More

    ವಿವಿಧ ಇಂಜಿನಿಯರಿಂಗ್ ಪದವೀಧರರಿಗೆ ಉತ್ತಮ ಅವಕಾಶ- ಮ್ಯಾನೇಜರ್​ ಹುದ್ದೆಗೆ ಆಹ್ವಾನ

    ನ್ಯಾಷನಲ್ ಮಿನರಲ್ ಡೆವಲಪ್‍ಮೆಂಟ್ ಕಾರ್ಪೋರೇಷನ್​ (ಎನ್‍ಎಂಡಿಸಿ) ನವರತ್ನ ಕಂಪನಿಗಳಲ್ಲಿ ಒಂದಾಗಿದೆ. ಪ್ರಸ್ತುತ ಯುವ ಇಂಜಿನಿಯರಿಂಗ್ ಪದವೀಧರರನ್ನು ಜೂನಿಯರ್ ಮ್ಯಾನೇಜರ್ ಆಗಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.

    ಆಯ್ಕೆಯಾದ ಅಭ್ಯರ್ಥಿಗಳನ್ನು ಸಂಸ್ಥೆಯ ಅವಶ್ಯಕತೆಗೆ ತಕ್ಕಂತೆ ಯಾವುದೇ ಸ್ಥಳಕ್ಕೆ ಬೇಕಾದರೂ ನಿಯೋಜಿಸಬಹುದಾಗಿದೆ. ಆಯಾ ಹುದ್ದೆಗಳಿಗೆ ವೃತ್ತಿ ಅನುಭವ ಇದ್ದವರನ್ನು ಪರಿಗಣಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

    ಹುದ್ದೆ ವಿವರ
    * ಜೂನಿಯರ್ ಮ್ಯಾನೇಜರ್ ಫೈನಾನ್ಸ್ – 6
    ಪದವಿ, ಸಿಎ/ ಐಸಿಡಬ್ಲುಎಫ್ಎ ಅಥವಾ ಇಂಜಿನಿಯರಿಂಗ್ ಪದವಿ (ಎಂಬಿಎ-ಫೈನಾನ್ಸ್) ಅಧ್ಯಯನ ಮಾಡಿದ್ದು, ಫೈನಾನ್ಸ್ ಆ್ಯಂಡ್ ಅಕೌಂಟಿಂಗ್, ಬಜೆಟ್ ಆ್ಯಂಡ್ ಕಾಸ್ಟಿಂಗ್, ಅಕೌಂಟಿಂಗ್ ಆ್ಯಂಡ್ ಆಡಿಟ್, ಇನ್ವೆಂಟರಿ ಮ್ಯಾನೇಜ್‍ಮೆಂಟ್, ವರ್ಕಿಂಗ್ ಕ್ಯಾಪಿಟಲ್ ಮ್ಯಾನೇಜ್‍ಮೆಂಟ್ ಹಾಗೂ ಇತರ ಕ್ಷೇತ್ರಗಳಲ್ಲಿ ಕನಿಷ್ಠ 2 ವರ್ಷ ವೃತ್ತಿ ಅನುಭವ ಇರುವವರು ಅರ್ಜಿ ಸಲ್ಲಿಸಬಹುದು.

    * ಜೂನಿಯರ್ ಮ್ಯಾನೇಜರ್ ಸಿವಿಲ್ – 3
    ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಓರ್ ಪ್ರೊಸೆಸಿಂಗ್ ಪ್ಲಾಂಟ್ಸ್, ಹೆವಿ ಮಷಿನ್ Ëಂಡೇಷನ್ಸ್, ಕನ್ವೇಯರ್ ಸ್ಟ್ರಕ್ಚರ್ಸ್, ಫೌಂಡೇಷನ್ ಫಾರ್ ಮೊಬೈಲ್ ಎಕ್ವಿಪ್‍ಮೆಂಟ್, ಪಬ್ಲಿಕ್ ಯುಟಿಲಿಟಿ ಸರ್ವೀಸಸ್‍ಗಳಲ್ಲಿ ಕನಿಷ್ಠ 2 ವರ್ಷ ವೃತ್ತಿ ಅನುಭವ ಅವಶ್ಯ.

    * ಜ್ಯೂನಿಯರ್ ಮ್ಯಾನೇಜರ್ ಎನ್ವಿರಾನ್‍ಮೆಂಟ್ – 2
    ಸಿವಿಲ್/ ಕೆಮಿಕಲ್/ ಮೈನಿಂಗ್/ ಎನ್ವಿರಾನ್‍ಮೆಂಟ್ ಇಂಜಿನಿಯರಿಂಗ್‍ನಲ್ಲಿ ಪದವಿ, ಎನ್ವಿರಾನ್‍ಮೆಂಟಲ್ ಮ್ಯಾನೇಜ್‍ಮೆಂಟ್/ ಇಂಜಿನಿಯರಿಂಗ್/ ಎನ್ವಿರಾನ್‍ಮೆಂಟಲ್ ಸೈನ್ಸ್/ ಜಿಯೋಲಜಿ/ ಕೆಮಿಸ್ಟ್ರಿ/ ಬಾಟ್ನಿಯಲ್ಲಿ ಸ್ನಾತಕೋತ್ತರ ಪದವಿ/ ಡಿಪ್ಲೋಮಾ/ ಪಿಎಚ್.ಡಿ ಅಧ್ಯಯನ ಮಾಡಿದ್ದು, ಸಂಬಂಧಿತ ಕ್ಷತ್ರದಲ್ಲಿ 2 ವರ್ಷ ವೃತ್ತಿ ಅನುಭವ ಇರುವವರು ಅರ್ಜಿ ಸಲ್ಲಿಸಬಹುದು.

    * ಜೂನಿಯರ್ ಮ್ಯಾನೇಜರ್ ಇಂಜಿನಿಯರಿಂಗ್ – 1
    ಇಂಡಸ್ಟ್ರಿಯಲ್ ಇಂಜಿನಿಯರಿಂಗ್/ ಮೈನಿಂಗ್/ ಮೆಕ್ಯಾನಿಕಲ್/  ಪ್ರೊಡಕ್ಷನ್​ ಇಂಜಿನಿಯರಿಂಗ್‍ನಲ್ಲಿ ಪದವಿ/ ಇಂಡಸ್ಟ್ರಿಯಲ್ ಇಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿ/ ಡಿಪ್ಲೋಮಾ ಮಾಡಿದ್ದು, ವೃತ್ತಿ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    * ಜ್ಯೂನಿಯರ್ ಮ್ಯಾನೇಜರ್ ರಾಜ್‍ಭಾಷಾ – 1
    ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಪದವಿ ಹಂತದಲ್ಲಿ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರುವ ಪದವಿ ಅಭ್ಯರ್ಥಿಗಳನ್ನು ಸೆಂಟ್ರಲ್ ಟ್ರಾನ್ಸಲೇಷನ್ ಬ್ಯೂರೋಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

    * ಜೂನಿಯರ್ ಮ್ಯಾನೇಜರ್ ಕಾನೂನು – 1
    3 ವರ್ಷದ ಕಾನೂನು ಪದವಿ/ ತತ್ಸಮಾನ ಶಿಕ್ಷಣ ಪಡೆದಿರುವ ಅಭ್ಯರ್ಥಿಗಳು ಅರ್ಹರಾಗಿದ್ದು, ಸಂಬಂಧಿತ ಕ್ಷೇತ್ರದಲ್ಲಿ ವೃತ್ತಿ ಅನುಭವ ಅವಶ್ಯ.

    ಮೀಸಲಾತಿ: ಎನ್‍ಎಂಡಿಸಿಯಲ್ಲಿರುವ 14 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 5 ಸ್ಥಾನ, ಎಸ್ಸಿಗೆ 3, ಎಸ್ಟಿಗೆ 1, ಇತರ ಹಿಂದುಳಿದ ವರ್ಗಕ್ಕೆ 4, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 1 ಸ್ಥಾನ ಮೀಸಲಿರಿಸಲಾಗಿದೆ.

    ವೇತನ: ಮಾಸಿಕ 50,000- 1,60,000 ರೂ. ವೇತನ ಇದೆ.

    ವಯೋಮಿತಿ: ಗರಿಷ್ಠ 30 ವರ್ಷ.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಸೈನಿಕ, ಎನ್‍ಎಂಡಿಸಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 500 ರೂ.

    ಸೂಚನೆ: ಆನ್‍ಲೈನ್ ಅರ್ಜಿ ಸಲ್ಲಿಕೆ ನಂತರ ಅರ್ಜಿ ಪ್ರತಿ ಪಡೆದು ಅದನ್ನು No.1353, Post Office, Humayun Nagar, Hyderabad, Telangana State, Pin- 500028 ವಿಳಾಸಕ್ಕೆ ಕಳುಹಿಸಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 27.4.2021
    ಅಧಿಸೂಚನೆಗೆ: https://bit.ly/3vNaHKr
    ಮಾಹಿತಿಗೆ: http://www.nmdc.co.in

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಲಖನೌ ಮೆಟ್ರೋ ರೈಲ್​ನಲ್ಲಿವೆ 292 ಖಾಲಿ ಹುದ್ದೆಗಳು: ಡಿಪ್ಲೋಮಾ ಪದವೀಧರರಿಗೆ ಆಹ್ವಾನ

    ವಿಜ್ಞಾನ ಪದವೀಧರರಿಗೆ ಉತ್ತಮ ಅವಕಾಶ: ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

    ಸಿವಿಲ್​, ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​ ಮುಗಿಸಿದವರಿಗೆ ಇಲ್ಲಿ ಉದ್ಯೋಗಾವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts