More

    ಸಚ್ಚಿದಾನಂದ ಸ್ವಾಮೀಜಿಗೆ ರಾಜ್ಯಪಾಲರಿಂದ ಯೋಗರತ್ನ ಪ್ರಶಸ್ತಿ ಪ್ರದಾನ

    ಬೆಂಗಳೂರು: ಯೋಗ ನಮ್ಮ ಭಾರತೀಯ ಸಂಸ್ಕೃತಿಯ ಒಂದು ಭಾಗ. ಈ ಸಂಸ್ಕೃತಿಯನ್ನು ಉಳಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

    ನಗರದ ಜಯಮಹಲ್ ರಸ್ತೆಯಲ್ಲಿನ ಚಾಮರವರ್ಜ್ ಸಭಾಂಗಣದಲ್ಲಿ ಶ್ವಾಸ ಯೋಗ ಸಂಸ್ಥೆ ಆಯೋಜಿಸಿದ್ದ ಸಮಾರಂಭಧಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ಯೋಗ ರತ್ನ ಪ್ರಶಸ್ತಿ-2022 ಪ್ರದಾನ ಮಾಡಿ ಅವರು ಮಾತನಾಡಿದರು.

    ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಮಾರ್ಗದರ್ಶಿ ಎಂದು ಹಲವು ವರ್ಷಗಳಿಂದ ಪರಿಗಣಿಸಲಾಗಿದೆ. ಮಾನವಕುಲವು ಈಗ ತನ್ನ ಜೀವನದ ಶ್ರೇಷ್ಠತೆಯ ಉತ್ತುಂಗದಲ್ಲಿ ಯೋಗದ ಮೂಲಕ ಮಾತ್ರ ಮುಂದುವರಿಯಬಹುದು, ಆದ್ದರಿಂದ ಯೋಗದ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

    ಯೋಗ ಕೇವಲ ವ್ಯಾಯಾಮವಲ್ಲ, ಯೋಗ ವಿಜ್ಞಾನದ ಒಂದು ರೂಪವಾಗಿದೆ. ಪ್ರಪಂಚದಾದ್ಯಂತ ಯೋಗದ ಮಹತ್ವವನ್ನು ಹರಡಲು ಶ್ವಾಸ ಯೋಗ ಸಂಸ್ಥೆ ಕಳೆದ ಒಂದು ದಶಕದಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಕೆಲವು ವರ್ಷಗಳ ಹಿಂದೆ ಯೋಗಕ್ಕೆ ಆಯುರ್ವೇದ ರೂಪದಲ್ಲಿ ಮಾತ್ರ ಪ್ರಾಮುಖ್ಯತೆ ನೀಡಲಾಗುತ್ತಿತ್ತು, ಆದರೆ ಪ್ರಸ್ತುತ ಸಮಯದಲ್ಲಿ, ಯೋಗಕ್ಕೆ ವೈಜ್ಞಾನಿಕವಾಗಿಯೂ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ವಚನಾನಂದ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

    ರಾಜ್ಯಸಭೆ ‘ಅಡ್ಡ’ಪರಿಣಾಮ: ಶಾಸಕರ ತಿಥಿ ಪೋಸ್ಟರ್​ಗೆ ಪ್ರತಿಯಾಗಿ ಮಾಜಿ ಸಿಎಂ ಕೈಲಾಸ ಸಮಾರಾಧನೆ ಪೋಸ್ಟರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts