More

    ಆತ್ಮನಿರ್ಭರ್​ ಭಾರತ್​ 3.0 ಘೋಷಣೆ- ಕಡಿಮೆ ವೇತನದಾರರಿಗೆ ಸಿಗಲಿದೆ ಇಪಿಎಫ್​

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಆತ್ಮನಿರ್ಭರ್​ ಭಾರತ ಯೋಜನೆಯಿಂದಾಗಿ ಇದಾಗಲೇ ಹಲವಾರು ಯುವಕರು ಉದ್ಯೋಗಾವಕಾಶ ಕಂಡುಕೊಂಡಿದ್ದಾರೆ, ಇದರ ಜತೆಗೆ ವಿದೇಶಿ ವಸ್ತುಗಳ ಮೇಲಿನ ಅವಲಂಬನೆ ತಗ್ಗಿದ್ದು, ಭಾರತಕ್ಕೆ ಹಲವಾರು ರೀತಿಯಲ್ಲಿ ಉಪಯೋಗಗಳೂ ಆಗಿವೆ.

    ಅದರ ಮುಂದುವರೆದಿರುವ ಭಾಗವಾಗಿ ಇದೀಗ ಆತ್ಮನಿರ್ಭರ್​ ಭಾರತ್​ ಯೋಜ್​ಗಾರ್​ ಯೋಜನೆ 3.0 ಘೋಷಣೆಯಾಗಿದೆ. ಈ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಇಂದು ನಡೆದಿರುವ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಹೊಸದಾಗಿ ಕಡಿಮೆ ಸಂಬಳದ ಉದ್ಯೋಗ ಪಡೆದುಕೊಂಡಿರುವ ಯುವಜನರಿಗೆ ಈ ಯೋಜನೆ ಬಹು ಮಹತ್ತರ ಪಾತ್ರ ವಹಿಸಿದೆ ಎಂದು ನಿರ್ಮಲಾ ಹೇಳಿದ್ದಾರೆ.

    ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಕಡಿವಾಣ​- ಇಲ್ಲಿ ಮೋಜು ಮಸ್ತಿ ಮಾಡಲು ಬಯಸಿದವರಿಗೆ ನಿರಾಸೆ

    ಏನಿದು ಯೋಜನೆ?
    ಶೇ.12ರಷ್ಟು ನೌಕರರ ಇಪಿಎಫ್​ ಹಾಗೂ ಶೇ.12ರಷ್ಟು ಸಂಸ್ಥೆಯ ಇಪಿಎಫ್​ ಸೇರಿದಂತೆ ಒಟ್ಟು ಶೇ.24ರಷ್ಟನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸುವ ಯೋಜನೆ ಇದಾಗಿದೆ. ಈ ಯೋಜನೆಯು ಅಕ್ಟೋಬರ್​ 1ರಿಂದ ಅನ್ವಯ ಆಗುವಂತೆ ಜಾರಿಗೆ ಬಂದಿದ್ದು, 2021ರ ಜೂನ್​ 30ರವರೆಗೂ ಜಾರಿಯಲ್ಲಿ ಇರಲಿದೆ.

    ಇದರ ಲಾಭ ಪಡೆಯಬೇಕು ಎಂದರೆ, ನೌಕರರ ಭವಿಷ್ಯ ನಿಧಿ ಸಂಸ್ಥೆಗೆ (ಇಪಿಎಫ್‌ಒ) ಅಡಿ ನೋಂದಾವಣಿಗೊಂಡಿರುವ ಸಂಸ್ಥೆಗಳು ನೇಮಕ ಮಾಡಿಕೊಂಡಿರುವ ಉದ್ಯೋಗಿಗಳು ಇಪಿಎಫ್​ಒ ಯೋಜನೆಯ ವ್ಯಾಪ್ತಿಗೆ ಬರದಿದ್ದರೆ ಹಾಗೂ 2020ರ ಮಾರ್ಚ್​1 ರಿಂದ ಸೆಪ್ಟೆಂಬರ್​ 30ರ ಒಳಗೆ ಉದ್ಯೋಗ ಕಳೆದುಕೊಂಡಿರುವ ನೌಕರರು ಇದರ ಪ್ರಯೋಜನ ಪಡೆಯಲಿದ್ದಾರೆ. 15 ಸಾವಿರ ರೂಪಾಯಿಗಳಿಗಿಂತ ಕಡಿಮೆ ಸಂಬಳ ಹೊಂದಿರುವ ಉದ್ಯೋಗಿಗಳಿಗೆ ಇದರ ಪ್ರಯೋಜನ ಸಿಗಲಿದೆ.

    50ಕ್ಕಿಂತ ಕಡಿಮೆ ಸಿಬ್ಬಂದಿ ಇರುವ ಸಂಸ್ಥೆಗಳು ಕನಿಷ್ಠ 2 ಹೊಸ ಉದ್ಯೋಗಿಗಳನ್ನು ಹಾಗೂ 50ಕ್ಕಿಂತ ಹೆಚ್ಚಿಗೆ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ಕನಿಷ್ಠ ಐದು ಮಂದಿ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದ್ದರೆ ಈ ಸೌಲಭ್ಯ ಸಿಗಲಿದೆ.

    ಡ್ರೈವಿಂಗ್​ ಕಲಿಯುವವರೇ ಎಚ್ಚರ… ಟೆಕ್ಕಿಯಿಂದ ಎರಡೂವರೆ ಲಕ್ಷ ದೋಚಿದ ತರಬೇತುದಾರ​!

    ಗೂಗಲ್​ ಬಳಕೆದಾರರಿಗೆ ಬಿಗ್​ ಶಾಕ್​- ಇನ್ಮುಂದೆ ಫೋಟೋ, ವಿಡಿಯೋಗಳಿಗೆ ಶುಲ್ಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts