More

    ಐಟಿಐ ಮುಗಿಸಿರುವಿರಾ? ಹಾಗಿದ್ದರೆ ಕೇಂದ್ರ ಸರ್ಕಾರದಲ್ಲಿ ಖಾಲಿ ಇವೆ ಟೆಕ್ನಿಷಿಯನ್​ ಹುದ್ದೆಗಳು

    ಕೌನ್ಸಿಲ್ ಆಫ್​ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ಅಧೀನದಲ್ಲಿ ಕಾರ್ಯನಿರ್ವಹಿಸುವ ಹೈದರಾಬಾದ್‍ನಲ್ಲಿರುವ ಸೆಂಟರ್ ಫಾಲ್​ ಸೆಲ್ಯುಲಾರ್ ಆ್ಯಂಡ್ ಮಾಲಿಕ್ಯುಲರ್ ಬಯಾಲಜಿ (ಸಿಸಿಎಂಬಿ) ಸಂಶೋಧನಾ ಪ್ರಯೋಗಾಲಯವಾಗಿದೆ. ಪ್ರಸ್ತುತ ಇಲ್ಲಿ ಟೆಕ್ನಿಷಿಯನ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಹುದ್ದೆಗಳು: 25.

    ಸಿಸಿಎಂಬಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಕೆಲಸಗಳನ್ನು ಕೈಗೊಳ್ಳಲಾಗುತ್ತಿದ್ದು, ಇದಕ್ಕೆ ಸಹಾಯಕವಾಗುವಂತೆ ಟೆಕ್ನಿಷಿಯನ್‍ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. 25 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 13 ಸ್ಥಾನ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 3, ಇತರ ಹಿಂದುಳಿದ ವರ್ಗದವರಿಗೆ 6, ಎಸ್ಸಿಗೆ 2, ಎಸ್ಟಿಗೆ 1, ಅಂಗವಿಕಲರಿಗೆ 2 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಅಲ್ಲದೇ ಮಾಜಿ ಸೈನಿಕರಿಗೂ ಒಂದು ಸ್ಥಾನ ಮೀಸಲಾಗಿದೆ. ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಪ್ರೋತ್ಸಾಹ ನೀಡಲಾಗಿದೆ.

    ನೇಮಕ ಮಾಡಿಕೊಳ್ಳುವ ವಿಭಾಗ
    ಹೆಲ್ತ್ ಸೇಫ್ಟಿ ಆ್ಯಂಡ್ ಎನ್ವಿರಾನ್‍ಮೆಂಟ್, ಲ್ಯಾಬೊರೇಟರಿ ಅಸಿಸ್ಟೆಂಟ್, ನರ್ಸಿಂಗ್, ವೆಟರ್ನರಿ ಸೈನ್ಸ್/ ಅನಿಮಲ್ ಹೌಸ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್/ ಇನ್‍ಸ್ಟ್ರುಮೆಂಟ್ ಮೆಕ್ಯಾನಿಕ್, ಹಾರ್ಟಿಕಲ್ಚರ್, ಪ್ಲಂಬರ್, ಎಲೆಕ್ಟ್ರಿಷಿಯನ್, ಮೆಕ್ಯಾನಿಕ್ (ರೆಫ್ರಿಜರೇಟರ್ ಆ್ಯಂಡ್ ಏರ್ ಕಂಡೀಷನಿಂಗ್), ಫಿಟ್ಟರ್, ಟರ್ನರ್, ಕಂಪ್ಯೂಟರ್ ಆಪರೇಟರ್ ಆ್ಯಂಡ್ ಪೆÇ್ರೀಗ್ರಾಮಿಂಗ್ ವಿಭಾಗಗಳಲ್ಲಿ ಟೆಕ್ನಿಷಿಯನ್‍ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

    ವಿದ್ಯಾರ್ಹತೆ: ಎಸ್‍ಎಸ್‍ಸಿ/ ಎಸ್ಸೆಸ್ಸೆಲ್ಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಕನಿಷ್ಠ ಶೇ.55 ಅಂಕ ಪಡೆದಿರಬೇಕು. ನೇಮಕ ಮಾಡಿಕೊಳ್ಳುವ ವಿಭಾಗದಲ್ಲಿನ ವಿಷಯಗಳಲ್ಲಿ ರಾಜ್ಯ ಅಥವಾ ರಾಷ್ಟ್ರೀಯ ಸಂಸ್ಥೆಯಿಂದ ಐಟಿಐ ಪ್ರಮಾಣ ಪತ್ರ ಹೊಂದಿರಬೇಕು. ವೃತ್ತಿ ಅನುಭವ ಅವಶ್ಯ.

    ವಯೋಮಿತಿ: ಗರಿಷ್ಠ 28 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ 3 ರಿಂದ 10 ವರ್ಷ ವಯೋಸಡಿಲಿಕೆ ಇದೆ.

    ವೇತನ: ಮಾಸಿಕ 30,263 ರೂ. ಜತೆ ಮನೆ ಬಾಡಿಗೆ ಭತ್ಯೆ, ಪ್ರಯಾಣ ಭತ್ಯೆ, ಡಿಎ ಹಾಗೂ ಇತರ ಭತ್ಯೆಗಳನ್ನು ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಟ್ರೇಡ್ ಪರೀಕ್ಷೆ / ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಮೆಂಟಲ್ ಎಬಿಲಿಟಿ ಟೆಸ್ಟ್, ಸಾಮಾನ್ಯ ಜ್ಞಾನ, ಇಂಗ್ಲಿಷ್ ಭಾಷೆ ಹಾಗೂ ಹುದ್ದೆಗೆ ಸಂಬಂಧಿತ ವಿಷಯಗಳನ್ನು ಆಧರಿಸಿ 3 ಪತ್ರಿಕೆಗಳಲ್ಲಿ ಪರೀಕ್ಷೆ ನಡೆಸಲಾಗುವುದು.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ, ಸಿಎಸ್‍ಐಆರ್ ಸಿಬ್ಬಂದಿ ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 100 ರೂ. ಶುಲ್ಕವಿದೆ.

    ಆನ್‍ಲೈನ್ ಅರ್ಜಿ ಸಲ್ಲಿಸಲು ಕೊನೇ ದಿನ: 8.3.2021

    ಅಂಚೆ ಮೂಲಕ ಅರ್ಜಿ ಸಲ್ಲಿಸಲು ಕೊನೇ ದಿನ: 18.3.2021

    ವಿಳಾಸ: ecruitment Section, CSIR-Centre for Cellular and Molecular Biology, Uppal Road, Habsiguda, Hyderabad – 500007, Telangana

    ಅಧಿಸೂಚನೆಗೆ: https://bit.ly/3an5rEs
    ಮಾಹಿತಿಗೆ: www.ccmb.res.in

     

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

    ಅಂಚೆ ಇಲಾಖೆಯಲ್ಲಿ ಉದ್ಯೋಗ ಬಯಸಿರುವಿರಾ? 3,679 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಡಿಜಿಟಲ್ ಶಿಕ್ಷಣ ಸಂಸ್ಥೆಯಲ್ಲಿ 433 ಹುದ್ದೆಗಳು ಖಾಲಿ- ಎಸ್​ಎಸ್​ಎಲ್​ಸಿಯಾದವರಿಗೂ ಅವಕಾಶ

    ಚಿತ್ರದುರ್ಗ ಜಿಲ್ಲೆಯ ಅಂಗನವಾಡಿಯಲ್ಲಿದೆ ಮಹಿಳೆಯರಿಗೆ ಉದ್ಯೋಗ- 129 ಹುದ್ದೆಗಳು ಖಾಲಿ

    ವಿವಿಧ ವಿದ್ಯಾರ್ಹತೆ ಹೊಂದಿರುವವರಿಗೆ ಏಮ್ಸ್​ನಲ್ಲಿದೆ 120 ಅರೆ ವೈದ್ಯಕೀಯ ಹುದ್ದೆಗಳು

    ಐಟಿಐ ಉತ್ತೀರ್ಣರಾಗಿರುವಿರಾ? ಹಾಗಿದ್ದರೆ ಶಿಪ್​ಯಾರ್ಡ್​ನಲ್ಲಿ ನಿಮಗಿದೆ ಉದ್ಯೋಗಾವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts