More

    ಉತ್ತರ ಪ್ರದೇಶದ ಚುನಾವಣೆಗೆ ಪ್ರಿಯಾಂಕಾ ಸಾರಥಿ- 403 ಕ್ಷೇತ್ರಗಳಿಗೂ ಕಾಂಗ್ರೆಸ್‌ ಅಭ್ಯರ್ಥಿ

    ಲಖನೌ: ಮುಂದಿನ ವರ್ಷ ಬಹುತೇಕ ರಾಜ್ಯಗಳ ಚುನಾವಣೆ ನಡೆಯಲಿದ್ದು, ಈ ಪೈಕಿ ಉತ್ತರ ಪ್ರದೇಶ ಬಹು ಕುತೂಹಲದ ತಾಣವಾಗಿದೆ. ಎಲ್ಲಾ ಪಕ್ಷಗಳು ಇದಾಗಲೇ ತಮ್ಮ ಪಕ್ಷ ಗೆಲ್ಲುವ ಸಂಬಂಧ ರಣತಂತ್ರಗಳನ್ನು ಹೂಡುತ್ತಿದೆ.

    ಇದೀಗ ಕಾಂಗ್ರೆಸ್‌ ಪಕ್ಷ, ತಮ್ಮ ಪಕ್ಷದ ನಾಯಕಿಯಾಗಿರುವ ಪ್ರಿಯಾಂಕಾ ಗಾಂಧಿ ವಾಧ್ರಾ ನೇತೃತ್ವದಲ್ಲಿ ಚುನಾವಣೆಯನ್ನು ನಡೆಸಲು ಸಜ್ಜುಗೊಂಡಿದೆ. ಈ ಕುರಿತು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿರುವ ಅವರು, ಪ್ರಿಯಾಂಕಾ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ ಎಂದಿದ್ದಾರೆ.

    ಚುನಾವಣೆಗೆ ಮುನ್ನ 12 ಸಾವಿರ ಕಿಮೀ ಉದ್ದದ ಯಾತ್ರೆಯನ್ನು ಉತ್ತರ ಪ್ರದೇಶದ ಹಳ್ಳಿಗಳು ಮತ್ತು ಪಟ್ಟಣಗಳ ಮೂಲಕ ಸಂಚರಿಸುವ ನಿರ್ಧಾರ ಕೈಗೊಳ್ಳಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದಿರುವ ಅವರು, ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಇನ್ನೂ ನಿರ್ಧರಿಸಿಲ್ಲ. ಆದರೆ ಉತ್ತರ ಪ್ರದೇಶದ 403 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿರುವುದಾಗಿ ವಿವರಿಸಿದ್ದಾರೆ.

    “ಕಾಂಗ್ರೆಸ್ ಪ್ರತಿಜ್ಞಾ ಯಾತ್ರೆ: ಹಮ್ ವಚನ ನಿಭಾಯೇಂಗೆ” (ನಾವು ಮಾತನ್ನು ಉಳಿಸಿಕೊಳ್ಳಲಿದ್ದೇವೆ) ಎಂಬ ಸ್ಲೋಗನ್‌ ಜತೆಗೆ ಚುನಾವಣಾ ಕಣಕ್ಕೆ ಇಳಿಯಲಿದ್ದೇವೆ. ಈ ಬಗ್ಗೆ ಪಕ್ಷದ ಸಲಹಾ ಮತ್ತು ಕಾರ್ಯತಂತ್ರದ ಸದಸ್ಯರೊಂದಿಗೆ ನಡೆಸಿದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಆಗ್ರಾಗೆ ಭೇಟಿ ನೀಡುತ್ತಿರುವವರು ಜನರ ಸಮಸ್ಯೆಗಳ ಕುರಿತಂತೆ ಧ್ವನಿ ಎತ್ತಲಿದ್ದಾರೆ. ಅಯೋಧ್ಯೆ, ಜಾನ್ಸಿ, ಗೋರಖ್‍ಪುರ ಇತ್ಯಾದಿಗಳಿಗೆ ಭೇಟಿ ನೀಡಿದ್ದೇವೆ ಮತ್ತು ಆಗ್ರಾದ ತೋರಾ ಹಳ್ಳಿಯ ಸ್ಥಳೀಯರೊಂದಿಗೆ ಸಂವಾದ ನಡೆಸಿದ್ದೇವೆ ಎಂದು ಸಲ್ಮಾನ್ ಖುರ್ಷಿದ್ ಮಾಹಿತಿ ನೀಡಿದ್ದಾರೆ.

    2017 ರ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಏಳು ಸ್ಥಾನಗಳಿಗೆ ಇಳಿದಿತ್ತು. ಬಿಜೆಪಿ 312 ಸ್ಥಾನಗಳನ್ನು ಗೆದ್ದುಕೊಂಡಿತ್ತು.

    ಸತ್ತು ಹೋಗಿದ್ದಾನೆಂದ ಅಲ್‌ ಕೈದಾ ಮುಖ್ಯಸ್ಥ ಜೀವಂತ! 26/11 ಮಾದರಿಯ ಮತ್ತೊಂದು ದಾಳಿ ಭಯದಲ್ಲಿ ಅಮೆರಿಕ…

    VIDEO: ಅಮೆರಿಕದ ಯುದ್ಧ ವಿಮಾನಕ್ಕೆ ಜೋಕಾಲಿ ಕಟ್ಟಿ ಆಡಿದ ತಾಲಿಬಾನಿಗಳು- ಗಹಗಹಿಸಿ ನಕ್ಕ ಚೀನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts