More

    ಕ್ಷಯ ಸಂಶೋಧನಾ ಕೇಂದ್ರದಲ್ಲಿ 40ರಿಂದ 70 ವಯಸ್ಸಿನವರಿಗೂ ಇವೆ ವಿವಿಧ ಹುದ್ದೆಗಳು

    ಇಂಡಿಯನ್ ಕೌನ್ಸಿಲ್ ಆಫ್​ ಮೆಡಿಕಲ್ ರಿಸರ್ಚ್ ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಟ್ಯೂಬರ್​ಕು​​ಲೋಸಿಸ್‍ನಲ್ಲಿ (ಕ್ಷಯ ರೋಗ ಸಂಶೋಧನಾ ಕೇಂದ್ರ ) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ.

    ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಬಿಹಾರ್, ರಾಜಸ್ಥಾನ, ಒಡಿಶಾ, ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಪಂಜಾಬ್, ಅಸ್ಸಾಂ, ಹಿಮಾಚಲಪ್ರದೇಶ, ಜಮ್ಮು ಕಾಶ್ಮೀರ ಹಾಗೂ ಇತರ ಸ್ಥಳಗಳಲ್ಲಿ ಉದ್ಯೋಗಗಳಿದ್ದು, ಮೀಸಲಾತಿ ನಿಗದಿಯಾಗಿದೆ.

    ಕರ್ನಾಟಕದ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ:
    ational Tuberculosis Institute, No: 08, Avalon, Near Cauvery Theatre, Bellary Main Road, Guttahalli, Bengaluru –
    560 003 ವಿಳಾಸಕ್ಕೆ ಸಂಪರ್ಕಿಸಬಹುದು. ಕರ್ನಾಟಕದ ಅಭ್ಯರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆ ತಿಳಿದಿರಬೇಕು. ಆಯಾ ಸ್ಥಳದ ಪ್ರಾದೇಶಿಕ ಭಾಷೆ ಜತೆ ಹಿಂದಿ, ಇಂಗ್ಲಿಷ್ ಜ್ಞಾನ ಅವಶ್ಯ.

    ಹುದ್ದೆ, ಸಂಖ್ಯೆ ವಿವರ
    * ಸೈಂಟಿಸ್ಟ್ ಸಿ (ಮೆಡಿಕಲ್) – 10
    * ಕನ್ಸಲ್ಟಂಟ್ (ಮೆಡಿಕಲ್) – 10
    * ಕನ್ಸಲ್ಟಂಟ್ ಮೈಕ್ರೋಬಯೋಜಿಸ್ಟ್ (ನಾನ್-ಮೆಡಿಕಲ್) – 1
    * ಪ್ರಾಜೆಕ್ಟ್ ಟೆಕ್ನಿಕಲ್ ಆಫೀಸರ್ (ಸೀನಿಯರ್ ಇನ್ವೆಸ್ಟಿಗೇಟರ್, ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್, ಮೆಡಿಕಲ್ ಸೋಷಿಯಲ್ ವರ್ಕರ್) – 3
    * ಪ್ರಾಜೆಕ್ಟ್ ಅಸಿಸ್ಟೆಂಟ್ (ಫೀಲ್ಡ್ ಇನ್ವೆಸ್ಟಿಗೇಟರ್) – 3
    * ಪ್ರಾಜೆಕ್ಟ್ ಟೆಕ್ನಿಷಿಯನ್ ಐಐಐ (ಲ್ಯಾಬೊರೇಟರಿ ಟೆಕ್ನಿಷಿಯನ್ ಫಾರ್ ಫೀಲ್ಡ್ ಮತ್ತು ಫಾರ್ ಐಆರ್‍ಎಲ್ ಲ್ಯಾಬೊರೇಟರಿ, ಎಕ್ಸ್-ರೇ ಟೆಕ್ನಿಷಿಯನ್)- 16
    * ಡೇಟಾ ಎಂಟ್ರಿ ಆಪರೇಟರ್ (ಗ್ರೇಡ್ ಬಿ) – 3
    * ಪ್ರಾಜೆಕ್ಟ್ ಟೆಕ್ನಿಷಿಯನ್ ಐಐ (ಹೆಲ್ತ್ ಅಸಿಸ್ಟೆಂಟ್, ಲ್ಯಾಬೊರೇಟರಿ ಅಸಿಸ್ಟೆಂಟ್) – 12
    * ಅನ್‍ಸ್ಕಿಲ್ಡ್ ವರ್ಕರ್ (ಹೆಲ್ಪರ್,ಸ್ವೀಪರ್) – 10
    * ಸೀನಿಯರ್ ಪ್ರಾಜೆಕ್ಟ್ ಅಸಿಸ್ಟೆಂಟ್ (ಯುಡಿಸಿ) – 4

    ಶೈಕ್ಷಣಿಕ ಅರ್ಹತೆ:
    ಪ್ರೌಢ ಶಿಕ್ಷಣ, ಪಿಯುಸಿ, ಡಿಪ್ಲೋಮಾ, ಎಪಿಡೆಮಿಯೋಲಜಿ/ ಪಬ್ಲಿಕ್ ಹೆಲ್ತ್, ಸೈನ್ಸ್, ಸೋಷಿಯಲ್ ಸೈನ್ಸ್/ ಸೋಷಿಯಲ್ ವರ್ಕ್/ ಸೋಷಿಯಾಲಜಿಯಲ್ಲಿ ಪದವಿ, ಎಂಬಿಬಿಎಸ್/ಎಂಡಿ/ ಡಿಎನ್‍ಬಿ/ ಎಂಪಿಎಚ್/ ಎಂಎಇ, ಮೆಡಿಕಲ್/ ಮೈಕ್ರೊಬಯೋಲಜಿ/ ಬಯೋಟೆಕ್ನಾಲಜಿಯಲ್ಲಿ ಪಿಎಚ್‍ಡಿ

    ವಯೋಮಿತಿ:
    ಹುದ್ದೆಗೆ ಅನುಗುಣವಾಗಿ ಗರಿಷ್ಠ 40 ವರ್ಷ. ಕನ್ಸಲ್ಟಂಟ್ ಹುದ್ದೆಗೆ ಗರಿಷ್ಠ 70 ವರ್ಷ.

    ಅರ್ಜಿ ಸಲ್ಲಿಸಲು ಕೊನೇ ದಿನ: 21.12.2020
    ಅಧಿಸೂಚನೆಗೆ ಇಲ್ಲಿ ಕ್ಲಿಕ್ಕಿಸಿ: https://bit.ly/3oSNOAT

    ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ: http://www.nirt.res.in

    ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ.

    ಯುಪಿಎಸ್‍ಸಿಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಇಲ್ಲಿದೆ ಫುಲ್​ ಡಿಟೇಲ್ಸ್​…

    ಮಂಗಳೂರಿನ ಪೆಟ್ರೋಕೆಮಿಕಲ್ಸ್ ಕಂಪೆನಿಯಲ್ಲಿವೆ 25 ಹುದ್ದೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts