More

    ಜಿಂದಾಲ್‌ ಸಂಸ್ಥೆಗೆ 3667 ಎಕರೆ ಜಮೀನು ಮಂಜೂರು: ಸಚಿವ ಸಂಪುಟದಲ್ಲಿ ತಡೆ- ಭಾರಿ ವಿವಾದಕ್ಕೆ ತೆರೆ

    ಬೆಂಗಳೂರು: ಜಿಂದಾಲ್‌ ಸಂಸ್ಥೆಗೆ 3667 ಎಕರೆ ಮಂಜೂರು ಮಾಡಲಾಗಿದ್ದ ತಿರ್ಮಾನದಿಂದ ಹಿಂದೆ ಸರಿದಿರುವ ಸರ್ಕಾರ, ಈ ಪ್ರಕರಣವನ್ನು ಯಥಾ ಸ್ಥಿರ ಕಾಪಾಡಿಕೊಳ್ಳಲು ನಿರ್ಣಯಿಸಿದೆ.
    ಕಡಿಮೆ ಬೆಲೆಗೆ ಭೂಮಿ ಮಂಜೂರು ಮಾಡಲಾಗಿದೆ ಎನ್ನುವ ದೂರು ಮತ್ತು ಕಿಕ್ ಬ್ಯಾಕ್ ಲಂಚ ಆರೋಪ ಕೇಳಿಬಂದಿತ್ತು.

    ಭೂ ವಿವಾದ ಬಗ್ಗೆ ಸ್ವಪಕ್ಷೀಯ ಶಾಸಕರು ದೆಹಲಿಗೆ ದೂರು ನೀಡಿದ್ದರು. ವರಿಷ್ಠರ‌ ಸೂಚನೆ ಮೇರೆಗೆ ಇಂದು ನಡೆದ ಸಚಿವ ಸಂಪುಟದಲ್ಲಿ ಚರ್ಚೆ ನಡೆದು, ಜಿಂದಾಲ್ ಭೂಮಿ ಸ್ಥಿರೀಕರಣ ಮಾಡದೆ ಇರಲು ನಿರ್ಧರಿಸಲಾಗಿದೆ.

    ಜಿಂದಾಲ್ ಸಂಸ್ಥೆಗೆ ಸರ್ಕಾರ ಸುಮಾರು 3,667 ಎಕರೆ ಭೂಮಿಯನ್ನು ಹಸ್ತಾಂತರ ಮಾಡಿರುವ ಕ್ರಮದ ವಿರುದ್ಧ ವಕೀಲ ದೊರೆರಾಜು ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.

    ಸರ್ಕಾರಿ ಜಮೀನನ್ನು ಖಾಸಗಿ ಸಂಸ್ಥೆಗೆ ನೀಡುವ ವಿಚಾರ ಸಂಬಂಧ ಸುದೀರ್ಘ ಚರ್ಚೆ ನಡೆಸದೆ ತರಾತುರಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿರುವುದಾಗಿ ಆರೋಪಿಸಲಾಗಿತ್ತು. ಈ ರೀತಿ ಭೂಮಿ ಹಸ್ತಾಂತರಿಸಿರುವುದು ಕಾನೂನು ಬಾಹಿರವಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಜಿಂದಾಲ್ ಸಂಸ್ಥೆ ಈ ಹಿಂದೆ ಸೌತ್ ವೆಸ್ಟ್ ಕಂಪನಿ ಮೂಲಕ ನಡೆಸಿದ ಗಣಿಗಾರಿಕೆಯಿಂದ ರಾಜ್ಯ ಸರ್ಕಾರಕ್ಕೆ ರೂ.1078 ಕೋಟಿ ರೂಪಾಯಿ ನಷ್ಟವಾಗಿರುವ ಬಗ್ಗೆ ಲೋಕಾಯುಕ್ತ ವರದಿ ನೀಡಿದ್ದರೂ ಪರಭಾರೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಪ್ರಕರಣ ಹೈಕೋರ್ಟ್‌ ಮೆಟ್ಟಿಲು ಕೂಡ ಏರಿತ್ತು.

    ಅವರಪ್ಪನಿಂದಲೂ ಬಂಧಿಸಲು ಸಾಧ್ಯವಿಲ್ಲ- ‘ಮೂರ್ಖರ ವಿಜ್ಞಾನ’ದ ಪ್ರತಿಭಟನೆಗೆ ಬಾಬಾ ರಾಮ್‌ದೇವ್‌ ಪ್ರತಿಕ್ರಿಯೆ

    ಉಸಿರಾಟದ ಸಮಸ್ಯೆ ಇದ್ದರೂ ರಜೆ ಕೊಟ್ಟಿಲ್ಲವೆಂದು ಆಕ್ಸಿಜನ್‌ ಸಿಲಿಂಡರ್‌ ಸಹಿತ ಬ್ಯಾಂಕ್‌ಗೆ ಬಂದ ಉದ್ಯೋಗಿ!

    ಹೀಗೂ ಇರ್ತಾರೆ! ತಲೆಬುರುಡೆ ಓಪನ್‌ ಮಾಡಿ ಕತ್ತರಿ ಹಾಕಿದರೂ ಜೋಕ್‌ ಮಾಡುತ್ತಿದ್ದ ರೋಗಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts