More

    VIDEO: ಅಯೋಧ್ಯೆಯ ರಾಮ ಮಂದಿರ ಹೇಗಿರಲಿದೆ? ಒಳಗೆ ಏನೇನು ಇರಲಿವೆ? ಕಣ್ಮನ ಸೆಳೆಯುವ 3ಡಿ ವಿಡಿಯೋ ಇಲ್ಲಿದೆ ನೋಡಿ…

    ಅಯೋಧ್ಯೆ: ಶತಮಾನಗಳಿಂದ ವಿವಾದದಲ್ಲಿಯೇ ಉಳಿದಿದ್ದ ಅಯೋಧ್ಯೆಯ ರಾಮ ಜನ್ಮಭೂಮಿಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ಒಟ್ಟು 110 ಎಕರೆ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ. 2023ರ ವೇಳೆಗೆ ಮಂದಿರದ ಗರ್ಭಗುಡಿಯಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಮೂಲಗಳ ಪ್ರಕಾರ, ರಾಮಮಂದಿರದ ಗರ್ಭಗುಡಿ ನಿರ್ಮಾಣ ಕಾರ್ಯವು 2023ರ ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ. 2025ರ ವೇಳೆಗೆ ಭವ್ಯ ರಾಮ ಮಂದಿರದ ನಿರ್ಮಾಣ ಕೂಡ ಪೂರ್ಣಗೊಳ್ಳಲಿದೆ.

    ರಾಮಮಂದಿರ ಸಂಪೂರ್ಣಗೊಂಡ ಮೇಲೆ ಅದನ್ನು ಹೇಗೆ ಕಾಣಿಸಬಹುದು ಎಂಬ ಕುತೂಹಲ ಹಲವರಿಗೆ ಇದೆ. ಇದಾಗಲೇ ನೀಲ ನಕ್ಷೆಯ ಫೋಟೋ ಅಷ್ಟೇ ನೋಡಿ ಆನಂದಿಸಿದವರಿಗೆ ನಿಜವಾಗಿಯೂ ರಾಮಮಂದಿರ ಹೇಗೆ ಕಾಣಿಸಲಿದೆ ಎಂದು ಇದೀಗ 3ಡಿ ವಿಡಿಯೋ ಬಿಡುಗಡೆ ಮಾಡಲಾಗಿದೆ.

    ಭಾರತದ ಭೂಪಟದಲ್ಲಿ ಭವ್ಯವಾದ ದೇವಾಲಯದ ಹೊರನೋಟದೊಂದಿಗೆ ಆರಂಭವಾಗುವ ಈ ವಿಡಿಯೋದಲ್ಲಿ ರಾಮನ ದೇವಾಲಯಕ್ಕಾಗಿ ಗುರುತಿಸಲಾದ 67 ಎಕರೆ ಭೂಮಿಯ ಪಕ್ಷಿನೋಟ ವೀಕ್ಷಿಸಬಹುದಾಗಿದೆ. ಶ್ರೀರಾಮ ಮಂದಿರದ ಮುಖ್ಯ ದೇವಾಲಯದ ನಾಲ್ಕು ದಿಕ್ಕುಗಳಲ್ಲಿ ಹಲವಾರು ಚಿಕ್ಕ ಚಿಕ್ಕ ದೇವಾಲಯಗಳನ್ನು ಇದರಲ್ಲಿ ನೋಡಬಹುದು. ಮುಖ್ಯ ದೇವಾಲಯದಲ್ಲಿ ಕಂಬಗಳು ಮತ್ತು ಗೋಡೆಗಳು ಅಮೃತಶಿಲೆಯ ನೆಲಹಾಸು ಮತ್ತು ಮರಳುಗಲ್ಲಿನ ಗೋಡೆಗಳೊಂದಿಗೆ ದೇವರು ಮತ್ತು ದೇವತೆಗಳ ವಿನ್ಯಾಸಗಳನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

    ರಾಮ ಮಂದಿರದ ನೆಲಮಹಡಿಯಲ್ಲಿ 160 ಅಂಕಣಗಳು, ಮೊದಲ ಮಹಡಿಯಲ್ಲಿ 132 ಅಂಕಣಗಳು ಮತ್ತು ಎರಡನೇ ಮಹಡಿಯಲ್ಲಿ 74 ಅಂಕಣಗಳು ಇರಲಿವೆ ಎನ್ನಲಾಗಿದೆ. ಇದರ ಜತೆಗೆ, ರಾಮ ಜನ್ಮಭೂಮಿ ಆವರಣದಲ್ಲಿ ವಿವಿಧ ದೇವತೆಗಳ 6 ದೇವಾಲಯಗಳನ್ನು ನಿರ್ಮಿಸಲಾಗುವುದು. ದೇವತೆಗಳಲ್ಲಿ ಸೂರ್ಯ, ಗಣೇಶ, ಶಿವ, ದುರ್ಗಾ, ವಿಷ್ಣು ಮತ್ತು ಬ್ರಹ್ಮ ದೇವರ ದೇವಸ್ಥಾನಗಳನ್ನು ನಿರ್ಮಿಸಲಾಗುವುದು. ಮೂರು ಅಂತಸ್ತಿನ ರಚನೆಯು ಐದು ಮಂಟಪಗಳನ್ನು ಹೊಂದಿರುತ್ತದೆ.ದೇವಾಲಯದ ನಿರ್ಮಾಣದಲ್ಲಿ ಉಕ್ಕು ಅಥವಾ ಇಟ್ಟಿಗೆಗಳನ್ನು ಬಳಸಲಾಗುವುದಿಲ್ಲ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಈ ಹಿಂದೆ ತಿಳಿಸಿತ್ತು.

    ರಾಮ ಮಂದಿರ ಸಂಕೀರ್ಣವು ಯಾತ್ರಿಕರ ಅನುಕೂಲ ಕೇಂದ್ರ, ಸಂಶೋಧನಾ ಕೇಂದ್ರ, ಸಭಾಂಗಣ, ವಸ್ತುಸಂಗ್ರಹಾಲಯ, ದಾಖಲೆಗಳು, ಗೋಶಾಲೆ, ಧಾರ್ಮಿಕ ಕ್ರಿಯೆಗಳಿಗೆ ಸ್ಥಳ, ಅರ್ಚಕರಿಗೆ ಕೊಠಡಿಗಳು ಮತ್ತು ಆಡಳಿತ ಕಟ್ಟಡವನ್ನು ಹೊಂದಲು ಯೋಜಿಸಿದೆ. ಮುಖ್ಯ ದೇವಾಲಯದ ನಿರ್ಮಾಣಕ್ಕೆ ರಾಜಸ್ಥಾನದಿಂದ ಸುಮಾರು ನಾಲ್ಕು ಲಕ್ಷ ಅಡಿ ಕಲ್ಲು ಮತ್ತು ಅಮೃತಶಿಲೆಯನ್ನು ತರಿಸಲಾಗುತ್ತಿದೆ.

    ಇಲ್ಲಿದೆ ನೋಡಿ 3ಡಿ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts