More

    ಇಂಜಿನಿಯರಿಂಗ್‌ ಪದವಿ ಪಡೆದಿರುವಿರಾ? ಪ್ರಾದೇಶಿಕ ಸಾರಿಗೆ ನಿಗಮದಿಂದ 20 ಹುದ್ದೆಗಳಿಗೆ ಅರ್ಜಿ ಆಹ್ವಾನ

    ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್​ ಕ್ಯಾಪಿಟಲ್​ ರೀಜನ್​ ಟ್ರಾನ್ಸ್​ಪೋರ್ಟ್​ ಕಾರ್ಪೋರೇಷನ್‌​ನಲ್ಲಿ (ಎನ್​ಸಿಆರ್​ಟಿಸಿ) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಒಟ್ಟು ಹುದ್ದೆಗಳು: 20

    ರೀಜನಲ್​ ರ್ಯಾಪಿಡ್​ ಟ್ರಾನ್ಸಿಟ್​ ಸಿಸ್ಟಮ್​ (ಆರ್​ಆರ್​ಟಿಎಸ್​) ಹಂತ-1ರ ಅನ್ವಯ ಅಭಿವೃದ್ಧಿ ಪಡಿಸುತ್ತಿರುವ ದೆಹಲಿ, ಹರಿಯಾಣ, ರಾಜಸ್ಥಾನ, ಉತ್ತರಪ್ರದೇಶದ ಕಾರಿಡಾರ್​ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು 22.5.2021ಕ್ಕೆ ಅನ್ವಯವಾಗುವಂತೆ ಎಲ್ಲ ಅರ್ಹತೆಗಳನ್ನು ಪಡೆದಿರಬೇಕು. ಆರಂಭದಲ್ಲಿ 3 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುವುದು. ನಂತರ ಸಂಸ್ಥೆಯ, ಯೋಜನೆಯ ಅವಶ್ಯಕತೆಗೆ ಅನುಸಾರವಾಗಿ ಅವಧಿ ವಿಸ್ತರಿಸಲಾಗುವುದು.

    ಹುದ್ದೆ ವಿವರ
    * ಸೀನಿಯರ್​ ಡಿಸೈನ್​ ಎಕ್ಸಪರ್ಟ್​/ ಅಡಿಷನಲ್​ ಡಿಸೈನ್​ ಎಕ್ಸ್​ಪರ್ಟ್​- 1
    * ಡೆಪ್ಯುಟಿ ಚೀಫ್‌ಆಕಿರ್ಟೆಕ್ಟ್​ – 2
    * ಅಸಿಸ್ಟೆಂಟ್​ ಸೈಟ್​ ಅಸೋಸಿಯೇಟ್​ – 9
    * ಅಸಿಸ್ಟೆಂಟ್​ ಡಿಸೈನ್​ ಎಕ್ಸ್​ಪರ್ಟ್​ – 3
    * ಅಸಿಸ್ಟೆಂಟ್​ ಆಕಿರ್ಟೆಕ್ಟ್​ – 3
    * ಅಸೋಸಿಯೇಟ್​ ಆಕಿರ್ಟೆಕ್ಟ್​ – 2

    ಶೈಕ್ಷಣಿಕ ಅರ್ಹತೆ: ಆಕಿರ್ಟೆಕ್ಟ್​ನಲ್ಲಿ ಪದವಿ, ಸಿವಿಲ್​/ ಸ್ಟ್ರಕ್ಚರಲ್​/ ಜಿಯೋ-ಟೆಕ್ನಿಕಲ್​/ ಸಾಯಿಲ್​ ಮೆಕ್ಯಾನಿಕ್ಸ್​ ಆ್ಯಂಡ್​ ಫೌಂಡೇಷನ್​ ಇಂಜಿನಿಯರಿಂಗ್​ನಲ್ಲಿ ಬಿಇ/ ಬಿ.ಟೆಕ್​/ ಎಂಇ/ ಎಂ.ಟೆಕ್​ ಮಾಡಿದ್ದು, ವೃತ್ತಿ ಅನುಭವ ಕೇಳಲಾಗಿದೆ. ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಗೆ ವೃತ್ತಿ ಅನುಭವದಲ್ಲಿ 2 ವರ್ಷ ವಿನಾಯಿತಿ ನೀಡಲಾಗುವುದು.

    ವಯೋಮಿತಿ: ಅಸೋಸಿಯೇಟ್​ ಆಕಿರ್ಟೆಕ್ಟ್​ಗೆ ಗರಿಷ್ಠ 35 ವರ್ಷ, ಡೆಪ್ಯುಟಿ ಚೀಫ್‌ಆಕಿರ್ಟೆಕ್ಟ್​ಗೆ ಗರಿಷ್ಠ 50 ವರ್ಷ, ಸೀನಿಯರ್​ ಡಿಸೈನ್​ ಎಕ್ಸ್​ಪರ್ಟ್​ಗೆ ಗರಿಷ್ಠ 55 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    ವೇತನ: ಅಭ್ಯರ್ಥಿಗಳ ವೃತ್ತಿ ಅನುಭವ ಆಧರಿಸಿ ವೇತನ ನಿಗದಿಪಡಿಸಲಾಗಿದ್ದು, ಅಂದಾಜು ಮಾಸಿಕ ವೇತನ ಸೀನಿಯರ್​ ಡಿಸೈನ್​ ಎಕ್ಸ್​ಪರ್ಟ್​ಗೆ 1,23,100-2,60,000 ರೂ., ಅಡಿಷನಲ್​ ಡಿಸೈನ್​ ಎಕ್ಸ್​ಪರ್ಟ್​ಗೆ 78,800-2,40,000 ರೂ., ಡೆಪ್ಯುಟಿ ಚೀಫ್‌ಆಕಿರ್ಟೆಕ್ಟ್​ಗೆ 78,800-2,00,000 ರೂ., ಅಸಿಸ್ಟೆಂಟ್​ ಸೈಟ್​ ಅಸೋಸಿಯೇಟ್​/ ಡಿಸೈನ್​ ಎಕ್ಸ್​ಪರ್ಟ್​/ ಆಕಿರ್ಟೆಕ್ಟ್​ಗೆ 56,100 – 1,77,500 ರೂ., ಅಸೋಸಿಯೇಟ್​ ಆಕಿರ್ಟೆಕ್ಟ್​ಗೆ 44,900-1,42,400 ರೂ. ವೇತನ ಇದೆ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವ ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

    ಸೇವಾ ವಿಮೆ: ಸಂಸ್ಥೆಯಲ್ಲಿ ಕನಿಷ್ಠ 2 ವರ್ಷ ಸೇವೆ ಸಲ್ಲಿಸುವುದಾಗಿ ಅಭ್ಯರ್ಥಿಗಳು 3,00,000 ರೂ. ಹಾಗೂ ಜಿಎಸ್​ಟಿ ಮೊತ್ತವನ್ನು ಸೇವಾ ಬಾಂಡ್​ ಹೆಸರಲ್ಲಿ ಸಂಸ್ಥೆಗೆ ನೀಡಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 11.6.2021
    ಅರ್ಜಿ ಸಲ್ಲಿಕೆ ವಿಳಾಸ: Career Cell, HR Department, National Capital Region Transport Corporation, 7/6 Siri Fort Institutional Area, August Kranti Marg, New Delhi-110049.


    ಅರ್ಜಿ ಸಲ್ಲಿಕೆ ಮೇಲ್​ ಐಡಿ: –[email protected]

    ಅಧಿಸೂಚನೆಗೆ: https://bit.ly/3oV8ucY

    ಮಾಹಿತಿಗೆ: ncrtc.in

    ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಖಾಲಿ ಇವೆ ವೈದ್ಯರು, ಶುಶ್ರೂಷಕರು, ಟೆಕ್ನೀಷಿಯನ್‌ ಹುದ್ದೆಗಳು- ಅರ್ಜಿ ಆಹ್ವಾನ

    ಇಂಜಿನಿಯರಿಂಗ್‌ ಪದವೀಧರರಿಗೆ ಭರ್ಜರಿ ಅವಕಾಶ: ಎನ್​ಟಿಪಿಸಿಯಲ್ಲಿ 280 ಹುದ್ದೆಗಳಿಗೆ ಆಹ್ವಾನ

    ದ್ವಿತೀಯ ಪಿಯುಸಿಯಾದವರಿಂದ ಸೆಕ್ರೇಟರಿಯೇಟ್​ ಅಸಿಸ್ಟೆಂಟ್​, ಸ್ಟೆನೋಗ್ರಾಫರ್ ಹುದ್ದೆಗೆ ಅರ್ಜಿ ಆಹ್ವಾನ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts