More

    ವಿಮಾ ಹಣ ಪಡೆಯಲು ಕೈಯನ್ನೇ ತುಂಡರಿಸಿಕೊಂಡಳು! ಆದರೆ ಆದದ್ದೇ ಬೇರೆ…

    ಸ್ಲೋವಿಯಾ: ಹಣ ಗಳಿಸುವುದಕ್ಕಾಗಿ ಏನೆಲ್ಲಾ ನಾಟಕವಾಡುವುದನ್ನು, ಎಷ್ಟೊಂದು ಪರಿಯ ಮೋಸ-ವಂಚನೆ ಮಾಡಿರುವುದನ್ನು ನೋಡುತ್ತಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ಹಣಕ್ಕಾಗಿ ತನ್ನ ಕೈಯನ್ನೇ ತುಂಡರಿಸಿಕೊಳ್ಳುವುದಾ?

    ಇಂಥದ್ದೊಂದು ಭಯಾನಕ ಕೃತ್ಯಕ್ಕೆ ಕೈಹಾಕಿದವಳು ಸ್ಲೊವೇನಿಯಾದ ಜೂಲಿಜಾ ಆಡ್ಲೆಸಿಕ್ ಎಂಬಾಕೆ. ಅಷ್ಟಕ್ಕೂ ಈಕೆ ಹೀಗೆ ಮಾಡಲು ಕಾರಣ, ವಿಮಾ ಕಂಪೆನಿಯಿಂದ ಹಣವನ್ನು ಪಡೆದುಕೊಳ್ಳಲು! ಹರಿತವಾದ ಗರಗಸದಿಂದ ತನ್ನ ಎಡಗೈಯನ್ನು ಭಾಗಶಃ ತುಂಡರಿಸಿಕೊಂಡಿದ್ದಾಳೆ!

    ಶಾಶ್ವತ ಅಂಗವೈಕಲ್ಯವಾದರೆ ಹಣ ಸಿಗುವ ಸಂಬಂಧ ಐದು ವಿವಿಧ ವಿಮಾ ಕಂಪೆನಿಗಳಲ್ಲಿ ಈಕೆ ಕಳೆದ ವರ್ಷ ವಿಮೆ ಮಾಡಿಸಿದ್ದರು. ಈ ಐದೂ ಕಂಪೆನಿಗಳಿಂದ ಹಣ ಪಡೆದುಕೊಳ್ಳಲು ಇಂಥದ್ದೊಂದು ಕೃತ್ಯ ಎಸಗಿದ್ದಾಳೆ 22 ವರ್ಷದ ಜೂಲಿಜಾ.

    ಈಕೆಯ ಪ್ಲ್ಯಾನ್​ ಏನಾದರೂ ಸರಿಯಾಗಿ ಕೆಲಸ ಮಾಡಿದ್ದರೆ, ಇವರಿಗೆ ಒಂದು ಮಿಲಿಯನ್​ ಯೂರೋ (ಸುಮಾರು 8.70 ಕೋಟಿ ರೂಪಾಯಿ) ವಿಮೆ ಹಣ ಸಿಗುತ್ತಿತ್ತು. ಇದಕ್ಕೆ ವರ್ಷದ ಹಿಂದೆಯೇ ಈಕೆ ಪ್ಲ್ಯಾನ್​ ಮಾಡಿದ್ದಳು. ಇಷ್ಟು ಹಣವನ್ನು ಪಡೆದುಕೊಂಡರೆ ಮುಂದಿನ ಜೀವನವನ್ನು ಆರಾಮಾಗಿ ಕಳೆಯಬಹುದು ಎಂದು ಈಕೆ ಯೋಜನೆ ರೂಪಿಸಿದ್ದರು. ತನ್ನ ಗೆಳೆಯ ಮತ್ತು ತಾನು ಆರಾಮಾಗಿ ಇರಬಹುದು ಎಂದುಕೊಂಡಿದ್ದ ಜೂಲಿಜಾನ ಇಂಥ ಘೋರ ಕೃತ್ಯಕ್ಕೆ ಗೆಳೆಯ ಕೂಡ ಸಾಥ್​ ನೀಡಿದ್ದ. ಕೈಯನ್ನು ತುಂಡರಿಸಿಕೊಳ್ಳಲು ಅನುಮತಿ ನೀಡಿದ್ದ ಈತ.

    ಇದನ್ನೂ ಓದಿ: ನಿನ್ನ ಬಿಟ್ಟು ಅರೆ ಕ್ಷಣ ಇರಲಾರೆ ಎಂದಾಕೆ ಕಾಲ್​ ಮಾಡಿದ್ರೂ ಸ್ವೀಕರಿಸಿಲ್ಲ ಎಂದು ಈತ ಹೀಗೆ ಮಾಡೋದಾ?

    ಆದರೆ ಇವರ ಪ್ಲ್ಯಾನ್​ ಫ್ಲಾಪ್​ ಆಗಿಹೋಗಿದೆ. ವಿಮೆ ಹಣ ಪಡೆಯುವುದಕ್ಕಾಗಿ ಈ ರೀತಿ ಮಾಡಲಾಗಿದೆ ಎಂದು ವಿಮಾ ಕಂಪೆನಿಗೆ ತಿಳಿದು, ಅದು ಕೋರ್ಟ್​ ಕೇಸ್​ ಹಾಕಿದೆ. ಇದು ಕಾನೂನುಬಾಹಿರ ಎಂದಿರುವ ಕೋರ್ಟ್​ ಜೂಲಿಜಾಳಿಗೆ ಎರಡು ವರ್ಷಗಳ ಶಿಕ್ಷೆ ನೀಡಿದೆ. ಈಕೆಯ ಕೈ ಕತ್ತರಿಸಿಕೊಳ್ಳಲು ಕುಮ್ಮಕ್ಕು ನೀಡಿರುವ ಗೆಳೆಯನಿಗೆ ಮೂರು ವರ್ಷ ಶಿಕ್ಷೆಯಾಗಿದೆ.

    ಕೈಯನ್ನು ತುಂಡರಿಸಿಕೊಳ್ಳುವ ಮುನ್ನ, ಕೃತಕ ಕೈಯನ್ನು ಜೋಡಿಸಿದರೆ ಅದು ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಈ ಜೋಡಿ ಇಂಟರ್​ನೆಟ್​ನಲ್ಲಿ ಹುಡುಕಾಡಿರುವುದನ್ನು ವಕೀಲರು ಕೋರ್ಟ್​ ಗಮನಕ್ಕೆ ತಂದರು.ಮಾತ್ರವಲ್ಲದೇ, ಕೈ ತುಂಡಾದ ತಕ್ಷಣ ಅದನ್ನು ಜೋಡಿಸಲು ಆಸ್ಪತ್ರೆಗೆ ಕೊಂಡೊಯ್ಯುವ ಬದಲು, ಆಸ್ಪತ್ರೆಯಿಂದ ಶಾಶ್ವತ ಅಂಗವೈಕಲ್ಯ ಎನ್ನುವ ಸರ್ಟಿಫಿಕೇಟ್​ ಪಡೆದುಕೊಳ್ಳಲು ಮನೆಯಲ್ಲಿಯೇ ಅದನ್ನು ಬಿಟ್ಟು ಹೋಗಲಾಗಿತ್ತು. ಇವೆಲ್ಲ ಸಾಕ್ಷ್ಯಾಧಾರಗಳು ಆಕೆಯನ್ನು ಅಪರಾಧಿ ಎಂದು ಮಾಡಿದೆ.

    ಆಪರೇಷ್​ ಮೂಲಕ ಕೈಯನ್ನು ಜೋಡಿಸಲಾಗಿದೆ. ಆದರೆ ಒಂದೆಡೆ ನೋವು, ಪರಿಹಾರವೂ ಇಲ್ಲ, ಸಾಲದು ಎಂಬುದಕ್ಕೆ ಜೈಲಿನಲ್ಲಿ ಕಳೆಯುವಂತಾಗಿರುವುದಕ್ಕೆ ಯುವತಿ ಪಶ್ಚಾತ್ತಾಪ ಪಡುತ್ತಿದ್ದಾಳೆ.

    ಮುಂಬೈ ಸ್ಫೋಟಕ್ಕೆ 12 ವರ್ಷ- ಪಾಕ್​ಗೆ ಭಾರತ, ಅಮೆರಿಕದಿಂದ ಸವಾಲು-ಪೇಚಲ್ಲಿ ಇಮ್ರಾನ್​

    ಬಂಜೆತನಕ್ಕೆ ಉಡದ ಜನನಾಂಗ ಔಷಧವಂತೆ!- ಕಳ್ಳಸಾಮಿ ಸಣ್ಣ ಈರಪ್ಪ ಪೊಲೀಸ್ ಬಲೆಗೆ

    ಕಿತ್ತಳೆ ಬಣ್ಣಕ್ಕೆ ತಿರುಗಿದೆ ಅಮೆರಿಕದ ಆಗಸ: ಹಗಲಲ್ಲೂ ಕತ್ತಲು! ಒಬಾಮಾ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts