More

    ಮಹಾಲಿಂಗಪುರ ತಾಲೂಕು ಘೋಷಣೆ ಮಾಡಿ

    ಮಹಾಲಿಂಗಪುರ: ಬಸವರಾಜ ಬೊಮ್ಮಾಯಿ ಸರ್ಕಾರ ಮಹಾಲಿಂಗಪುರ ತಾಲೂಕು ಕೇಂದ್ರವಾಗಲು ಕೈಗೊಂಡ ಕ್ರಮಗಳನ್ನು ಪರಿಶೀಲಿಸಿ ಗೆಜೆಟ್ ಮೂಲಕ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಶಾಸಕ ಸಿದ್ದು ಸವದಿ ಕಂದಾಯ ಮಂತ್ರಿ ಕೃಷ್ಣ ಭೈರೇಗೌಡರನ್ನು ವಿಧಾನಸಭೆ ಅಧಿವೇಶನದಲ್ಲಿ ಬುಧವಾರ ಒತ್ತಾಯಿಸಿದರು.

    ಸದನದ ಶೂನ್ಯ ವೇಳೆಯಲ್ಲಿ ಮಹಾಲಿಂಗಪುರ ಪಟ್ಟಣ ತಾಲೂಕು ಘೋಷಣೆ ಪ್ರಯುಕ್ತ ಪ್ರಸ್ತಾಪ ಮಾಡಿ ಸಭಾಧ್ಯಕ್ಷ ಯು. ಟಿ. ಖಾದರ್ ಅವರಿಗೆ ತಾಲೂಕಿನ ಮಾನದಂಡ ಪ್ರಕಾರವಿರುವ ಅರ್ಹತೆಗಳನ್ನು ವಿವರಿಸಿದರು.

    ತಾಲೂಕಿಗಾಗಿ ಪಟ್ಟಣ ಸೇರಿ ಸತ್ತಲಿನ ಜನತೆ 40 ವರ್ಷಗಳಿಂದ ಬೇಡಿಕೆ ಇಟ್ಟಿದ್ದಾರೆ. 2 ವರ್ಷಗಳಿಂದ ಧರಣಿ ಸತ್ಯಾಗ್ರಹ ನಡೆಸಿದ್ದು, ಡಿ. 1 ರಿಂದ ಐದಾರು ದಿನ ಆಮರಣ ಉಪವಾಸ ಸತ್ಯಾಗ್ರಹವೂ ನಡೆದಿದೆ. ಸ್ಥಳೀಯವಾಗಿ ಯಾವುದೇ ಅಚಾತುರ್ಯಕ್ಕೆ ಕಾರಣವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

    ನಿಯೋಜಿತ ಮಹಾಲಿಂಗಪುರ ತಾಲೂಕಿನಲ್ಲಿ 1ಪುರಸಭೆ, 1 ಪಟ್ಟಣ ಪಂಚಾಯಿತಿ ಸೇರಿ ಒಟ್ಟು 12 ಹಳ್ಳಿಗಳ ಸೇರಿ 1.50 ಲಕ್ಷ ಸಾವಿರ ಜನಸಂಖ್ಯೆ ಮೀರಿದೆ. ಮುಧೋಳ ತಾಲೂಕಿನಲ್ಲೇ ದೊಡ್ಡ ಮಹಾಲಿಂಗಪುರ ಪಟ್ಟಣವಾಗಿದೆ. ಎಲ್ಲ ಆಯಾಮಗಳಲ್ಲಿ ಕಂದಾಯ ಮಾನದಂಡಗಳನ್ನು ಹೊಂದಿರುವ ಕಾರಣ, ತಾವು ಇನ್ನೊಮ್ಮೆ ಪರಿಶೀಲಿಸಬೇಕೆಂದರು.

    ಕಂದಾಯ ಸಚಿವ ಕೃಷ್ಣ ಭೈರೇಗೌಡ ಉತ್ತರ ನೀಡಿ, ಈಗಾಗಲೇ ಅಖಂಡ ಜಮಖಂಡಿ ತಾಲೂಕಿನಲ್ಲಿದ್ದ 31 ಗ್ರಾಮಗಳ ಪೈಕಿ 22 ಗ್ರಾಮಗಳನ್ನು ರಬಕವಿ /ಬನಹಟ್ಟಿ ತಾಲೂಕಿನಲ್ಲಿ ಮತ್ತು ತೇರದಾಳದಲ್ಲಿ 9 ಗ್ರಾಮಗಳ ಸೇರ್ಪಡೆಗೊಳಿಸಿ ತಾಲೂಕುಗಳನ್ನಾಗಿ ಮಾಡಲಾಗಿದೆ. ಇನ್ನುಳಿದ 22 ಗ್ರಾಮಗಳನ್ನು ವಿಭಜಿಸಿ ತಾಲೂಕು ಮಾಡುವ ಯಾವುದೇ ಪ್ರಸ್ತಾಪ ನಮ್ಮ ಕಡತದಲ್ಲಿ ಇಲ್ಲ. ತೇರದಾಳ ಶಾಸಕ ಸವದಿ ಅವರು ಮತ್ತೊಮ್ಮೆ ಕಂದಾಯ ಸಚಿವರಿಗೆ ಮಹಾಲಿಂಗಪುರ ಪಟ್ಟಣ ಅವಿಭಜಿತ ಮುಧೋಳ ತಾಲೂಕಿನಲ್ಲಿ ಬರುತ್ತದೆ. ನೀವು ಜಮಖಂಡಿ ತಾಲೂಕು ಅಂತಾ ತಪ್ಪಾಗಿ ಭಾವಿಸಿದ್ದೀರಿ ಎಂದು ಮನವರಿಕೆ ಮಾಡಿಕೊಟ್ಟರು. ನಂತರ ಸಚಿವರು 63 ತಾಲೂಕುಗಳಲ್ಲಿ 40ಕ್ಕೆ ಇನ್ನೂ ಹಣ ಒದಗಿಸಲು ಆಗುತ್ತಿಲ್ಲ. ಹಾಗೇನಾದರೂ ಹಿಂದಿನ ಸರ್ಕಾರದ ಆದೇಶ ಕಡತದಲ್ಲಿ ದೊರಕಿದರೆ ಪೂರ್ವಾಪರ ವಿಚಾರಿಸಿ ಕ್ರಮ ಕೈಗೊಳ್ಳಲಾಗುವುದು.

    ಈಗ ಹೋರಾಟಗಾರರು ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳದೆ ಧರಣಿ ಸತ್ಯಾಗ್ರಹ ಕೈ ಬಿಡಬೇಕೆಂದು ಸಚಿವರು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts