More

    ಮೈಸೂರು ಮುಕ್ತ ವಿವಿಯಲ್ಲಿ ಬೋಧಕ ಹುದ್ದೆಗೆ ಅರ್ಜಿ ಆಹ್ವಾನ: 32 ಹುದ್ದೆಗಳು ಖಾಲಿ

    ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಲಾ, ಮಾನವಿಕ, ವಿಜ್ಞಾನ, ಸಮಾಜ ವಿಜ್ಞಾನ, ವಾಣಿಜ್ಯ, ಮ್ಯಾನೇಜ್​ವೆುಂಟ್ ಮತ್ತು ಭಾಷಾ ವಿಭಾಗಗಳಲ್ಲಿ ಬೋಧಕ ಹುದ್ದೆಗಳಿಗೆ ತಾತ್ಕಾಲಿಕ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಯುಜಿಸಿ ಮಾನದಂಡದಂತೆ ವೇತನ, ವಯೋಮಿತಿ ಇರಲಿದೆ. ಹುದ್ದೆಗಳಲ್ಲಿ ಗ್ರಾಮೀಣ, ಮಹಿಳಾ, ಅಂಗವಿಕಲ ಹಾಗೂ ಜಾತಿ ಮೀಸಲಾತಿ ಇದ್ದು, ಅಧಿಸೂಚನೆಯಲ್ಲಿ ವಿವರ ನೀಡಲಾಗಿದೆ.

    ಹುದ್ದೆ ಹಾಗೂ ವಿಭಾಗವಾರು ವಿವರ

    * ಅಸೋಸಿಯೇಟ್ ಪ್ರೊಫೆಸರ್ – 25

    ಕನ್ನಡ- 2, ಹಿಂದಿ – 1, ಇಂಗ್ಲಿಷ್ – 2, ಕಾಮರ್ಸ್ – 2, ಮ್ಯಾನೇಜ್​ವೆುಂಟ್ – 2, ಇತಿಹಾಸ – 2, ಸಮಾಜಶಾಸ್ತ್ರ – 1, ರಾಜ್ಯಶಾಸ್ತ್ರ – 1, ಅರ್ಥಶಾಸ್ತ್ರ – 2, ಶಿಕ್ಷಣ – 1, ಲೈಬ್ರರಿ ಆಂಡ್ ಇನ್​ಫಮೇಷನ್ ಸೈನ್ಸ್ – 1, ಭೌತಶಾಸ್ತ್ರ – 1, ರಸಾಯನಶಾಸ್ತ್ರ – 1, ಗಣಿತಶಾಸ್ತ್ರ – 1, ಮೈಕ್ರೋಬಯಾಲಜಿ – 1, ಭೂಗೋಳ- 1, ಸೈಕಾಲಜಿ- 1, ಕಂಪ್ಯೂಟರ್ ಸೈನ್ಸ್- 1, ಜೈವಿಕ ತಂತ್ರಜ್ಞಾನ – 1 ಹುದ್ದೆ ಇದೆ.

    ಬೋಧನಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದು, ಪದವಿಯಲ್ಲಿ ಕನಿಷ್ಠ ಶೇ.55 ಅಂಕ ಪಡೆದಿರಬೇಕು. ಅಥವಾ ಪಿಎಚ್​ಡಿ ಮಾಡಿತುವ ಅಭ್ಯರ್ಥಿಗಳು ಅರ್ಹರು. ಕನಿಷ್ಠ 8 ವರ್ಷದ ವೃತ್ತಿ ಅನುಭವ ಕೇಳಲಾಗಿದೆ.
    * ಪ್ರೊಫೆಸರ್ – 7

    ಕನ್ನಡ-1, ಇಂಗ್ಲಿಷ್ – 1, ಕಾಮರ್ಸ್ – 1, ಮ್ಯಾನೇಜ್​ವೆುಂಟ್ – 1, ಇತಿಹಾಸ – 1, ಸಮಾಜಶಾಸ್ತ್ರ – 1, ರಾಜ್ಯಶಾಸ್ತ್ರ – 1 ಹುದ್ದೆ ಇದೆ.

    ಹುದ್ದೆಯ ವಿಭಾಗಗಳಿಗೆ ಅನುಗುಣವಾಗಿ ಪಿಎಚ್​ಡಿ ಪದವಿ ಪಡೆದಿರಬೇಕು. ಸಂಶೋಧನೆಯಲ್ಲಿ ತೊಡಗಿರುವ, 10 ಸಂಶೋಧನಾ ಪಬ್ಲಿಕೇಷನ್ಸ್ ಜತೆ ಕಾರ್ಯನಿರ್ವಹಿಸಿರುವ, ಕನಿಷ್ಠ 10 ವರ್ಷ ವೃತ್ತಿ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಅರ್ಜಿ ಶುಲ್ಕ: ಪ್ರೊಫೆಸರ್ ಹುದ್ದೆಗೆ 1,500 ರೂ. (ಎಸ್ಸಿ, ಎಸ್ಟಿ, ಪ್ರವರ್ಗ1ರ ಅಭ್ಯರ್ಥಿಗಳಿಗೆ 750 ರೂ.), ಅಸೋಸಿಯೇಟ್ ಪ್ರೊಫೆಸರ್ 1,200 ರೂ. (ಎಸ್ಸಿ, ಎಸ್ಟಿ, ಪ್ರವರ್ಗ1ರ ಅಭ್ಯರ್ಥಿಗಳಿಗೆ 600 ರೂ.) ಗಳನ್ನು ಪಾವತಿಸಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 11.11.2021

    ಅರ್ಜಿ ಸಲ್ಲಿಕೆ ವಿಳಾಸ: Rigistrar, Karnataka State Open University, Mukthagangothri, Mysore- 570006

     
    ಅಧಿಸೂಚನೆಗೆ:https://bit.ly/3ChE3Dm

    ಮಾಹಿತಿಗೆ: http://ksoumysuru.ac.in

    VIDEO: ಹುಟ್ಟುಹಬ್ಬದ ಖುಷಿಯಲ್ಲಿದ್ದ ಕಾಂಗ್ರೆಸ್‌ ನಾಯಕನಿಗೆ ಬಳ್ಳಾರಿ ಪಾಲಿಕೆ ಆಯುಕ್ತೆ ನೀಡಿದ್ರು ಬಿಗ್‌ ಶಾಕ್‌!

    ಇದು ಬೆಂಕಿಪೊಟ್ಟಣದ ಕುತೂಹಲದ ಕಥೆ: 14 ವರ್ಷಗಳ ಬಳಿಕ ರೇಟ್‌ ಡಬಲ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts