More

    ಖುದ್ದು ಸಚಿನ್​ ಪೈಲಟ್​ ನಡೆಸಿದ್ದರು ಶಾಸಕರ ಕುದುರೆ ವ್ಯಾಪಾರ; ಬಂಡಾಯಕ್ಕೆ ಕಾರಣವಾಗಿದ್ದು ಅವಮಾನವೇ?

    ಜೈಪುರ: ರಾಜಸ್ಥಾನದಲ್ಲಿ ಸದ್ಯ ಬಿರುಗಾಳಿ ಬಂದು ನಿಂತ ಅನುಭವವಾಗುತ್ತಿದೆ ಕಾಂಗ್ರೆಸ್​ ಶಾಸಕರಿಗೆ. ಆದರೆ, ಇದರಲ್ಲಿ ಗಾಳಿಗೆ ತರಗೆಲೆಯಾಗಿದ್ದು ಮಾಜಿ ಡಿಸಿಎಂ ಸಚಿನ್​ ಪೈಲಟ್​. ಅಶೋಕ್​ ಗೆಹ್ಲೋಟ್​ ಮತ್ತಷ್ಟು ಗಟ್ಟಿಯಾಗಿ ನೆಲೆಯೂರಿದ್ದಾರೆ.

    ಪ್ರದೇಶ ಕಾಂಗ್ರೆಸ್​ ಸಮಿತಿಯ ಮಾಜಿ ಅಧ್ಯಕ್ಷ (ಸಚಿನ್​ ಪೈಲಟ್​) ಬಿಜೆಪಿ ಜತೆ ಸೇರಿಕೊಂಡು ಶಾಸಕರ ಕುದುರೆ ವ್ಯಾಪಾರದಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ ನನ್ನ ಬಳಿ ದಾಖಲೆಯಿದೆ ಎಂದು ಸ್ವತಃ ಸಿಎಂ ಅಶೋಕ್​ ಗೆಹ್ಲೋಟ್​ ಸುದ್ದಿಗಾರರಿಗೆ ಹೇಳಿದ್ದಾರೆ.

    ಇದನ್ನೂ ಓದಿ; ನೀರು, ಪಿಪಿಇ ಕಿಟ್​ ಕೇಳಿದ ನರ್ಸ್​ಗಳಿಗೆ ವಾಟ್ಸ್ಯಾಪ್​​ನಲ್ಲಿಯೇ ವಜಾ ಆದೇಶ ಕಳುಹಿಸಿದ್ರು…!

    ಶಾಸಕರನ್ನು ಖರೀದಿಸುವ ಯತ್ನ ನಡೆದಿತ್ತು. ಅವರಿಗೆ ಹಣದ ಆಮಿಷ ಒಡ್ಡಲಾಗಿತ್ತು. ಇದಕ್ಕೆಲ್ಲ ದಾಖಲೆಗಳಿವೆ. ಯಾವುದೇ ಷಡ್ಯಂತ್ರ ನಡೆದಿಲ್ಲ ಎಂದು ಹೇಳಿದ್ದು ಯಾರು? ಷಡ್ಯಂತ್ರದಲ್ಲಿ ಭಾಗಿಯಾದವರೇ ಏನೂ ನಡೆದಿಲ್ಲ ಹೇಳಿಕೆ ಕೊಟ್ಟಿದ್ದರು ಎಂದು ಗೆಹ್ಲೋಟ್​ ಹೇಳಿದ್ದಾರೆ.

    ರಾಜ್ಯಸಭೆ ಚುನಾವಣೆಗೂ ಮುನ್ನ ಇಂಥದ್ದೊಂದು ಯತ್ನ ನಡೆದಾಗ ದೂರು ದಾಖಲಾಗಿತ್ತು. ಹೀಗಾಗಿ ಡಿಸಿಎಂ ಸಚಿನ್​ ಪೈಲಟ್​ಗೆ ನೋಟಿಸ್​ ನೀಡಲಾಗಿತ್ತು. ಅಂಥದ್ದೊಂದು ನೋಟಿಸ್​ ಸಿಕ್ಕಿದೆ ಎಂದು ಸಚಿನ್ ಪೈಲಟ್​ ಕೂಡ ಹೇಳಿದ್ದರು. ಈ ಬೆಳವಣಿಗೆಯಿಂದ ಅವಮಾನಕ್ಕೊಳಗಾಗಿ ಸಿಎಂ ಗೆಹ್ಲೊಟ್​ ವಿರುದ್ಧ ಸಚಿನ್​ ಪೈಲಟ್​ ಬಂಡಾಯವೆದ್ದರು. ಬೆಂಬಲಿಗ ಶಾಸಕರನ್ನು ಸೇರಿಸಿಕೊಂಡು ದೆಹಲಿಯಲ್ಲಿ ಬೀಡು ಬಿಟ್ಟರು. ಮುಂದಿನದೀಗ ಇತಿಹಾಸವಾಗಿದೆ.

    ಇದನ್ನೂ ಓದಿ; ಪುರುಚ್ಚಿ ತಲೈವಿ ಜಯಲಲಿತಾ ಮನೆ ಸ್ಮಾರಕವಾಗಲ್ಲ; ಹಾಗಿದ್ದರೆ ಬಳಕೆಯಾಗೋದಾದರೂ ಯಾವುದಕ್ಕೆ?

    ಡಿಸಿಎಂ ಹಾಗೂ ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಸಚಿನ್​ ಪೈಲಟ್​, ಬಿಜೆಪಿ ಸೇರಲು ನಿರ್ಧರಿಸಿಲ್ಲ. ನಾನಿನ್ನೂ ಕಾಂಗ್ರೆಸ್​ ತೊರೆದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

    ರಾಹುಲ್​ ಗಾಂಧಿ ಜತೆಗೆ ಅಪ್ತ ವಲಯದಲ್ಲಿ ಸಚಿನ್​ ಗುರುತಿಸಿಕೊಂಡಿದ್ದರು. ಸ್ವತಃ ರಾಹುಲ್​ ಗಾಂದಿ ಕೂಡ ಪಕ್ಷ ಬಿಟ್ಟು ಹೋಗುವವರು ಹೋಗಲಿ ಎಂದು ಹೇಳಿರುವುದು ಪೈಲಟ್​ಗೆ ಮತ್ತೊಂದು ಹೊಡೆತ ನೀಡಿದಂತಾಗಿದೆ.

    ಸಚಿನ್​ ಪೈಲಟ್​ ತಲೆದಂಡಕ್ಕೆ ಕಾರಣವಾದ ಮೂರು ಬೇಡಿಕೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts