More

    ಈಗ ರದ್ದಾದರೂ ಮುಂದೆ ಜಾರಿಯಾಗತ್ತಾ ಕೃಷಿ ಕಾನೂನು? ಸೂಚನೆ ಕೊಟ್ಟ ರಾಜ್ಯಪಾಲ ಮಿಶ್ರಾ

    ಭದೋಹಿ (ಉತ್ತರ ಪ್ರದೇಶ): ಬಹಳ ವಿವಾದವನ್ನು ಸೃಷ್ಟಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಶೀಘ್ರದಲ್ಲಿಯೇ ಅದನ್ನು ಸಂಸತ್ತಿನ ಮುಂದೆ ಇಟ್ಟು ಹಿಂದಕ್ಕೆ ಪಡೆಯುವ ಎಲ್ಲಾ ಪ್ರಕ್ರಿಯೆ ನೆರವೇರಬೇಕಿದೆ. ಎಲ್ಲರೂ ಸಮ್ಮತಿ ಸೂಚಿಸಿದರೆ ಕಾಯ್ದೆ ರದ್ದಾಗಲಿದೆ.

    ಆದರೆ ಇದರ ಬೆನ್ನಲ್ಲೇ ರಾಜಸ್ಥಾನದ ರಾಜ್ಯಪಾಲ ಕಲ್​ರಾಜ್​ ಮಿಶ್ರಾ ನೀಡಿರುವ ಹೇಳಿಕೆಯೊಂದು ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಕೃಷಿ ಕಾಯ್ದೆ ರದ್ದಾದರೂ ಅಗತ್ಯ ಬಿದ್ದರೆ ಅದನ್ನು ವಾಪಸ್‌ ತರಲಾಗುವುದು ಎಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಮಾಧ್ಯಮ ಪ್ರತಿನಿಧಿಗಳ ಎದುರು ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೃಷಿ ಕಾನೂನುಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಲು ಪ್ರಯತ್ನಿಸಿ, ಸೋತಿದೆ. ಆದರೂ ಪ್ರಧಾನಿಯವರ ಈ ನಿರ್ಧಾರ ಅತ್ಯಂತ ಶ್ಲಾಘನೀಯ. ರೈತರು ಆಕ್ರೋಶ ವ್ಯಕ್ತಪಡಿಸಿದ್ದರ ಸಲುವಾಗಿ ಕಾನೂನುಗಳನ್ನು ಹಿಂಪಡೆಯುವುದು ಸೂಕ್ತವಾಗಿದೆ. ಇದೀಗ ಸಮಯವು ಅನುಕೂಲಕರವಾಗಿಲ್ಲ. ಅನಿವಾರ್ಯವಾದರೆ ಮತ್ತೆ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಬಹುದು ಎಂದಿದ್ದಾರೆ.

    ಒಂದೆಡೆ ಸಂಸತ್ತಿನಲ್ಲಿ ಅಂಗೀಕಾರವಾಗುವವರೆಗೆ ಪ್ರತಿಭಟನೆ ಕೈಬಿಡಲ್ಲ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದರೆ, ಈ ಮಾತನ್ನು ಹೇಳುವ ಮೂಲಕ ರಾಜ್ಯಪಾಲರು ಮತ್ತಷ್ಟು ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದ್ದಾರೆ.

    ಈ ಮೂರು ಕೃಷಿ ಕಾನೂನುಗಳನ್ನು ರೈತರ ಹಿತದೃಷ್ಟಿಯಿಂದ ಮಾಡಲಾಗಿದೆ. ಇದು ಅವರಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ. ಆದರೆ ರೈತರಿಗೆ ಇದರ ಪ್ರಯೋಜನಗಳನ್ನು ವಿವರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕೃಷಿ ಕಾನೂನನ್ನು ಹಿಂಪಡೆಯುವಂತೆ ರೈತರ ಕಡೆಯಿಂದ ಆಂದೋಲನ ನಡೆದಿದ್ದು, ಇದೀಗ ಕೊನೆಗೊಳ್ಳುವ ವಿಚಿತ್ರ ಪರಿಸ್ಥಿತಿ ದೇಶದಲ್ಲಿ ಉದ್ಭವಿಸಿದೆ ಎಂದರು.

    ಇನ್ನೊಂದೆಡೆ ಮಾತನಾಡಿದ ಸಂಸದ ಸಾಕ್ಷಿ ಮಹಾಹಾರ್‌, ಕೃಷಿ ಕಾನೂನುಗಳನ್ನು ಹಿಂಪಡೆಯುವ ನಿರ್ಧಾರಕ್ಕೂ, ಉತ್ತರ ಪ್ರದೇಶ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದರು. ಮೋದಿಯವರಿಗೆ ರಾಷ್ಟ್ರವೇ ಮೊದಲನೆಯದು. ಅವರು ಕೃಷಿ ಮಸೂದೆ ಮತ್ತು ರಾಷ್ಟ್ರ ಎರಡರಿಂದಲೂ ರಾಷ್ಟ್ರವನ್ನು ಆಯ್ಕೆ ಮಾಡಿದರು. ಆದರೆ ಇದನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಯಿತು ಎಂದರು.

    VIDEO: ಭಯಾನಕ ಮಳೆಯಲ್ಲಿ ಪುನೀತ್‌ ಬ್ಯಾನರ್‌ ಎದುರು ಕೈಮುಗಿದು ಕುಳಿತ ಅಭಿಮಾನಿ- ವಿಡಿಯೋ ವೈರಲ್‌

    ಕೃಷಿ ಕಾಯ್ದೆಯ ಪ್ರತಿಭಟನೆ ಬಂದ್‌ ಆಗ್ತಿರೋ ಬೆನ್ನಲ್ಲೇ ಸಿಎಎ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ ಪ್ರತಿಭಟನಾಕಾರರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts