More

    ಪೂನಂ ರಾವತ್ ಶತಕ ವ್ಯರ್ಥ, ಭಾರತದ ಮಹಿಳೆಯರಿಗೆ ಸರಣಿ ಸೋಲು

    ಲಖನೌ: ಪೂನಂ ರಾವತ್ (104*ರನ್, 123 ಎಸೆತ, 10 ಬೌಂಡರಿ) ಅಜೇಯ ಶತಕದ ಹೊರತಾಗಿಯೂ ಭಾರತ ತಂಡ ಮಹಿಳೆಯರ ಏಕದಿನ ಸರಣಿಯ 4ನೇ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 7 ವಿಕೆಟ್‌ಗಳಿಂದ ಸೋಲು ಕಂಡಿದೆ. ಇದರಿಂದ 5 ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 1-3ರಿಂದ ಸೋಲು ಅನುಭವಿಸಿರುವ ಮಿಥಾಲಿ ರಾಜ್ ಪಡೆ, 2022ರ ಏಕದಿನ ವಿಶ್ವಕಪ್ ಸಿದ್ಧತೆಯಲ್ಲಿ ದೊಡ್ಡ ಹಿನ್ನಡೆ ಎದುರಿಸಿದೆ.

    ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ 4 ವಿಕೆಟ್‌ಗೆ 266 ರನ್ ಪೇರಿಸಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ, ಲೈಜೆಲ್ ಲೀ (69), ನಾಯಕಿ ಲೌರಾ ವೊಲ್ವರ್ಡ್ (53), ಲಾರಾ ಗುಡಾಲ್ (59*) ಮತ್ತು ಮಿಗಾನ್ ಡು ಪ್ರೀಜ್ (61) ಅರ್ಧಶತಕಗಳ ನೆರವಿನಿಂದ 48.4 ಓವರ್‌ಗಳಲ್ಲಿ 3 ವಿಕೆಟ್‌ಗೆ 269 ರನ್ ಗಳಿಸಿ ಜಯಭೇರಿ ಬಾರಿಸಿತು. ಸರಣಿಯ 5ನೇ ಹಾಗೂ ಅಂತಿಮ ಪಂದ್ಯ ಬುಧವಾರ ನಡೆಯಲಿದೆ.

    ಇದನ್ನೂ ಓದಿ: ಭರತನಾಟ್ಯ ತ್ಯಜಿಸಿ ಕ್ರಿಕೆಟ್‌ಗೆ ಬಂದ ಮಿಥಾಲಿ ರಾಜ್ ಈಗ 10 ಸಾವಿರ ರನ್‌ಗಳ ರಾಣಿ!

    ಭಾರತ: 4 ವಿಕೆಟ್‌ಗೆ 266 (ಪ್ರಿಯಾ ಪೂನಿಯಾ 32, ಸ್ಮತಿ 10, ಪೂನಂ ರಾವತ್ 104*, ಮಿಥಾಲಿ ರಾಜ್ 45, ಹರ್ಮಾನ್‌ಪ್ರೀತ್ 54, ದೀಪ್ತಿ ಶರ್ಮ 8*, ಸೆಖುಖುನ್ 63ಕ್ಕೆ 2, ಶಬ್ನಿಮ್ 50ಕ್ಕೆ 1, ಶಂಗಸೆ 41ಕ್ಕೆ 1). ದಕ್ಷಿಣ ಆಫ್ರಿಕಾ: 48.4 ಓವರ್‌ಗಳಲ್ಲಿ 3 ವಿಕೆಟ್‌ಗೆ 269 (ಲೈಜೆಲ್ ಲೀ 69, ವೊಲ್ವರ್ಡ್ 53, ಗುಡಾಲ್ 59*, ಪ್ರೀಜ್ 61, ಕಾಪ್ 22*, ಮಾನ್ಸಿ 43ಕ್ಕೆ 1, ರಾಜೇಶ್ವರಿ ಗಾಯಕ್ವಾಡ್ 39ಕ್ಕೆ 1, ಹರ್ಮಾನ್‌ಪ್ರೀತ್ 38ಕ್ಕೆ 1).

    ಯಾರೀ ಸುಂದರಿ? ಟಿ20 ಪಂದ್ಯದ ಸೋಲಿನ ನೋವು ಮರೆಸಿದ ಬ್ಯೂಟಿ ಹಿಂದೆ ಬಿದ್ದ ನೆಟ್ಟಿಗರು!

    ಇಂದು ಭಾರತ- ಇಂಗ್ಲೆಂಡ್ ಎರಡನೇ ಟಿ20 ಕದನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts