More

    ಅನಾಥ ಜೀಬ್ರಾದ ಮರಿಗೆ ಈತನೇ ‘ಅಮ್ಮ’- ಅದಕ್ಕಾಗಿಯೇ ಈ ವೇಷ…

    ಕೀನ್ಯಾ: ವನ್ಯಮೃಗಗಳ ರಕ್ಷಣೆಗಾಗಿ ವನ್ಯಪಾಲಕರು ಏನೆಲ್ಲಾ ಕಸರತ್ತು ಮಾಡುತ್ತಾರೆ, ಅದರಲ್ಲಿಯೂ ಪ್ರಾಣಿಗಳು ಅನಾಥವಾಗಿಬಿಟ್ಟರಂತೂ ಅವುಗಳನ್ನು ಅಪ್ಪ-ಅಮ್ಮನಂತೆ ಸಾಕುವುದೇ ದೊಡ್ಡ ಸವಾಲು.

    ಇಂಥ ಸವಾಲನ್ನು ಎದುರಿಸುತ್ತಿರುವ ಕೀನ್ಯಾದ ಶೆಲ್ಡ್ರಿಕ್ ವನ್ಯಜೀವಿ ಧಾಮದ ಸಿಬ್ಬಂದಿ, ಅನಾಥ ಜೀಬ್ರಾ ರಕ್ಷಣೆಗೆ ಸದ್ಯ ಅಮ್ಮ ಆಗಿದ್ದಾರೆ. ಈ ಜೀಬ್ರಾ ಮರಿಯ ತಾಯಿಯನ್ನು ಸಾವೊ ಈಸ್ಟ್ ನ್ಯಾಷನಲ್ ಪಾರ್ಕ್‌ನಲ್ಲಿ ಸಿಂಹವೊಂದು ಕೊಂದುಹಾಕಿದೆ. ಆಗಿನ್ನೂ ಈ ಮರಿ ತುಂಬಾ ಚಿಕ್ಕದು. ಈಗ ಅಮ್ಮನಿಲ್ಲದೇ ಮಗು ಅನಾಥವಾಗಿಬಿಟ್ಟಿದೆ.

    ಇದಕ್ಕಾಗಿಯೇ ಅಮ್ಮನಂತೆ ಬೆಳೆಸುವ ಸಂಬಂಧ ಈ ವನ್ಯಪಾಲಕ ಜೀಬ್ರಾ ಮೈಬಣ್ಣ ಹೋಲುವ ಕಪ್ಪು ಮತ್ತು ಬಿಳಿ ಪಟ್ಟೆಯ ಬಟ್ಟೆ ಧರಿಸಿ ಹೊಸ ಪ್ರಯೋಗ ಮಾಡುತ್ತಿದ್ದಾನೆ. ಈತನ ಜತೆ ಇತರ ವನ್ಯಪಾಲಕರೂ ಸೇರಿಕೊಂಡಿದ್ದಾರೆ.

    ಇದನ್ನೂ ಓದಿ: ಕೆಂಪುಕೋಟೆ ಉದ್ಯಾನದಲ್ಲಿ ಅತ್ಯಾಚಾರ- ಕಲ್ಲಿನಿಂದ ಹೊಡೆದು ಬಾಲಕಿಯ ಕಿಡ್ನಾಪ್‌!

    ಜೀಬ್ರಾ ಮೈಬಣ್ಣದ ಬಟ್ಟೆಯನ್ನು ಮುಂಜಾನೆಯಿಂದ ಸಂಜೆಯವರೆಗೂ ಧರಿಸುವ ವನ್ಯಜೀವಿ ಪಾಲಕರು ಜೀಬ್ರಾಗೆ ಅನಾಥಪ್ರಜ್ಞೆ ಕಾಡಬಾರದೆಂದು ಪ್ರಯತ್ನಿಸುತ್ತಾರೆ. ಇದೊಂದು ರೀತಿಯಲ್ಲಿ ‘ಬಾಡಿಗೆ ತಾಯಿ’ ಇದ್ದಂತೆ ಎಂದೇ ವರ್ಣಿಸಲಾಗುತ್ತಿದೆ.

    ಜೀಬ್ರಾ ಮರಿಗಳು ತಮ್ಮ ತಾಯಿಯೊಂದಿಗೆ ಬಲವಾದ ಸಂಬಂಧ ಹೊಂದಿರುತ್ತದೆ. ತಾಯಿಯ ಅನುಪಸ್ಥಿತಿಯಿಂದ ಮರಿಗೆ ಅನಾಥಪ್ರಜ್ಞೆ ಮೂಡಬಾರದೆಂದು ವನ್ಯಜೀವಿ ಪಾಲಕರು ಜೀಬ್ರಾ ಬಣ್ಣದ ಬಟ್ಟೆ ತೊಟ್ಟು ಆ ಮರಿಯೊಂದಿಗೆ ದಿನ‌ ಕಳೆಯುತ್ತಿದ್ದಾರೆ. ಹಾಲುಣಿಸಿ ತಾಯಿಯಂತೆಯೇ ಆರೈಕೆ ಮಾಡುತ್ತಿದ್ದಾರೆ ಎಂದು ಸಿಬ್ಬಂದಿ ಮಾಹಿತಿ ನೀಡುತ್ತಾರೆ.

    ದೀಪಿಕಾಗೆ ಪಾಕಿಸ್ತಾನ‌ ಲಿಂಕ್‌? ₹5 ಕೋಟಿ ಕುರಿತು ‘ರಾ’ ಅಧಿಕಾರಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts