More

    ಕೋವಿಡ್​ನ ಹೊಸರೂಪ ತಿಳಿಯುವ ಮೊದಲೇ ಬ್ರಿಟನ್​ನಲ್ಲಿ ಒಕ್ಕರಿಸಿದೆ ಆಫ್ರಿಕಾ ವೈರಸ್​!

    ಲಂಡನ್: ಕೋವಿಡ್​-19 ಹೊಸ ರೂಪವು ಬ್ರಿಟನ್​ನಲ್ಲಿ ಕಾಣಿಸಿಕೊಂಡಿದ್ದು ಕಳೆದ ಕೆಲವು ದಿನಗಳಿಂದ ಇಡೀ ವಿಶ್ವವನ್ನೇ ಕಂಗೆಡಿಸಿಬಿಟ್ಟಿವೆ. ಭಾರತಕ್ಕೆ ಬ್ರಿಟನ್​ನಿಂದ ಬಂದಿರುವವರ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. ಮಾತ್ರವಲ್ಲದೇ ಹಲವಾರು ದೇಶಗಳು ಲಂಡನ್​ ವಿಮಾನಗಳನ್ನು ರದ್ದು ಕೂಡ ಮಾಡಿವೆ.

    ಈ ವೈರಸ್​ ಏನು? ಏನಿದರ ರೂಪ ಎಂದೆಲ್ಲಾ ವೈದ್ಯರು ತಲೆಕೆಡಿಸಿಕೊಂಡಿರುವ ಬೆನ್ನಲ್ಲೇ ಇದೀಗ ಮತ್ತೆ ಬ್ರಿಟನ್​ನಲ್ಲಿಯೇ ಇನ್ನೊಂದು ಭಯಾನಕ ವೈರಸ್​ ಕಾಣಿಸಿಕೊಂಡಿದ್ದು, ಇಬ್ಬರಲ್ಲಿ ಅದು ಪತ್ತೆಯಾಗಿದೆ.

    ದಕ್ಷಿಣ ಆಫ್ರಿಕಾ ಮೂಲದ ಹೊಸ ಸೋಂಕು ಇದಾಗಿದೆ. ದಕ್ಷಿಣ ಆಫ್ರಿಕಾದ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಆಫ್ರಿಕಾದಲ್ಲಿ ಈ ವೈರಸ್​ ಕಳೆದ ವಾರ ಪತ್ತೆಯಾಗಿದ್ದು, ಅನೇಕ ಮಂದಿಗೆ ಈ ವೈರಸ್​ ತಗುಲಿದೆ ಮಾತ್ರವಲ್ಲದೇ ಕರೊನಾಗಿಂತಲು ಇದು ವೇಗವಾಗಿ ಹರಡುತ್ತಿದೆಯಂತೆ.

    ಇದೀಗ ಲಂಡನ್​ಗೂ ಕಾಲಿಟ್ಟಿದೆ. ದಕ್ಷಿಣ ಆಫ್ರಿಕಾಕ್ಕೆ ಹೋಗ ಬಂದ ಲಂಡನ್​ ನಿವಾಸಿಗಳಲ್ಲಿ ಈ ಸೋಂಕು ಪತ್ತೆಯಾಗಿದೆ. ರೂಪಾಂತರ ತಳಿಯ ಕೋವಿಡ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಬ್ರಿಟನ್ ಈಗಾಗಲೇ ಪ್ರಯತ್ನಿಸುತ್ತಿದ್ದು, ಹೊಸ ಸೋಂಕಿನ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲಾಗುತ್ತಿದೆ ಎಂದು ಬ್ರಿಟನ್ ಈ ಸಂದರ್ಭದಲ್ಲಿ ಹೇಳಿದೆ.

    ಬಿಜೆಪಿ ಜತೆ ಮೈತ್ರಿ ಮಾಡ್ಕೋಬೇಡಾ ಎಂದು ಬಡ್ಕೊಂಡೆ… ಈಗ ಗೋಳೋ ಎಂದ್ರೆ ಏನ್​ ಬಂತು?

    ಗಾನ ಗಂಧರ್ವನಿಗೆ ಹೀಗೊಂದು ನಮನ: 339 ಕೆ.ಜಿ ತೂಕದ ಚಾಕೊಲೇಟ್ ಪ್ರತಿಮೆ

    ಅಮ್ಮನಿಗಾಗಿ ಪ್ರೀತಿ ಬಲಿಕೊಟ್ಟು ಮಾವನಮಗನ ಮದ್ವೆಯಾಗಿ ಜೀವನವೇ ನರಕವಾಗಿದೆ- ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts