಮುಕೇಶ್ ಭಕರ್ ಕೂಡ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆ ಎಂದರೆ ಅಶೋಕ್ ಗೆಹ್ಲೋಟ್ ಅವರ ದಾಸರಂತೆ ಇರಬೇಕು. ಇದನ್ನು ಅರಗಿಸಿಕೊಳ್ಳಲಾಗದು ಎಂದು ಪ್ರತಿಕ್ರಿಯಿಸಿದ್ದಾರೆ. 2018ರ ವಿಧಾನಸಭಾ ಚುನಾವಣಾ ಗೆಲುವಿನ ನಂತರ ಮುಖ್ಯಮಂತ್ರಿ ಸ್ಥಾನ ನಿರಾಕರಿಸಿದ ಕಾರಣ ಸಚಿನ್ ಪೈಲಟ್ ಅಸಮಾಧಾನಗೊಂಡಿದ್ದರು. ಅವರ ಆಪ್ತರು ಹೇಳುವ ಪ್ರಕಾರ, ಪೈಲಟ್ ಬಿಜೆಪಿ ಸೇರುವ ಸಾಧ್ಯತೆ ಇಲ್ಲ. (ಏಜೆನ್ಸೀಸ್​)

    ರಾಜಸ್ಥಾನ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್​ ಸರ್ಕಸ್​, ಕಾದು ನೋಡುತ್ತಿರುವ ಬಿಜೆಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts