More

    ಪಾಕ್‌ನ ಅತ್ಯಾಧುನಿಕ ಯುದ್ಧವಿಮಾನ ಪ್ರಾಣ ಪಣಕ್ಕಿಟ್ಟು ಹೊಡೆದುರುಳಿಸಿದ ಧೀರ ಪುತ್ರನಿಗೆ ‘ವೀರ ಚಕ್ರ ಪ್ರಶಸ್ತಿ’ ಪ್ರದಾನ

    ನವದೆಹಲಿ: 2019 ಫೆಬ್ರವರಿ 26ರಂದು ಬಾಲಾಕೋಟ್‌ ವಾಯುದಾಳಿಯನ್ನು ಯಾರೂ ಮರೆಯುವುದಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಂಥ ಘನಘೋರ ಕಾಳಗವದು. ಆ ಸಂದರ್ಭದಲ್ಲಿ ಅಭಿನಂದನ್‌ ಅವರು ಪಾಕಿಸ್ತಾನದ ಎಫ್ -16 (F-16) ಯುದ್ಧ ವಿಮಾನವನ್ನು ಹೊಡೆದುರುಳಿಸಲು ಯಶಸ್ವಿಯಾಗಿದ್ದರು. ಆದರೆ ಅಚಾನಕ್ಕಾಗಿ ಅವರು ಪಾಕಿಸ್ತಾನದ ನೆಲದ ಮೇಲೆ ಹೋಗಿ ಬಿದ್ದರು.

    ಪಾಕಿಸ್ತಾನದ ಸೈನಿಕರ ಕೈಗೆ ಸಿಲುಕಿದ್ದ ವರ್ಧಮಾನ್‌ ಅವರ ದೇಹ ರಕ್ತಸಿಕ್ತವಾಗಿತ್ತು. ಸೈನಿಕರು ಇವರನ್ನು ಹಿಡಿದು ಚಿತ್ರಹಿಂಸೆಯನ್ನೂ ಕೊಟ್ಟಿದ್ದು ಮಾತ್ರವಲ್ಲದೇ ಈ ಸಂಬಂಧ ವಿಡಿಯೋ ಒಂದನ್ನು ಬಿಡುಗಡೆ ಮಾಡಿತ್ತು. ಆ ವಿಡಿಯೋದಲ್ಲಿ ಅಭಿನಂದನ್‌ ಅವರ ಕಣ್ಣಿಗೆ ಬಟ್ಟೆಕಟ್ಟಲಾಗಿತ್ತು. ಈ ವೇಳೆ ಪಾಕಿಸ್ತಾನದ ಸೇನಾಧಿಕಾರಿಗಳು ಕೆಲವು ಪ್ರಶ್ನೆ ಕೇಳಿದಾಗ ಅಭಿನಂದನ್‌ ತಾಳ್ಮೆಯಿಂದಲೇ ಉತ್ತರಿಸಿದ್ದುದು ಕಂಡುಬಂತ್ತು. ಆದರೆ ಪಾಕಿಸ್ತಾನದ ಮೇಲೆ ಭಾರತ ಜಾಗತಿಕವಾಗಿ ಒತ್ತಡ ಹೇರಿದ್ದರಿಂದ ಅಭಿನಂದನ್​ ಅವರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುವುದು ಪಾಕಿಸ್ತಾನಕ್ಕೆ ಅನಿವಾರ್ಯವಾಗಿತ್ತು. ಭಾರತದ ಧೀರಪುತ್ರನೊಬ್ಬ ಸುರಕ್ಷಿತವಾಗಿ ತಾಯ್ನಾಡು ಸೇರಿದ್ದರು.

    ಇವರಿಗೆ ಇಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಇಂದು ಪ್ರತಿಷ್ಠಿತ ‘ವೀರ ಚಕ್ರ ಪ್ರಶಸ್ತಿ’ ಪ್ರದಾನ ಮಾಡಿದ್ದಾರೆ. ವಿಂಗ್​ ಕಮಾಂಡರ್​ ಆಗಿದ್ದ ವರ್ತಮಾನ್ ಇತ್ತೀಚೆಗೆ ಭಾರತೀಯ ವಾಯುಪಡೆಯ ಏಸ್ ಪೈಲಟ್ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ಪಡೆದಿದ್ದರು.

    ಭಾರತೀಯ ವಾಯುಪಡೆಯಲ್ಲಿರುವ ಮಿಗ್‌-21 ವಿಮಾನಗಳು 1960ರ ದಶಕದ ಮಾಡೆಲ್‌ಗಳು. ಅವನ್ನು ಭಾರತ ಮೇಲ್ದರ್ಜೆಗೇರಿಸಿ ಇನ್ನೂ ಬಳಸುತ್ತಿದೆ. ಆದರೆ ಪಾಕಿಸ್ತಾನದ ಬತ್ತಳಿಕೆಯಲ್ಲಿರುವ ಎಫ್‌-16 ಅತ್ಯಾಧುನಿಕ ಸೌಲಭ್ಯ ಹೊಂದಿದ ವಿಮಾನಗಳು. ಅಂತಹ ವಿಮಾನವನ್ನೇ ಅಭಿನಂದನ್‌ ಅವರು ಹೊಡೆದುರುಳಿಸಿದ್ದು ಭಾರಿ ಶ್ಲಾಘನೆಗೆ ಕಾರಣವಾಗಿತ್ತು. ಪಾಕಿಸ್ತಾನದ ಅತ್ಯಾಧುನಿಕ ಎಫ್‌-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದ ಭಾರತೀಯ ವಾಯುಪಡೆಯ ಪೈಲಟ್‌ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರು ಮಾಡಿದ್ದು ವಿಶ್ವದಾಖಲೆ ಎಂದು ನಿವೃತ್ತ ವಾಯುಪಡೆ ಅಧಿಕಾರಿಗಳು ಬಣ್ಣಿಸಿದ್ದರು.

    ಮೂರನೆಯ ಮದುವೆಗೆ ಆಮೀರ್‌ ರೆಡಿ- ಅಧಿಕೃತ ಘೋಷಣೆಯೊಂದೇ ಬಾಕಿ? ಮಗಳ ವಯಸ್ಸಿನವಳಾ?

    ಏರ್‌ಟೆಲ್‌ ಗ್ರಾಹಕರಿಗೆ ಬಿಗ್‌ ಶಾಕ್‌- ಶೇ.20-25ರಷ್ಟು ಹೆಚ್ಚಾಯ್ತು ಕಾಲಿಂಗ್‌, ಡೇಟಾ ದರಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts