More

    ಚುನಾವಣೆ ಬೆನ್ನಲ್ಲೇ ದೀದಿಗೆ ಬಿಗ್​ ಶಾಕ್​… ಐವರು ಸಚಿವರು ದಿಢೀರ್​ ನಾಪತ್ತೆ!

    ಕೋಲ್ಕತಾ: ಇನ್ನು ಕೆಲವೇ ತಿಂಗಳುಗಳಲ್ಲಿ ಪಶ್ಚಿಮ ಬಂಗಾಳದ ಚುನಾವಣೆಯಾಗಲಿದೆ. ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಐವರು ಸಚಿವರು ದೊಡ್ಡ ಆಘಾತವನ್ನೇ ನೀಡಿಬಿಟ್ಟಿದ್ದಾರೆ.

    ಅದೇನೆಂದರೆ ಈಗ ನಡೆಯುತ್ತಿರುವ ಕ್ಯಾಬಿನೆಟ್​ ಸಭೆಗೆ ಐವರು ಸಚಿವರು ಹಾಜರಾಗಿಲ್ಲ. ಅಷ್ಟೇ ಅಲ್ಲದೇ ಈ ಪೈಕಿ ಒಬ್ಬರು ಸಚಿವರು ತೃಣಮೂಲ ಬ್ಯಾನರ್ ಇಲ್ಲದೆಯೇ ಕಾರ್ಯಕ್ರಮಗಳನ್ನು ಭಾಗಿಯಾಗಿದ್ದಾರೆ. ಇವೆಲ್ಲವೂ ಇದೀಗ ಮಮತಾ ಅವರನ್ನು ದೊಡ್ಡ ಸಂಕಷ್ಟಕ್ಕೆ ಸಿಲುಕಿಸಿದೆ.

    ಎಲ್ಲೆಡೆ ಬಿಜೆಪಿ ಅಲೆಯು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಜತೆಗೆ ಬಿಜೆಪಿಯು ಮುಂದಿನ ಟಾರ್ಗೆಟ್​ ಕೂಡ ಪಶ್ಚಿಮ ಬಂಗಾಳ ಎಂದೇ ಚರ್ಚೆಯಾಗುತ್ತಿರುವ ಈ ಹೊತ್ತಿನಲ್ಲಿ ಐವರು ಸಚಿವರು ಸಭೆಗೆ ಹಾಜರು ಆಗದೇ ತಪ್ಪಿಸಿಕೊಂಡಿರುವುದನ್ನು ನೋಡಿದರೆ ಇವರೆಲ್ಲವೂ ಬಿಜೆಪಿಯನ್ನು ಸೇರಲಿದ್ದಾರೆಯೇ ಎಂಬ ಭಾರಿ ಸುದ್ದಿ ಹರಿದಾಡುತ್ತಿದೆ.

    ಇದನ್ನೂ ಓದಿ: ಆತ್ಮನಿರ್ಭರ್​ ಭಾರತ್​ 3.0 ಘೋಷಣೆ- ಕಡಿಮೆ ವೇತನದಾರರಿಗೆ ಸಿಗಲಿದೆ ಇಪಿಎಫ್​

    ಸಭೆಗೆ ಹಾಜರಾಗದೇ ನಾಪತ್ತೆಯಾಗಿರುವವರ ಪೈಕಿ ಪ್ರಮುಖವಾಗಿರುವವರು ಸಾರಿಗೆ ಸಚಿವ ಸುವೇಂಡು. ಇವರು ಮಮತಾ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಭಾಗವಹಿಸಲಿಲ್ಲ. ಅಷ್ಟೇ ಅಲ್ಲದೇ ಇವರು ಕಳೆದ ಹಲವು ತಿಂಗಳುಗಳಿಂದ ಪಕ್ಷದಿಂದ ದೂರ ಉಳಿದಿರುವುದು ದೀದೀ ಅವರನ್ನು ಇನ್ನಷ್ಟು ಪೇಚಿಗೆ ಸಿಲುಕಿಸಿದೆ ಎನ್ನಲಾಗಿದೆ. ಸುವೇಂಡು ಅವರು ಇದಾಗಲೇ ಪಕ್ಷದ ಬ್ಯಾನರ್ ಇಲ್ಲದೆ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಆದರೆ ಈ ಬಗ್ಗೆ ಅವರು ಎಲ್ಲಿಯೂ ಯಾವ ವಿಷಯವನ್ನೂ ಮಾತನಾಡಲಿಲ್ಲ.

    ಇನ್ನು ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಕೂಡ ಸಂಪುಟ ಸಭೆಯಲ್ಲಿ ಭಾಗವಹಿಸಲಿಲ್ಲ. ತಮ್ಮ ಆರೋಗ್ಯ ಹದಗೆಟ್ಟಿರುವುದಾಗಿ ಅವರು ಹೇಳಿಕೊಂಡರೂ ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಬೇರೆಯ ವಿಚಾರವೇ ಇದ್ದರಲಿಕ್ಕೆ ಸಾಕು ಎನ್ನಲಾಗಿದೆ. ಇನ್ನುಳಿದಂತೆ ರಾಜೇವ್ ಬ್ಯಾನರ್ಜಿ, ಗೌತಮ್ ದೇವ್ ಮತ್ತು ರವೀಂದ್ರನಾಥ ಘೋಷ್ ಸಚಿವರು ಕೂಡ ಹಾಜರು ಆಗಲಿಲ್ಲ.

    ಹೀಗೆ ಐವರು ಏಕಕಾಲದಲ್ಲಿ ಗೈರುಹಾಜರಿಯೊಂದಿಗೆ ಚುನಾವಣೆಗೆ ಮುನ್ನ ಮಮತಾ ಸರ್ಕಾರದಲ್ಲಿ ಅಸಮಾಧಾನದ ಚರ್ಚೆ ಪ್ರಾರಂಭವಾಗಿದೆ.

    ಗೂಗಲ್​ ಬಳಕೆದಾರರಿಗೆ ಬಿಗ್​ ಶಾಕ್​- ಇನ್ಮುಂದೆ ಫೋಟೋ, ವಿಡಿಯೋಗಳಿಗೆ ಶುಲ್ಕ!

    ಡ್ರೈವಿಂಗ್​ ಕಲಿಯುವವರೇ ಎಚ್ಚರ… ಟೆಕ್ಕಿಯಿಂದ ಎರಡೂವರೆ ಲಕ್ಷ ದೋಚಿದ ತರಬೇತುದಾರ​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts