More

    ಹೊಸ ವರ್ಷಾಚರಣೆಗೆ ಕಡಿವಾಣ​- ಇಲ್ಲಿ ಮೋಜು ಮಸ್ತಿ ಮಾಡಲು ಬಯಸಿದವರಿಗೆ ನಿರಾಸೆ

    ಬೆಂಗಳೂರು: ಹೊಸ ವರ್ಷ ಎಂದಾಕ್ಷಣ ಬೆಂಗಳೂರಿನ ಮೋಜು ಪ್ರಿಯರಿಗೆ ನೆನಪಾಗುವುದು ಎಂ.ಜಿ.ರೋಡ್​ ಮತ್ತು ಬ್ರಿಗೇಡ್​ ರಸ್ತೆ. ಬೆಂಗಳೂರು ಮಾತ್ರವಲ್ಲದೇ ಹೊಸ ಊರುಗಳಿಂದಲೂ ಹೊಸವರ್ಷಾಚರಣೆಗಾಗಿ ಇಲ್ಲಿ ಬರುವವರುಂಟು.

    ಆದರೆ ಈ ಬಾರಿ ಕರೊನಾ ಇವುಗಳಿಗೆ ಕಡಿವಾಣ ಹಾಕಿದೆ. ಬೆಂಗಳೂರು ಕರೊನಾ ಹಾಟ್​ಸ್ಪಾಟ್​ ಆಗುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಕೆಲವೊಂದು ನಿಯಮ ಜಾರಿಗೆ ತರಲು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಧರಿಸಿದೆ. ಅದರಲ್ಲಿಯೂ ಎಂ.ಜಿ.ರಸ್ತೆ ಮತ್ತು ಬ್ರಿಗೆಡ್​ ರಸ್ತೆಗಳಲ್ಲಿ ಸಂಪೂರ್ಣ ಕಡಿವಾಣ ಹಾಕಲು ಇಂದು ನಡೆದಿರುವ ಬಿಬಿಎಂಪಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ಎಂ.ಜಿ.ರಸ್ತೆ, ಬ್ರಿಗೇಡ್​​​ ರಸ್ತೆಯಲ್ಲಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಹೆಚ್ಚು ಜನ ಸೇರುವುದು ಹಾಗೂ ದೈಹಿಕ ಅಂತರ ಕಾಪಾಡಿಕೊಳ್ಳದೇ ಇರುವುದು ನಡೆಯುತ್ತದೆ. ಮಾತ್ರವಲ್ಲದೇ ಕುಡಿದ ಅಮಲಿನಲ್ಲಿ ಯಾವ ನಿಯಮಗಳೂ ಪಾಲಿಸುವುದಿಲ್ಲ ಎನ್ನುವ ಹಿನ್ನೆಲೆಯಲ್ಲಿ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ.

    ಇದನ್ನೂ ಓದಿ: ಪಟಾಕಿ ಹಚ್ಚುವವರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಜಿಪಿಎಸ್​ ನೀಡಿದ ಸರ್ಕಾರ

    ಈ ಬಗ್ಗೆ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿದ್ದು ಸರ್ಕಾರಕ್ಕೂ ಮನವಿ ಮಾಡಲು ಪಾಲಿಕೆ ತೀರ್ಮಾನಿಸಿದೆ.

    ಚಳಿಗಾಲ ಆರಂಭವಾಗಿರುವ ಕಾರಣ, ಕರೊನಾ ಸೋಂಕಿನ ಆರ್ಭಟ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇದೇ ಕಾರಣದಿಂದಲೂ ಇಂಥದ್ದೊಂದು ನಿರ್ಧಾರವನ್ನು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನೇತೃತ್ವದ ಸಭೆ ತೆಗೆದುಕೊಂಡಿದೆ. ಈ ಬಗ್ಗೆ ಈಗಾಗಲೇ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್​ ಅವರಿಗೆ ವರದಿ ನೀಡಿದ್ದು, ಸರ್ಕಾರಕ್ಕೂ ಮನವಿ ಮಾಡುವ ಬಗ್ಗೆ ನಿರ್ಧರಿಸಲಾಗಿದೆ.

    ಡ್ರೈವಿಂಗ್​ ಕಲಿಯುವವರೇ ಎಚ್ಚರ… ಟೆಕ್ಕಿಯಿಂದ ಎರಡೂವರೆ ಲಕ್ಷ ದೋಚಿದ ತರಬೇತುದಾರ​!

    ಗೂಗಲ್​ ಬಳಕೆದಾರರಿಗೆ ಬಿಗ್​ ಶಾಕ್​- ಇನ್ಮುಂದೆ ಫೋಟೋ, ವಿಡಿಯೋಗಳಿಗೆ ಶುಲ್ಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts