More

    ಯೂಕ್ರೇನ್‌ನಿಂದ 800 ಭಾರತೀಯರನ್ನು ರಕ್ಷಿಸಿದ ಯುವತಿ: ಬಿಜೆಪಿ ಮುಖಂಡೆಯ ಪುತ್ರಿಗೆ ಶ್ಲಾಘನೆಗಳ ಮಹಾಪೂರ…

    ಕೋಲ್ಕತಾ: ಯೂಕ್ರೇನ್‌ ವಿರುದ್ಧ ರಷ್ಯಾ ಸಮರ ಸಾರಿ 20 ದಿನಗಳೇ ಕಳೆದಿವೆ. ಯೂಕ್ರೇನ್‌ನ ವಿವಿಧ ಭಾಗಗಳಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಆರಂಭದಿಂದಲೂ ಭಾರತ ಸರ್ಕಾರ ‘ಆಪರೇಷನ್‌ ಗಂಗಾ’ ಯೋಜನೆ ಕೈಗೊಂಡಿದ್ದು, ಇದಾಗಲೇ ಸಹಸ್ರಾರು ವಿದ್ಯಾರ್ಥಿಗಳು, ನಾಗರಿಕರು ತಾಯ್ನಾಡನ್ನು ಸುರಕ್ಷಿತವಾಗಿ ತಲುಪಿದ್ದಾರೆ.

    ಯುದ್ಧಪೀಡಿತ ಪ್ರದೇಶದಿಂದ ಜನರನ್ನು ರಕ್ಷಿಸುವುದು ಅಷ್ಟು ಸುಲಭದ ಕಾರ್ಯವಲ್ಲ. ಯಾವ ಕ್ಷಣದಲ್ಲಿ ಬೇಕಾದರೂ ರಕ್ಷಿಸಲು ಹೋದವರ ಪ್ರಾಣಕ್ಕೂ ಅಪಾಯ ಬಂದೊದಗಬಹುದು. ಪರಿಸ್ಥಿತಿ ಹೀಗಿದ್ದರೂ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರಕ್ಷಣಾ ಸಿಬ್ಬಂದಿ ಭಾರತೀಯರನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ. ಅವರಲ್ಲಿ ಈಗ 24 ವರ್ಷದ ಯುವತಿ ಭಾರಿ ಗಮನ ಸೆಳೆದಿದ್ದಾರೆ.

    ಬಿಜೆಪಿಯ ಪಶ್ಚಿಮ ಬಂಗಾಳ ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ ಚಕ್ರವರ್ತಿ ಅವರ ಮಗಳಾಗಿರುವ ಕೋಲ್ಕತಾದ ಮಹಾಶ್ವೇತಾ ಚಕ್ರವರ್ತಿಯೇ ಈ ಯುವತಿ. ಪೈಲೆಟ್‌ ಆಗಿರುವ ಮಹಾಶ್ವೇತಾ ಅವರು, ಯೂಕ್ರೇನ್‍ನ ಪೋಲಿಷ್ ಮತ್ತು ಹಂಗೇರಿಯ ಗಡಿಯಲ್ಲಿ ಸಿಲುಕಿಕೊಂಡಿದ್ದ 800ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಿ ಅವರನ್ನು ಸ್ಥಳಾಂತರಿಸಿದ್ದಾರೆ.

    ಆಪರೇಷನ್ ಗಂಗಾದ ಸದಸ್ಯರಾಗಿರುವ ಮಹಾಶ್ವೇತಾ, ಫೆಬ್ರವರಿ 27 ಮತ್ತು ಮಾರ್ಚ್ 7ರ ನಡುವೆ ಪೋಲೆಂಡ್‍ನಿಂದ ನಾಲ್ಕು ಮತ್ತು ಹಂಗೇರಿಯಿಂದ ಎರಡು ಸ್ಥಳಾಂತರಿಸುವ ವಿಮಾನಗಳಲ್ಲಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ್ದಾರೆ. ಕೋಲ್ಕತಾದ ಇಂದಿರಾ ಗಾಂಧಿ ರಾಷ್ಟ್ರೀಯ ಯುರಾನ್ ಅಕಾಡೆಮಿಯಿಂದ ಮಹಾಶ್ವೇತಾ ಪದವೀಧರರಾಗಿದ್ದಾರೆ. ಅವರು ಕಳೆದ ನಾಲ್ಕು ವರ್ಷಗಳಿಂದ ಖಾಸಗಿ ಕ್ಯಾರಿಯರ್‌ನ್ನು ಹಾರಿಸುತ್ತಿದ್ದಾರೆ.

    ‘ಈ ರೀತಿಯ ರಕ್ಷಣಾ ಕಾರ್ಯಾಚರಣೆ ಇದು ಜೀವಮಾನದ ಅನುಭವವಾಗಿತ್ತು, ಅವರಲ್ಲಿ ಅನೇಕರು ಅನಾರೋಗ್ಯಕ್ಕೆ ಒಳಗಾಗಿದ್ದರು. ನಾನು ಅವರ ಹೋರಾಟದ ಮನೋಭಾವನೆಯನ್ನು ಮೆಚ್ಚುತ್ತೇನೆ. ಅವರ ಮನೆಗೆ ಹಿಂದಿರುಗಿದ ಪ್ರಯಾಣದಲ್ಲಿ ನನ್ನ ಪಾತ್ರವನ್ನು ವಹಿಸಿದ್ದಕ್ಕಾಗಿ ನಾನು ತುಂಬಾ ಹೆಮ್ಮೆಪಡುತ್ತೇನೆ. ಎಂದು ಹೇಳಿದ್ದಾರೆ.

    ಮೊಬೈಲ್‌ ರಿಪೇರಿ ಮಾಡುತ್ತಿದ್ದ ಮಗನೀಗ ಶಾಸಕ: ಶಾಲೆಯಲ್ಲಿ ಕಸಗುಡಿಸೋದನ್ನು ಮುಂದುವರೆಸಿದ ಅಮ್ಮ

    ರಸ್ತೆ ಗುಂಡಿಗೆ ಇನ್ನೆಷ್ಟು ಬಲಿ ಬೇಕು? ಕರೆದರೂ ಬಾರದ ಆಂಬುಲೆನ್ಸ್‌- ಏಕೈಕ ಪುತ್ರ ಬಾರದ ಲೋಕಕ್ಕೆ…

    ಸೂರ್ಯನೊಬ್ಬನಿದ್ದರೆ ಆಹಾರವೇ ಬೇಡ ಎನ್ನುತ್ತ 27 ವರ್ಷ ಉಪವಾಸವಿದ್ದು ಬದುಕಿದ್ದ ಅಚ್ಚರಿಯ ಸಾಧಕನ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts