More

    ಇಂಜಿನಿಯರ್‌ನಿಂಗ್ ಪದವೀಧರರಾ? ಬಿಇಎಲ್‌ನಲ್ಲಿವೆ 12 ಹುದ್ದೆಗಳು: 1.80 ಲಕ್ಷ ರೂ.ವರೆಗೆ ಸಂಬಳ

     ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​ನ ಬೆಂಗಳೂರು ಘಟಕದಲ್ಲಿ ಸ್ಟಾ್ಯಟರ್ಜಿಕ್ ಕಮ್ಯುನಿಕೇಷನ್ ಆಂಡ್ ಅನ್​ವ್ಯಾನಡ್ ಸಿಸ್ಟಂ (ಎಸ್​ಬಿಯು) ವಿಭಾಗದಲ್ಲಿ ಕಾರ್ಯನಿರ್ವಹಿಸಲು ಅರ್ಹ ಇಂಜಿನಿಯರಿಂಗ್ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ದೇಶದ ಯಾವುದೇ ಭಾಗಕ್ಕೆ ವರ್ಗ ಮಾಡಿದರೂ ಕಾರ್ಯನಿರ್ವಹಿಸಲು ಸಿದ್ಧರಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

     ಹುದ್ದೆ ವಿವರ

    * ಸೀನಿಯರ್ ಇಂಜಿನಿಯರ್ ಇ-3 10

    ಏರೋಸ್ಪೇಸ್/ ಆರೋನಾಟಿಕಲ್ ಇಂಜಿನಿಯರಿಂಗ್, ಇ ಆಂಡ್ ಸಿ-3, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಮೆಕಾನಿಕಲ್, ಮೆಕೊ್ಟ್ರೕನಿಕ್ಸ್ ನಲ್ಲಿ ಬಿಇ/ ಬಿ.ಟೆಕ್/ ಎಂಇ/ ಎಂ.ಟೆಕ್ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಬಿಇ/ ಬಿಟೆಕ್ ಮಾಡಿದ ಅಭ್ಯರ್ಥಿಗಳಿಗೆ 4 ವರ್ಷ ಹಾಗೂ ಎಂಇ/ ಎಂ.ಟೆಕ್ ಮಾಡಿದ ಅಭ್ಯರ್ಥಿಗಳಿಗೆ 2 ವರ್ಷದ ವೃತ್ತಿ ಅನುಭವ ಕೇಳಲಾಗಿದೆ. 1.11.2021ಕ್ಕೆ ಅನ್ವಯವಾಗುವಂತೆ ಗರಿಷ್ಠ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ. ಮಾಸಿಕ 50,000- 1,60,000 ರೂ. ಹಾಗೂ ಇತರ ಭತ್ಯೆಗಳಿರುತ್ತದೆ. 10 ಹುದ್ದೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗೆ 5 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 2, ಎಸ್ಸಿಗೆ 1, ಎಸ್ಟಿಗೆ 2 ಸ್ಥಾನ ಮೀಸಲಿರಿಸಲಾಗಿದೆ.

    * ಡೆಪ್ಯುಟಿ ಮ್ಯಾನೇಜರ್ ಇ-4 – 2

    ಏರೋಸ್ಪೇಸ್/ ಏರೋನಾಟಿಕಲ್ ಇಂಜಿನಿಯರಿಂಗ್, ಇ ಆಂಡ್ ಸಿಯಲ್ಲಿ ಬಿಇ/ ಬಿ.ಟೆಕ್/ ಎಂಇ/ ಎಂ.ಟೆಕ್ ಪದವಿ ಪಡೆದಿರುವ ಗರಿಷ್ಠ 36 ವರ್ಷದೊಳಗಿನ (ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ) ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಬಿಇ/ ಬಿಟೆಕ್ ಮಾಡಿದ ಅಭ್ಯರ್ಥಿಗಳಿಗೆ 8 ವರ್ಷ, ಎಂಇ/ ಎಂಟೆಕ್ ಮಾಡಿದ ಅಭ್ಯರ್ಥಿಗಳಿಗೆ 6 ವರ್ಷದ ವೃತ್ತಿ ಅನುಭವ ಕೇಳಲಾಗಿದೆ. ಮಾಸಿಕ 60,000-1,80,000 ರೂ. ವೇತನ ಜತೆ ಇತರ ಭತ್ಯೆಗಳನ್ನು ನೀಡಲಾಗುವುದು. ಸಾಮಾನ್ಯವರ್ಗದ ಅಭ್ಯರ್ಥಿ ಹಾಗೂ ಎಸ್ಸಿ ಅಭ್ಯರ್ಥಿಗೆ ತಲಾ ಒಂದೊಂದು ಸ್ಥಾನ ಮೀಸಲಿರಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟ್ ಮಾಡಲಾದ ಆಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ ಅದರಲ್ಲಿ ಆಯ್ಕೆಯಾದವರನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಲಿಖಿತ ಪರೀಕ್ಷೆಯ ಕೇಂದ್ರ ಬೆಂಗಳೂರು ಆಗಿರುತ್ತದೆ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮಾಹಿತಿಯನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕವನ್ನು ಎಸ್​ಬಿಐ ಮೂಲಕ ಪಾವತಿಸತಕ್ಕದ್ದು.

    ಅರ್ಜಿ ಸಲ್ಲಿಸಲು ಕೊನೇ ದಿನ: 8.12.2021

    ಅರ್ಜಿ ಸಲ್ಲಿಕೆ ವಿಳಾಸ: Manager (HR/SC&US/HLS&SCB), Bharat Electronics Ltd, Jalahalli post, Bengaluru – 560013

    ಅಧಿಸೂಚನೆಗೆ: https://bit.ly/3FzZelq

    ಮಾಹಿತಿಗೆ: http://www.bel-india.in

    ಈಗ ರದ್ದಾದರೂ ಮುಂದೆ ಜಾರಿಯಾಗತ್ತಾ ಕೃಷಿ ಕಾನೂನು? ಸೂಚನೆ ಕೊಟ್ಟ ರಾಜ್ಯಪಾಲ ಮಿಶ್ರಾ

    VIDEO: ಭಯಾನಕ ಮಳೆಯಲ್ಲಿ ಪುನೀತ್‌ ಬ್ಯಾನರ್‌ ಎದುರು ಕೈಮುಗಿದು ಕುಳಿತ ಅಭಿಮಾನಿ- ವಿಡಿಯೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts