More

    ಬಾಬಾ ರಿಸರ್ಚ್ ಸೆಂಟರ್​ನಲ್ಲಿ 160 ಟ್ರೇನಿಗಳ ನೇಮಕಾತಿ- ಎಸ್​ಎಸ್​ಎಲ್​ಸಿ ಪಾಸಾದವರಿಗೂ ಅವಕಾಶ

    ಪರಮಾಣು ಶಕ್ತಿ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಬಾಬಾ ಅಟೋಮಿಕ್ ರಿಸರ್ಚ್ ಸೆಂಟರ್ ವಿವಿಧ ವಿಭಾಗಗಳಲ್ಲಿ ಟ್ರೇನಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಈ ವಿಚಾರವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 160 ಹುದ್ದೆಗಳು ಖಾಲಿ ಇವೆ.

    ತಮಿಳುನಾಡಿನ ಕಲ್ಪಕಂ ಹಾಗೂ ಮಹಾರಾಷ್ಟ್ರದ ತಾರಾಪುರ್‍ನಲ್ಲಿರುವ ನ್ಯೂಕ್ಲಿಯರ್ ರಿಸೈಕಲ್ ಬೋರ್ಡ್‍ನಲ್ಲಿ (ಎನ್‍ಆರ್​ಬಿ) 2 ವರ್ಷದ ತರಬೇತಿಗಾಗಿ ನೇಮಕ ಮಾಡಿಕೊಳ್ಳಲಾಗುತ್ತಿರುವ 160 ಟ್ರೇನಿಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 87, ಎಸ್ಸಿಗೆ 4, ಎಸ್ಟಿಗೆ 16, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 43, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 9, ಅಂಗವಿಕಲ ಅಭ್ಯರ್ಥಿಗೆ 1 ಸ್ಥಾನ ಮೀಸಲಿರಿಸಲಾಗಿದೆ.

    ಹುದ್ದೆ, ಸಂಖ್ಯೆ ವಿವರ
    – ಟ್ರೇನಿ ಕೆಟಗರಿ-ಐ (ಗ್ರೂಪ್ ಬಿ)
    * ಮೆಕ್ಯಾನಿಕಲ್ – 13
    * ಎಲೆಕ್ಟ್ರಿಕಲ್ – 6
    * ಕೆಮಿಕಲ್ – 7
    * ಸಿವಿಲ್ – 13
    * ಎಲೆಕ್ಟ್ರಾನಿಕ್ಸ್ – 3
    * ಇನ್‍ಸ್ಟ್ರುಮೆಂಟೇಷನ್ – 4
    * ಕೆಮಿಸ್ಟ್ರಿ – 4

    ಟ್ರೇನಿ ಕೆಟಗರಿ – ಐಐ (ಗ್ರೂಪ್ ಸಿ)
    * ಪ್ಲಾಂಟ್ ಆಪರೇಟರ್ – 15
    * ಎ/ಸಿ ಮೆಕ್ಯಾನಿಕ್ – 1
    * ಫಿಟ್ಟರ್ – 45
    * ವೆಲ್ಡರ್ – 5
    * ಎಲೆಕ್ಟ್ರಿಷಿಯನ್ – 6
    * ಎಲೆಕ್ಟ್ರಾನಿಕ್ ಮೆಕ್ಯಾನಿಕ್ – 11
    * ಮೆಷಿನಿಸ್ಟ್ – 3
    * ಇನ್‍ಸ್ಟ್ರುಮೆಂಟ್ ಮೆಕ್ಯಾನಿಕ್ – 13
    * ವೆಲ್ಡರ್ – 1
    * ಮೆಕ್ಯಾನಿಕ್ ಡೀಸೆಲ್ – 3
    * ಮೆಷಿನಿಸ್ಟ್ ಗ್ರೈಂಡರ್ – 2
    * ಲ್ಯಾಬೊರೇಟರಿ ಅಸಿಸ್ಟೆಂಟ್ – 1

    ನೇರ ನೇಮಕಾತಿ ಹುದ್ದೆಗಳು
    * ಟೆಕ್ನೀಷಿಯನ್ ಸಿ (ಬಾಯ್ಲರ್ ಆಪರೇಟರ್) – 3
    * ಟೆಕ್ನೀಷಿಯನ್ ಬಿ (ಪೈಂಟರ್) – 1

    ವಿದ್ಯಾರ್ಹತೆ: ಎಸ್‍ಎಸ್‍ಸಿ, ವಿಜ್ಞಾನದಲ್ಲಿ ಎಚ್‍ಎಸ್ಸಿ, 2 ವರ್ಷದ ಎನ್‍ಟಿಸಿ, ಹುದ್ದೆಗೆ ಅನುಗುಣವಾಗಿ 3 ವರ್ಷದ ಡಿಪ್ಲೋಮಾ . ಡಿಪ್ಲೋಮಾದಲ್ಲಿ ಕನಿಷ್ಠ ಶೇ.60 ಂಕ ಪಡೆದಿರಬೇಕು.

    ವಯೋಮಿತಿ: 31.1.2021ಕ್ಕೆ ಕನಿಷ್ಠ 18 ವರ್ಷ, ಕೆಟಗರಿ-1 ಹುದ್ದೆಗಳಿಗೆ ಗರಿಷ್ಠ 24, ಕೆಟಗರಿ-2 ಗರಿಷ್ಠ 22 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

    ದೈಹಿಕ ಅರ್ಹತೆ: ಎತ್ತರ- 160 ಸೆಂ.ಮೀ, ತೂಕ 45.5 ಕೆಜಿ. ಅಭ್ಯರ್ಥಿಗಳು ವೈದ್ಯಕೀಯವಾಗಿ ಫಿಟ್ ಆಗಿದ್ದರೆ ದೈಹಿಕ ಅರ್ಹತಾ ಮಾನದಂಡದಲ್ಲಿ ಸಡಿಲಿಕೆ ಇದೆ.

    ಸ್ಟೈಪೆಂಡ್: ಕೆಟಗರಿ-1: ಮೊದಲ ವರ್ಷ 16,000, 2ನೇ ವರ್ಷ 18,000 ರೂ., ಕೆಟಗರಿ- 2: ಮೊದಲ ವರ್ಷ 10,500 ರೂ., 2ನೇ ವರ್ಷ 12,500 ರೂ. ಗೌರವಧನ ನೀಡಲಾಗುವುದು. ಟೆಕ್ನೀಷಿಯನ್ ಸಿಗೆ 25,500 ರೂ., ಟೆಕ್ನೀಷಿಯನ್ ಬಿಗೆ 21,700 ರೂ. ವೇತನ ಇದೆ.

    ಆಯ್ಕೆ ಪ್ರಕ್ರಿಯೆ: 3 ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಮೊದಲ ಹಂತದಲ್ಲಿ ಗಣಿತ, ವಿಜ್ಞಾನ, ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಬಹು ಆಯ್ಕೆ ಮಾದರಿಯ ಲಿಖಿತ ಪರೀಕ್ಷೆ ನಡೆಸಲಾಗುವುದು. ನಂತರ ಟ್ರೇಡ್‍ಗೆ ಸಂಬಂಧಿಸಿದಂತೆ ಅಡ್ವಾನ್ಸ್‍ಡ್ ಟೆಸ್ಟ್ ನಡೆಸಲಾಗುವುದು. ನಂತರ ಕೌಶಲ ಪರೀಕ್ಷೆ ನಡೆಸಲಾಗುವುದು. ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ಇರುತ್ತದೆ. ಲಿಖಿತ ಪರೀಕ್ಷೆಯು ಮುಂಬೈನಲ್ಲಿರುತ್ತದೆ.

    ಅರ್ಜಿ ಶುಲ್ಕ: ಕೆಟಗರಿ 1ಗೆ 150 ರೂ., ಕೆಟಗರಿ 2ಗೆ 100 ರೂ. ಶುಲ್ಕ ನಿಗದಿಯಾಗಿದೆ. ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 31.1.2021
    ಅಧಿಸೂಚನೆಗೆ: https://bit.ly/3hJooTX
    ಮಾಹಿತಿಗೆ: http://www.barc.gov.in

    ಇನ್ನೂ ಅನೇಕ ಉದ್ಯೋಗಾವಕಾಶಗಳ ಕುರಿತು  ಇಲ್ಲಿ ಕ್ಲಿಕ್‌ ಮಾಡಿ..

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಡಿಪ್ಲೋಮಾ, ಬಿಇ ಮಾಡಿದ ಫ್ರೆಷರ್ಸ್‌ಗೆ ಕೆಪಿಟಿಸಿಎಲ್‌ನಲ್ಲಿ ಖಾಲಿ ಇವೆ 200 ಹುದ್ದೆಗಳು

    ಐಟಿಐ ಆಗಿದೆಯಾ? ಬೆಂಗಳೂರಿನಲ್ಲಿವೆ ಮ್ಯಾನೇಜರ್​ ಹುದ್ದೆಗಳು

    ಪ್ರೈಮರಿ, ಹೈಸ್ಕೂಲ್​ ಪಾಸಾದವರಿಗೂ ಅಂಗನವಾಡಿಯಲ್ಲಿದೆ 101 ಹುದ್ದೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts