More

    ಎಚ್ಚರಿಕೆ ಹೊರತಾಗಿಯೂ ತಮ್ಮದೇ ಸರ್ಕಾರದ ವಿರುದ್ಧ ಉಪವಾಸ ಕುಳಿತ ಸಚಿನ್​ ಪೈಲಟ್​; ಶಿಸ್ತು ಕ್ರಮ ಸಾಧ್ಯತೆ

    ಜೈಪುರ: ರಾಜಸ್ಥಾನ ಕಾಂಗ್ರೆಸ್​ನಲ್ಲಿ ದಿನದಿಂದ ಆಂತರಿಕ ಬಂಡಾಯ ಹೆಚ್ಚುತ್ತಿದ್ದು ತಮ್ಮದೇ ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಸಚಿನ್​ ಪೈಲಟ್​ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

    ಜೈಪುರದ ಶಹೀದ್​ ಸ್ಮಾರಕದಲ್ಲಿ ಪ್ರತಿಭಟನೆ ನಡೆಸುತ್ತಿರುವ ಅವರು ತಮ್ಮ ಬದ್ಧ ವೈರಿ ಅಶೋಕ್​ ಗೆಹ್ಲೋಟ್​ ಅವರನ್ನು ಈ ಮೂಲಕ ಸಿಕ್ಕಿಹಾಕಿಸಿ ಹೈಕಮಾಂಡಿಗೆ ಸಂದೇಶ ರವಾನೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

    ಭ್ರಷ್ಟಾಚಾರ ಆರೋಪ

    ಇನ್ನು ರಾಜಸ್ಥಾನದ ಮಾಜಿ ಸಿಎಂ ಬಿಜೆಪಿ ನಾಯಕಿ ವಸುಂಧರಾ ರಾಜೆ ಮುಖ್ಯಮಂತ್ರಿ ಆಗಿದ್ದ ವೇಳೆ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಧು ಸಚಿನ್​ ಪೈಲಟ್​ ಆರೋಪಿಸಿದ್ದರು. ಈ ಕುರಿತು ತನಿಖೆಗೆ ಆದೇಶಿಸಬೇಕು ಎಂದು ಮುಖ್ಯಮಂತ್ರಿ ಗೆಹ್ಲೋಟ್​ ಮೇಲೆ ಒತ್ತಡ ಹೇರಿದ್ದರು.

    ಇನ್ನು ಸಚಿನ್​ ಪೈಲಟ್​ ಮಾಡಿರುವ ಭ್ರಷ್ಟಾಚಾರ ಆರೋಪಗಳ ಕುರಿತು ಗೆಹ್ಲೋಟ್​ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ ಮತ್ತು ತನಿಖೆಗೆ ಆದೇಶಿಸಲು ನಿರಾಸಕ್ತಿ ತೋರುತ್ತಿದ್ದಾರೆ ಎಂದು ವರದಿಯಾಗಿದೆ.

    Sachin Pilot

    ಇದನ್ನೂ ಓದಿ: ಅಂದುಕೊಂಡಿದ್ದನ್ನು ಮಾಡುತ್ತೇನೆ ಅಂತ ಬೆತ್ತಲೆ ಫೋಟೋ ಶೇರ್​ ಮಾಡಿದ ಜೇಮ್ಸ್​ ಬಾಂಡ್​ ನಟಿ!

    ಕಠಿಣ ಕ್ರಮದ ಎಚ್ಚರಿಕೆ

    ಇನ್ನು ಸಚಿನ್​ ಪೈಲಟ್​ ಉಪವಾಸ ಸತ್ಯಾಗ್ರಹ ಕುರಿತು ಪ್ರತಿಕ್ರಿಯಿಸಿರುವ ರಾಜಸ್ಥಾನ ಕಾಂಗ್ರೆಸ್​ ಉಸ್ತುವಾರಿ ಸುಖ್ಜಿಂದರ್​ ಸಿಂಗ್​ ರಾಂಧಾವ ಇದು ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿದ್ದು ಈ ರೀತಿಯ ವಿಚಾರಗಳನ್ನು ಪಕ್ಷದ ವೇದಿಕೆಗಳಲ್ಲಿ ಚರ್ಚಿಸಬೇಕು. ಇಂತಹ ವಿಚಾರವನ್ನು ಮಾಧ್ಯಮ ಹಾಗೂ ಸರ್ವಾಜನಿಕರ ಮುಂದೆ ಹೇಳುವುದು ಸರರಿಯಾದ ನಡೆಯಲ್ಲ.

    ನಾನು ಕಳೆದ ಕೆಲ ತಿಂಗಳಿನಿಂದ ರಾಜಸ್ಥಾನ ಕಾಂಗ್ರೆಸ್​ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಈ ಬಗ್ಗೆ ಪೈಲಟ್​ ಅವರು ಎಂದಿಗೂ ನನ್ನ ಬಳಿ ಚರ್ಚಿಸಿಲ್ಲ. ಅವರು ಈಗಲೂ ಕೂಡ ನಮ್ಮ ಜೊತೆ ಚರ್ಚಿಸುವ ಬದಲು ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡರೆ ಪಕ್ಷಕ್ಕೆ ಹೆಚ್ಚು ನಷ್ಟವಾಗುತ್ತದೆ ಎಂದು ಹೇಳಿದ್ದಾರೆ.

    ಒತ್ತಡ ಹೇರುವ ಯತ್ನ

    ಇನ್ನು ಸಚಿನ್​ ಪೈಲಟ್​ ತಮ್ಮದೇ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡುತ್ತಿರುವುದು ಕಾಂಗ್ರೆಸ್​ ಪಕ್ಷವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ್ದು ನಾಯಕತ್ವ ಬದಲಾವಣೆ ಕುರಿತು ವರಿಷ್ಠರಿಗೆ ಈ ಮೂಲಕ ಒತ್ತಡ ಹೇರಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

    ವರ್ಷಾಂತ್ಯದಲ್ಲಿ ವಿಧಾನಸಭೆ ಚುಣಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಕಳೆದ ಕೆಲವು ವರ್ಷಗಳಿಂದ ನಾಯಕತ್ವ ಬದಲಾವಣೆ ಕೂಗು ಜೋರಾಗಿ ಕೇಳಿ ಬರುತ್ತಿದ್ದು ಕಾಂಗ್ರೆಸ್ ಪಕ್ಷ ಹೇಗೆ ಡ್ಯಾಮೇಜ್ ಕಲಂಟ್ರೋಲ್​ ಮಾಡಲಿದೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts