More

    ಸೇನಾಪಡೆಯಲ್ಲಿ ಉನ್ನತ ಹುದ್ದೆಗೇರುವ ಕನಸೆ? ಪಿಯುಸಿ ಕಲಿಯುತ್ತಿದ್ದರೂ ಇಲ್ಲಿದೆ ನೋಡಿ ಅವಕಾಶ

    ಸೇನಾಪಡೆಯಲ್ಲಿ ಉನ್ನತ ಹುದ್ದೆಗೇರಿ ದೇಶ ಸೇವೆಗೆ ಅರ್ಪಿಸಿಕೊಳ್ಳಬೇಕೆಂಬ ಇಚ್ಛೆ ನಿಮ್ಮದಾಗಿದ್ದರೆ ರಾಷ್ಟ್ರೀಯ ಸೇನಾ ಅಕಾಡೆಮಿ ಹಾಗೂ ನೌಕಾಪಡೆ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಅವಕಾಶ ಇಲ್ಲಿದೆ. ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ ಬಳಿಕ ವಿವಿಧ ಸೇನಾಪಡೆಗಳಲ್ಲಿ ನಿಯುಕ್ತಿಗೊಳಿಸಲಾಗುತ್ತದೆ. ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‍ಸಿ) ನೇಮಕಾತಿ ಪರೀಕ್ಷೆಗೆ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ.

    ಒಟ್ಟು ಹುದ್ದೆಗಳು: 400. ಪಿಯುಸಿ ಆದವರಿಗೆ ಮೂರು ವರ್ಷಗಳವರೆಗೆ ಸೇನಾ ಹಾಗೂ ನೌಕಾ ಅಕಾಡೆಮಿಯಲ್ಲಿ ತರಬೇತಿ ನೀಡಿ ಬಿ.ಎ, ಬಿ.ಎಸ್ಸಿ ಅಥವಾ ಬಿ.ಟೆಕ್ ಪದವಿ ಪ್ರದಾನ ಮಾಡಲಾಗುತ್ತದೆ. ಇದರ ಆಧಾರದಲ್ಲಿ ಸೇನೆ, ನೌಕಾಪಡೆ ಹಾಗೂ ವಾಯುಪಡೆಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

    ಪರೀಕ್ಷಾ ಕೇಂದ್ರಗಳು
    ಬೆಂಗಳೂರು, ಧಾರವಾಡ ಸೇರಿ ವಿವಿಧ 41 ಸ್ಥಳಗಳಲ್ಲಿ ಪರೀಕ್ಷಾ ಕೇಂದ್ರಗಳಿರುತ್ತದೆ. ಪ್ರತಿ ಕೇಂದ್ರಗಳಿಗೆ ನಿಗದಿಪಡಿಸಿದ ಅಭ್ಯರ್ಥಿಗಳ ಸಂಖ್ಯೆ ಆಧರಿಸಿ ಮೊದಲು ಅರ್ಜಿ ಸಲ್ಲಿಸಿದವರಿಗೆ ಸ್ಥಳಾವಕಾಶ ನೀಡಲಾಗುವುದು. ನಂತರ ಅರ್ಜಿ ಸಲ್ಲಿಸಿದವರು ಬೇರೆ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

    ಪರೀಕ್ಷಾ ದಿನಾಂಕ
    ಡಿಫೆನ್ಸ್ ಅಕಾಡೆಮಿ ಪರೀಕ್ಷೆಯು 2021ರ ಏಪ್ರಿಲ್ 18 ಹಾಗೂ ನಾವಲ್ ಅಕಾಡೆಮಿ ಪರೀಕ್ಷೆಯು 2021ರ ಜನವರಿ 2 ರಂದು ನಡೆಯಲಿದೆ. ಪರೀಕ್ಷೆಗೆ 3 ವಾರ ಇರುವಂತೆ ಹಾಲ್‍ಟಿಕೆಟ್ ಬಿಡುಗಡೆ ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿಗಳು ಅದನ್ನು ಡೌನ್‍ಲೋಡ್ ಮಾಡಿಟ್ಟುಕೊಂಡು ಪರೀಕ್ಷೆಗೆ ಹಾಜರಾಗುವಾಗ ಹಿಡಿದುಕೊಂಡಿರಬೇಕು. ಜೂನ್‍ನಲ್ಲಿ Àಲಿತಾಂಶ ಪ್ರಕಟವಾಗಲಿದೆ.

    ಅವಕಾಶಗಳು
    * ನ್ಯಾಷನಲ್ ಡಿಫೆನ್ಸ್ ಅಕಾಡೆಮಿ – 370 (ಆರ್ಮಿ 208, ನೇವಿ 42, ಏರ್​ಫೋರ್ಸ್ 120)
    * ನಾವಲ್ ಅಕಾಡೆಮಿ – 30

    ವಿದ್ಯಾರ್ಹತೆ
    ಡಿಫೆನ್ಸ್ ಹುದ್ದೆಗೆ ಪಿಯುಸಿ ಅಥವಾ ತತ್ಸಮಾನ ಶಿಕ್ಷಣ, ಏರ್​ಫೋರ್ಸ್​ ಮತ್ತು ನ್ಯಾವಲ್​ ವಿಂಗ್‍ಗೆ ಪಿಯುಸಿ (ಫಿಜಿಕ್ಸ್, ಕೆಮಿಸ್ಟ್ರಿ, ಗಣಿತಶಾಸ). ದ್ವಿತೀಯ ಪಿಯುಸಿ ಅಧ್ಯಯನ ಮಾಡುತ್ತಿರುವ ಅಥವಾ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆದರೆ, 2021ರ ಡಿಸೆಂಬರ್ 24ರ ಒಳಗೆ ಶಿಕ್ಷಣ ಪೂರ್ಣಗೊಳಿಸಿದ ಪ್ರಮಾಣಪತ್ರ ಹೊಂದಿರಬೇಕು.

    ವಯೋಮಿತಿ: 2002ರ ಜುಲೈ 2ರ ನಂತರ ಮತ್ತು 2005ರ ಜುಲೈ 1ರ ಒಳಗೆ ಜನಿಸಿರಬೇಕು.

    ಅರ್ಜಿ ಹಿಂಪಡೆಯಲು ಅವಕಾಶ: ಪರೀಕ್ಷೆಗೆ ಹಾಜರಾಗಲು ಇಚ್ಛೆ ಇಲ್ಲದ ಅಭ್ಯರ್ಥಿಗಳಿಗೆ ಅರ್ಜಿ ಹಿಂಪಡೆಯುವ ಸೌಲಭ್ಯ ಕಲ್ಪಿಸಲಾಗಿದೆ.ಅರ್ಜಿ ಹಿಂಪಡೆಯಲು ಜನವರಿ 27 ರಿಂದ ಫೆಬ್ರವರಿ 2ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆಯಲ್ಲಿ ಗಣಿತಶಾಸ ಮತ್ತು ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು 900 ಅಂಕಗಳಿಗೆ ನಡೆಸಲಾಗುವುದು. ಪರೀಕ್ಷೆಯನ್ನು ಕಪ್ಪು ಬಾಲ್ ಪೆನ್ನಿನಲ್ಲೇ ಬರೆಯಬೇಕು. ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳಿರುತ್ತದೆ. ದೈಹಿಕ ಪರೀಕ್ಷೆಯನ್ನೂ ನಡೆಸಲಾಗುವುದು. ನಂತರ ಸಂದರ್ಶನ ಮೂಲಕ ಆಯ್ಕೆ ನಡೆಯುತ್ತದೆ.

    ಅರ್ಜಿ ಶುಲ್ಕ: ಎಸ್‍ಸಿ, ಎಸ್ಟಿ, ಜೆಸಿಒ/ ಎನ್‍ಸಿಒ/ ಒಆರ್​ಗಳ ಮಕ್ಕಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳು 100 ರೂ. ಶುಲ್ಕ ಪಾವತಿಸಬೇಕು.

    ಸ್ಟೈಪೆಂಡ್​, ಸ್ಕಾಲರ್​ಷಿಪ್​:

    ಅಭ್ಯರ್ಥಿಗಳಿಗೆ ಆಯಾ ರಾಜ್ಯಗಳಿಂದ ವಿವಿಧ ರೀತಿಯ ಸ್ಕಾಲರ್‍ಷಿಪ್‍ಗಳು ಲಭ್ಯವಿದೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರುವ ಕರ್ನಾಟಕದ ಕೆಡೆಟ್‍ಗಳಿಗೆ ಮಾಸಿಕ 1,000 ರೂ. ಹಾಗೂ ಔಟ್‍ಫಿಟ್ ಭತ್ಯೆಯಾಗಿ ಮೊದಲ ಅವಧಿಗೆ 12,000 ರೂ. ನೀಡಲಾಗುವುದು. ತರಬೇತಿ ಅವಧಿಯುದ್ದಕ್ಕೂ ಮಾಸಿಕ 56,100 ರೂ. ಸ್ಟೆಪೆಂಡ್ ನೀಡಲಾಗುತ್ತದೆ.

    ಠೇವಣಿ: ಆಯ್ಕೆಯಾದ ಅಭ್ಯರ್ಥಿಗಳು ನ್ಯಾಷನಲ್ ಡಿÉನ್ಸ್ ಅಕಾಡೆಮಿಯಲ್ಲಿ 5 ತಿಂಗಳ ಪಾಕೆಟ್ ಭತ್ಯೆ, ಉಡುಪು ಹಾಗೂ ಇತರ ಅಗತ್ಯ ವಸ್ತು ಹಾಗೂ ಇತರ ಸೇರಿ 59,850 ರೂ. ಠೇವಣಿ ಇಡಬೇಕು. ಇದರಲ್ಲಿ 15,935 ರೂ.ಗಳನ್ನು ಹಿಂದಿರುಗಿಸಲಾಗುವುದು.

    ಪ್ರಯಾಣ ಭತ್ಯೆ: ಮೊದಲ ಬಾರಿಗೆ ಎಸ್‍ಎಸ್‍ಬಿ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ 3ನೇ ಶ್ರೇಣಿಯ ರೈಲು/ ಬಸ್‍ನ ರಿಸರ್ವೇಷನ್ ಮತ್ತು ಸ್ಲೀಪರ್ ದರ್ಜೆಯ ಪ್ರಯಾಣ ವೆಚ್ಚವನ್ನು ಭಾರತದ ಮಿತಿಯೊಳಗೆ ನೀಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 19.1.2021
    ಅಧಿಸೂಚನೆಗೆ: https://bit.ly/2JtqvP6
    ಮಾಹಿತಿಗೆ: http://www.joinindianarmy.nic.in

    ಹೆಚ್ಚಿನ ಉದ್ಯೋಗದ ಮಾಹಿತಿ ಈ ಲಿಂಕ್​ ಕ್ಲಿಕ್ಕಿಸಿ

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ವಿವಿಧ ಪದವಿ, ಸ್ನಾತಕೋತ್ತರ ಪದವೀಧರರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ

    ಪಿಯುಸಿ ಪಾಸ್​ ಆಗಿರುವಿರಾ? ಹಾಗಿದ್ದರೆ ಬೆಂಗಳೂರಿನಲ್ಲಿ ಐಸಿಎಂಆರ್​ನಲ್ಲಿವೆ ಉದ್ಯೋಗ

    ಡಿಪ್ಲೋಮಾ ಕಲಿತವರಿಗೆ ಇಲ್ಲಿದೆ ಅವಕಾಶ: ಉತ್ತಮ ಸ್ಟೈಪೆಂಡ್​ ಜತೆ ನೇಮಕಾತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts