More

    ತುಮಕೂರು ವಿವಿ, ಧಾರವಾಡದ ಕೃಷಿ ವಿವಿಯಲ್ಲಿ ಖಾಲಿ ಇವೆ ಉಪನ್ಯಾಸಕ, ಸಹಾಯಕರ ಹುದ್ದೆ

    ತುಮಕೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಮತ್ತು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಮಾನವ ವಿಕಾಸ ಹಾಗೂ ಕುಟುಂಬ ಅಧ್ಯಯನ ವಿಭಾಗದಲ್ಲಿ ಪದವೀಧರರ ಸಹಾಯಕ ಹುದ್ದೆಗೆ ತಾತ್ಕಾಲಿಕ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ತುಮಕೂರು ವಿವಿಯ ವಿವರ:
    ತುಮಕೂರು ವಿಶ್ವವಿದ್ಯಾಲಯದಲ್ಲಿ 2021-22ನೇ ಸಾಲಿನ ಶೈಕ್ಷಣಿಕ ಸಾಲಿನ ಸ್ನಾತಕ ಪದವಿ ತರಗತಿಗಳಿಗೆ ವಿಷಯವಾರು ಬೋಧನೆ ಮಾಡಲು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆನ್​ಲೈನ್ ಅರ್ಜಿ ಸಲ್ಲಿಸುವಂತೆ ಅಧಿಸೂಚನೆ ಹೊರಡಿಸಲಾಗಿದೆ.

    ಸ್ನಾತಕ ಪದವಿಯ ವಿಷಯಗಳು: ಕನ್ನಡ, ಇಂಗ್ಲಿಷ್, ಇತಿಹಾಸ, ವಾಣಿಜ್ಯಶಾಸ್ತ್ರ, ಸಮಾಜಕಾರ್ಯ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಗಣಕಯಂತ್ರ ವಿಜ್ಞಾನ, ವಿದ್ಯುನ್ಮಾನ, ಸೂಕ್ಷ್ಮಜೀವಶಾಸ್ತ್ರ, ಭೌತಶಾಸ್ತ್ರ, ಜೈವಿಕ ತಂತ್ರಜ್ಞಾನ.

    ಆಯ್ಕೆಯ ಮಾನದಂಡಗಳು:

    * ಅಭ್ಯರ್ಥಿಗಳು ಯಾವುದಾದರು ಪದವಿ ಕುರಿತು ತಪ್ಪಾಗಿ ಮಾಹಿತಿ ನೀಡಿದ್ದಲ್ಲಿ ಅಥವಾ ಮೂಲ ದಾಖಲೆಗಳನ್ನು ಪರಿಶೀಲನೆಗೆ ಸಲ್ಲಿಸಲು ವಿಫಲರಾದಲ್ಲಿ ಅವರ ಅಂಕಗಳನ್ನು ರಿ-ಅಕ್ಸೆಸ್ ಮಾಡಿ ಪರಿಷ್ಕೃತ ಅಂಕಗಳನ್ನು ನಿರ್ಧರಿಸಲಾಗುವುದು. ಅಭ್ಯರ್ಥಿಯ ಪರಿಷ್ಕೃತ ಅಂಕಗಳ ಮೆರಿಟ್ ಪ್ರಕಾರ ಅವಕಾಶ ನೀಡಲಾಗುವುದು ಹಾಗೂ ಇಂತಹ ಪ್ರಕರಣಗಳ ಕುರಿತಂತೆ ದಾಖಲೆಗಳನ್ನು ನಿರ್ವಹಿಸಲಾಗುವುದು.

    * ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ವಿಭಿನ್ನ ಕೋಡ್ ಬಳಸಿ ಸಲ್ಲಿಸಿದಲ್ಲಿ ಅಂತಹ ಸಂದರ್ಭದಲ್ಲಿ ಅಭ್ಯರ್ಥಿಯೊಂದಿಗೆ ದೂರವಾಣಿ ಮೂಲಕ ಸಂರ್ಪಸಿ ತಪ್ಪಿರುವ ಅರ್ಜಿಯನ್ನು ತಿರಸ್ಕರಿಸಲಾಗುವುದು.

    * ಪ್ರತಿಯೊಂದು ವಿಷಯದಲ್ಲಿ ಕಾರ್ಯಭಾರವನ್ನು ಗಣನೆಗೆ ತೆಗೆದುಕೊಳ್ಳುವಾಗ ಎಲ್ಲ ಅಲೈಡ್ ರಿಲೇಟೆಡ್ ವಿಷಯಗಳ ಕಾರ್ಯಭಾರವನ್ನು ಪರಿಗಣಿಸಲಾಗುವುದು.

    * ಸ್ನಾತಕ ವಿಭಾಗಗಳಲ್ಲಿ ಬೋಧಿಸುವ ಕಡ್ಡಾಯ ವಿಷಯಗಳಾದ ಭಾರತ ಸಂವಿಧಾನ, ಪರಿಸರ ಅಧ್ಯಯನ ಮುಂತಾದ ವಿಷಯಗಳಲ್ಲಿ ಯಾರು ಯಾವ ವಿಷಯಗಳನ್ನು ಬೋಧಿಸಬೇಕೆಂಬ ಬಗ್ಗೆ ವಿಶ್ವವಿದ್ಯಾಲಯದ ಆದೇಶದನ್ವಯ ಕ್ರಮವಹಿಸಲಾಗುವುದು.

    * ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಗೂ ಸಂದರ್ಶನದ ದಿನಾಂಕವನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು. ಸಂದರ್ಶನದ ಬಗ್ಗೆ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ತಿಳಿಸುವುದಿಲ್ಲ ಎಂದು ಹೇಳಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 24.10.2021

    ಅಧಿಸೂಚನೆಗೆ: https://bit.ly/3C7cxsr

    ಮಾಹಿತಿಗೆ: http://tumkuruniversity.ac.in

    ಧಾರವಾಡ ಕೃಷಿ ವಿವಿ ವಿವರ:

    ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಮಾನವ ವಿಕಾಸ ಹಾಗೂ ಕುಟುಂಬ ಅಧ್ಯಯನ ವಿಭಾಗದಲ್ಲಿ ಪದವೀಧರರ ಸಹಾಯಕ ಹುದ್ದೆಗೆ ತಾತ್ಕಾಲಿಕ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಬಿಎಚ್​ಎಸ್ಸಿ/ ಎಂಎಚ್​ಎಸ್ಸಿ ಅಧ್ಯಯನ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಬಿಎಚ್​ಎಸ್ಸಿ ಮಾಡಿರುವ ಅಭ್ಯರ್ಥಿಗಳಿಗೆ ಮಾಸಿಕ 10,000 ರೂ. ಹಾಗೂ ಎಂಎಚ್​ಎಸ್ಸಿ ಮಾಡಿರುವ ಅಭ್ಯರ್ಥಿಗಳಿಗೆ ಮಾಸಿಕ 14,000 ರೂ. ವೇತನ ನಿಗದಿಪಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಸೂಚನೆ ಜತೆ ನೀಡಲಾಗಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಭಾವಚಿತ್ರ, ಅಗತ್ಯ ದಾಖಲೆಗಳ ಎರಡು ಪ್ರತಿ ಹಾಗೂ ಎಲ್ಲ ದಾಖಲೆಗಳ ಮೂಲ ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ. ಸರ್ಕಾರದ ನಿಯಮದನ್ವಯ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಈ ತಾತ್ಕಾಲಿಕ ನೇಮಕಾತಿಯಲ್ಲಿ ಪ್ರಧಾನ್ಯತೆ ನೀಡಲಾಗುವುದು.

    ಸಂದರ್ಶನ ನಡೆಯುವ ದಿನಾಂಕ: 26.10.2021 (ಬೆಳಗ್ಗೆ 10 ರಿಂದ)

    ಸಂದರ್ಶನ ನಡೆಯುವ ಸ್ಥಳ: ವಿದ್ಯಾಧಿಕಾರಿ (ಸವಿ), ಸಮುದಾಯ ವಿಜ್ಞಾನ ಮಹಾವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಧಾರವಾಡ-580005

    ಅಧಿಸೂಚನೆಗೆ: https://bit.ly/3b0OeR6

    ಮಾಹಿತಿಗೆ: http://www.uasd.edu/

    ಮೈಸೂರು ಮುಕ್ತ ವಿವಿಯಲ್ಲಿ ಬೋಧಕ ಹುದ್ದೆಗೆ ಅರ್ಜಿ ಆಹ್ವಾನ: 32 ಹುದ್ದೆಗಳು ಖಾಲಿ

    ಪುಟಾಣಿಗಳು ಶಾಲೆಯ ಮುಖ ನೋಡಲು ಕ್ಷಣಗಣನೆ… ವಾರದಲ್ಲಿ ಮೂರೇ ದಿನ… ಹೇಗಿದೆ ಸಿದ್ಧತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts