More

    ಕೆಂಪುಕೋಟೆ ಉದ್ಯಾನದಲ್ಲಿ ಅತ್ಯಾಚಾರ- ಕಲ್ಲಿನಿಂದ ಹೊಡೆದು ಬಾಲಕಿಯ ಕಿಡ್ನಾಪ್‌!

    ನವದೆಹಲಿ: 23 ವರ್ಷದ ಯುವತಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ ಆಕೆಯನ್ನು ಕಲ್ಲಿನಿಂದ ಹೊಡೆದು, 2 ವರ್ಷದ ಮಗಳನ್ನು ಕಿಡ್ನಾಪ್‌ ಮಾಡಿಕೊಂಡು ಹೋಗಿರುವ ಘಟನೆ ದೆಹಲಿಯ ಕೆಂಪು ಕೋಟೆಯ ಉದ್ಯಾನದಲ್ಲಿ ನಡೆದಿದೆ.

    ಈ ಘಟನೆ ಕಳೆದ ಶನಿವಾರ ನಡೆದಿದೆ. ಆಗಸ್ಟ್‌ 15ರಂದು ಇಲ್ಲಿ ಸ್ವಾತಂತ್ರ್ಯಾತ್ಸವ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಯುವತಿ ರಕ್ತಸ್ರಾವವಾಗಿ ಬಿದ್ದಿದ್ದನ್ನು ಸ್ವಚ್ಛತಾ ಸಿಬ್ಬಂದಿಯೊಬ್ಬರು ನೋಡಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪೊಲೀಸರಿಗೆ ಯುವತಿ ತನ್ನನ್ನು ಅತ್ಯಾಚಾರ ಮಾಡಿ ಮಗುವನ್ನು ಅಪಹರಣ ಮಾಡಿಕೊಂಡು ಹೋಗಿರುವ ಬಗ್ಗೆ ತಿಳಿಸಿದ್ದಾಳೆ. ಕೂಡಲೇ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಗಳನ್ನು ವಾಪಸ್‌ ಕರೆತರಲಾಗಿದೆ.

    ಇದನ್ನೂ ಓದಿ: 94 ವರ್ಷದ ವೃದ್ಧೆಗೆ ಕೊಟ್ಟಿದ್ದ ಬ್ರೆಡ್ ವಾಪಸ್​ ಪಡೆದ ಬೇಕರಿ; ಹಣ ಕೊಟ್ಟರೂ ಮತ್ತೆ ಕೊಡಲಿಲ್ಲ

    ಆರೋಪಿಯು ತನಗೆ ಪರಿಚಯವಿದ್ದು, ಇನ್ನೊಂದು ಓಣಿಯಲ್ಲಿ ವಾಸವಾಗಿದ್ದಾನೆ. ನಾನು ಉದ್ಯಾನದಲ್ಲಿ ಇದ್ದ ಸಂದರ್ಭದಲ್ಲಿ ಅತ್ಯಾಚಾರ ಎಸಗಲು ಬಂದಿದ್ದ. ಅದಕ್ಕೆ ನಾನು ಪ್ರತಿರೋಧ ಒಡ್ಡಿದಾಗ ಕಲ್ಲಿನಿಂದ ಹೊಡೆದು ಅತ್ಯಾಚಾರ ಮಾಡಿದ್ದಾನೆ. ಮಗಳನ್ನು ಅಪಹರಣ ಮಾಡಿಕೊಂಡು ಹೋಗಿದ್ದಾನೆ ಎಂದು ಯುವತಿ ಮಾಹಿತಿ ನೀಡಿದ್ದಳು. ಅದರ ಅನ್ವಯ ಪೊಲೀಸರು ಆತನನ್ನು ಹೋಗಿ ಬಂಧಿಸಿದ್ದಾರೆ.

    ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸ್ ಅಧಿಕಾರಿ ಮೋನಿಕಾ ಭರದ್ವಾಜ್ ತಿಳಿಸಿದ್ದಾರೆ.

    ಜೆಎನ್‌ಯುಗೆ ಹೋದ ದೀಪಿಕಾಗೆ ಪಾಕ್‌ನಿಂದ ₹5 ಕೋಟಿ! ‘ರಾ’ ಅಧಿಕಾರಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts