More

    ದೇಶಕ್ಕಾಗಿ ಯುವಕರು ಪ್ರಾಣ ಕೊಡುವ ಅವಶ್ಯಕತೆ ಇಲ್ಲ, ಬದಲಾಗಿ ದೇಶ ಕಟ್ಟುವ ಕೆಲಸ ಮಾಡ್ಬೇಕು: ಸಿಎಂ ಬೊಮ್ಮಾಯಿ

    ಬೆಂಗಳೂರು: ದೇಶಕ್ಕಾಗಿ ಯುವಕರು ಪ್ರಾಣ ಕೊಡುವ ಅವಶ್ಯಕತೆ ಇಲ್ಲ. ಬದಲಾಗಿ ನಿಮ್ಮ ಶ್ರಮ, ಜ್ಞಾನ, ಅಭಿಮಾನ, ಗೌರವ ಮತ್ತು ಶ್ರದ್ಧೆ ಬಹಳ ಮುಖ್ಯ. ನಿಮ್ಮ ಬೆವರಿನ ಪ್ರತಿ ಹನಿ ಕೂಡ ದೇಶ ಕಟ್ಟುವ ಕೆಲಸ ಮಾಡಬೇಕು.‌ ನಾವೆಲ್ಲರು ಸ್ವಾವಲಂಬಿಗಳಾಗಬೇಕು ಎಂದು ಯುವಕರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಕರೆ ನೀಡಿದರು.

    ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಣಿಕ್​ ಷಾ ಪರೇಡ್​ ಗ್ರೌಂಡ್​ನಲ್ಲಿ ಇಂದು ಬೆಳಗ್ಗೆ ಧ್ವಜಾರೋಹಣ ನೆರವೇರಿಸಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

    ಸ್ವಾತಂತ್ರ ಸುಲಭವಾಗಿ ಬಂದಿಲ್ಲ ಎಂಬುದು ಎಲ್ಲರಿಗು ತಿಳಿದಿದೆ. ಸ್ವಾತಂತ್ರ್ಯಕ್ಕಾಗಿ ಹಲವಾರು ಹೋರಾಟಗಳು ನಡೆದಿವೆ. ಹಲವಾರು ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಬ್ರಿಟೀಷರ ಗುಂಡಿಗೆ ಬಲಿಯಾಗಿದ್ದಾರೆ. ಸುಮಾರು 150 ವರ್ಷ ಸುದೀರ್ಘ ಇತಿಹಾಸ ಹೊಂದಿರುವ ಸ್ವಾತಂತ್ರ್ಯ ಹೋರಾಟ ನಮ್ಮದು. ಈ ಸಂದರ್ಭದಲ್ಲಿ ಹವಾರು ಜನ 150 ವರಷದಿಂದ ನೇತೃತ್ವ ವಹಿಸಿದ್ದಾರೆ. ಸಾಕಷ್ಟು ತ್ಯಾಗಬಲಿದಾನದೊಂದಿಗೆ ಆಸ್ತಿ-ಪಾಸ್ತಿಯನ್ನು ಕಳೆದುಕೊಂಡಿದ್ದಾರೆ. ಇತಿಹಾಸ ಪುಟಗಳನ್ನು ತೆಗೆದು ನೋಡಿದಾಗ ಅವರ ತ್ಯಾಗ ಬಲಿದಾನಗಳು ಗೊತ್ತಾಗುತ್ತದೆ ಎಂದು ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನಪಿಸಿದರು.

    ಕಿತ್ತೂರು ರಾಣಿ ಚೆನ್ನಮ್ಮ ಸಂಗೊಳ್ಳಿ ರಾಯಣ್ಣ, ಸುಭಾಷ್ ಚಂದ್ರ ಬೋಸ್ ಅವರನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಇದೇ ಸಂದರ್ಭದಲ್ಲಿ ನೆಪಿಸಿಕೊಂಡರು. ಇವರೆಲ್ಲರು ಸಹ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ. ಗಾಂಧೀಜಿಯವರ ಹೋರಾಟ ಅಪಾರ. ಸ್ವಾತಂತ್ರ್ಯದ ಹೋರಾಟದಲ್ಲಿ ಹೋರಾಡಿದವರಿಗೆ ನಾನು ನನ್ನ ನಮನವನ್ನು ಸಲ್ಲಿಸುತ್ತೇನೆಂದು ಸಿಎಂ ಬೊಮ್ಮಾಯಿ ಹೇಳಿದರು.

    ಭಾರತದ ಸ್ವಾತಂತ್ರ್ಯದ ಬಳಿಕ ಎಲ್ಲರ ಹಸಿವನ್ನು ನೀಗಿಸಿದ ರೈತನಿಗೆ ನನ್ನ ಮೊದಲನೆ ಸಮಸ್ಕಾರ. ಪ್ರಾಣದ ಹಂಗನ್ನು ತೊರೆದು ದೇಶದ ರಕ್ಷಣೆ ಮಾಡುತ್ತಿರುವ ಸೈನಿಕನಿಗೆ ನನ್ನ ಸಲಾಂ. ದೇಶದ ಆಂತ್ರಿಕ ಸುರಕ್ಷಿತೆಯನ್ನು ಕಾಪಾಡುತ್ತಿರುವ ಪೊಲೀಸ್ ಪಡೆಗೆ ನನ್ನ ಸಲಾಂ. ಶಿಕ್ಷಕರು, ಗುರುಗಳು, ಸೈಂಟಿಸ್ಟ್, ಡಾಕ್ಟರ್​ಗಳು, ಸಣ್ಣ ಕೈಗಾರಿಕೆಯಿಂದ‌ ದೊಡ್ಡ ಕೈಗಾರಿಕಾ ಮಾಡಿ ದೇಶ ಕಟ್ಟೋದಕ್ಕೆ ಸಹಕಾರ ನೀಡಿದವರಿಗೆ ನನ್ನ ಸಲಾಂ ಎಂದು ಹೇಳಿದರು.

    ಸ್ವಾತಂತ್ರ್ಯ ಪೂರ್ವದಲ್ಲಿ ಯುವಕರನ್ನು ಕೇಳಿದರೆ, ದೇಶಕ್ಕಾಗಿ ಪ್ರಾಣ ಕೊಡ್ತೀನಿ ಅಂತಾಯಿದ್ರು. ಆದರೆ, ಇದೀಗ ದೇಶಕ್ಕಾಗಿ ಪ್ರಾಣ ಕೊಡುವ ಅವಶ್ಯಕತೆ ಇಲ್ಲ. ಎಲ್ಲ ಯುವಕರು ನಿಮ್ಮ ಶ್ರಮ, ಜ್ಞಾನ, ಅಭಿಮಾನ, ಗೌರವ ಮತ್ತು ಶ್ರದ್ಧೆ ಬಹಳ ಮುಖ್ಯ. ನಿಮ್ಮ ಬೆವರಿನ ಪ್ರತಿ ಹನಿ ಕೂಡ ದೇಶ ಕಟ್ಟುವ ಕೆಲಸ ಮಾಡಬೇಕು.‌ ನಮ್ಮದು ಬುದ್ಧಿವಂತರು, ಶ್ರಮ ಜೀವಿಗಳು ಹಾಗೂ ನೈಸರ್ಗಿಕ ಸಂಪತ್ತು ಇರುವ‌ ದೇಶ. ನಾವೆಲ್ಲರು ಸ್ವಾವಲಂಬಿಗಳಾಗಬೇಕು ಎಂದು ಯುವಕರಿಗೆ ಕರೆ ನೀಡಿದರು.

    ಈ ಅಮೃತಕಾಲದಲ್ಲಿ ನರೇಂದ್ರ ಮೋದಿ ಅವರ ನಾಯಕತ್ವ ಸಿಕ್ಕಿದೆ. ಯಾರಾದರೂ ಪ್ರಧಾನ ಮಂತ್ರಿಗಳು ದೇಶದ ಸ್ವಚ್ಛತೆಯ ಸಾಧನೆಯನ್ನು ಮಾಡಿದ್ದರೆ, ಅದು ಸನ್ಮಾನ್ಯ ನರೇಂದ್ರ ಮೋದಿ ಅವರು. ಹಲವಾರು ಮಂದಿ ಬ್ಯಾಂಕ್​ಗಳನ್ನೇ ನೋಡಿರಲಿಲ್ಲ. 40 ಕೋಟಿ ಬಡಜನಕ್ಕೆ ಬ್ಯಾಂಕ್​ ಖಾತೆ ತೆಗೆದು ಗ್ರಾಮ ಗ್ರಾಮಗಳಲ್ಲಿ ಡಿಜಿಟಲ್ ವ್ಯವಹಾರಗಳನ್ನು ಪ್ರಾರಂಭ ಮಾಡಿದ್ದಾರೆ. ನವಯುಗ‌ ಕೈಗಾರಿಕೆ ಪ್ರಾರಂಭವಾಗಿದೆ. ಇದೆಲ್ಲವು ಸಹ ಅಮೃತ ಕಾಲಕ್ಕೆ ಹೋಗುತ್ತಿದೆ ಎಂದರು.

    ಇದೇ ಸಂದರ್ಭದಲ್ಲಿ ಹೊಸ ಯೋಜನೆಗೆ ಸಿಎಂ ಅಡಿಪಾಯ ಹಾಕಿದರು. ಮೃತ ಸೈನಿಕರ ಮಕ್ಕಳಿಗೆ ನೇರವಾದ ನೌಕರಿ ಆದೇಶ ಮತ್ತು 25 ಲಕ್ಷ ಪರಿಹಾರ ಹಣ ಘೋಷಣೆ ಮಾಡಿದರು. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಕ್ಕೆ 150 ಕೋಟಿ ರೂಪಾಯಿ ಮಂಜೂರು ಮಾಡಿದರು. ಭೂಮಿಯಿಲ್ಲದ ಕಾರ್ಮಿಕರಿಗೆ ಕೆಲಸ ಮತ್ತು ಅವರ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲಾಗುವುದು. ಇದೆಲ್ಲವು ನವಭಾರತಕ್ಕೆ ಸಹಾಯವಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. (ದಿಗ್ವಿಜಯ ನ್ಯೂಸ್​)

    ಸಿಎಂ ಬೊಮ್ಮಾಯಿ ಭಾಷಣದ ಸಂಪೂರ್ಣ ವಿಡಿಯೋ ಇಲ್ಲಿದೆ…

    ಸ್ವಾತಂತ್ರ್ಯದ ಅಮೃತ ಮಹೋತ್ಸವ: ಮಾಣಿಕ್​ ಷಾ ಪರೇಡ್​ ಗ್ರೌಂಡ್​ನಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಬೊಮ್ಮಾಯಿ

    ಸ್ವಾತಂತ್ರ್ಯದ ಅಮೃತ ಮಹೋತ್ಸವ: ಪಂಚಪ್ರಾಣ ಸಂಕಲ್ಪಕ್ಕೆ ಕರೆ, ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ…

    ಸ್ವಾತಂತ್ರ್ಯದ ಅಮೃತ ಮಹೋತ್ಸವ: ಧ್ವಜಾರೋಹಣಕ್ಕೂ ಮುನ್ನ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts