More

    ಸಾರಿಗೆ ಇಲಾಖೆಯಿಂದ ಬೇವು-ಬೆಲ್ಲ: 10 ಸಾವಿರ ಸಿಬ್ಬಂದಿಗೆ ಸಿಹಿ- 50 ಸಾವಿರ ನೌಕರರಿಗೆ ಕಹಿ ಕಹಿ…

    ಬೆಂಗಳೂರು: ನೌಕರರಿಗಷ್ಟೇ ವೇತನ ಪಾವತಿಸಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳು, ಮುಷ್ಕರ ನಿರತ ಸಾರಿಗೆ ನೌಕರರಿಗೆ ಮತ್ತೊಂದು ಶಾಕ್ ನೀಡಿವೆ. ಆಮೂಲಕ ಕೆಲಸಕ್ಕೆ ಬಂದರಷ್ಟೇ ವೇತನ ಸಿಗಲಿದೆ ಎಂಬ ಸಂದೇಶವನ್ನು ಸಾರಿವೆ.

    6ನೇ ವೇತನ ಅಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರ ಸ್ಥಗಿತಗೊಳಿಸಲು ನಾನಾ ಕಸರತ್ತು ಪಡುತ್ತಿರುವ ಸಾರಿಗೆ ನಿಗಮಗಳು, ಇದೀಗ ವೇತನ ತಡೆಹಿಡಿಯುವ ಅಸ್ತ್ರವನ್ನು ಪ್ರಯೋಗಿಸಿವೆ. ಮುಷ್ಕರ ಬಿಟ್ಟು ಕೆಲಸಕ್ಕೆ ಹಾಜರಾದರಷ್ಟೇ ಮಾರ್ಚ್ ತಿಂಗಳ ವೇತನ ಸಿಗಲಿದೆ ಎಂದು ನೌಕರರು ಸಂದೇಶ ರವಾನಿಸಲಾಗಿದೆ.

    ಸಾರಿಗೆ ಇಲಾಖೆಯಿಂದ ಬೇವು-ಬೆಲ್ಲ: 10 ಸಾವಿರ ಸಿಬ್ಬಂದಿಗೆ ಸಿಹಿ- 50 ಸಾವಿರ ನೌಕರರಿಗೆ ಕಹಿ ಕಹಿ...

    ಆಮೂಲಕ ಕಳೆದ ಮೂನಾಲ್ಕು ದಿನಗಳಿಂದ ಕೆಲಸಕ್ಕೆ ಹಾಜರಾಗಿ ಬಸ್ ಸೇವೆ ನೀಡುತ್ತಿರುವ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಸೇರಿ ಇನ್ನಿತರರಿಗಷ್ಟೇ ವೇತನ ಪಾವತಿಸಲಾಗಿದೆ.

    ನಾಲ್ಕೂ ನಿಗಮಗಳಲ್ಲಿನ 1.30 ಲಕ್ಷ ಸಿಬ್ಬಂದಿ ಪೈಕಿ ಈಗಾಗಲೇ ಅಧಿಕಾರಿಗಳು ಸೇರಿ ಇನ್ನಿತರರಿಗೆ ಸಂಬಳ ಪಾವತಿಸಲಾಗಿದೆ. ಉಳಿದ 60 ಸಾವಿರ ನೌಕರರಲ್ಲಿ ಸದ್ಯ 10,430 ಸಿಬ್ಬಂದಿ  ಕೆಲಸಕ್ಕೆ ಹಾಜರಾಗಿದ್ದು, ಅವರೆಲ್ಲರಿಗೂ ಸೋಮವಾರ ವೇತನ ಪಾವತಿಯಾಗಿದೆ. ಅದರಲ್ಲಿ ಕೆಎಸ್​ಆರ್​ಟಿಸಿಯ 4,256, ಬಿಎಂಟಿಸಿ 960, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ 1,837 ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ 3,377 ನೌಕರರು ಸೇರಿದ್ದಾರೆ.

    ತಟ್ಟೆ- ಲೋಟ ಬಡಿಯುತ್ತ ಬೀದಿಗಿಳಿದ ಮಕ್ಕಳು: ಪಾಲಕರು ಪೊಲೀಸ್​ ಠಾಣೆಯಲ್ಲಿ; ಕಂಗೆಟ್ಟ ಮಕ್ಕಳು ರಸ್ತೆಯಲ್ಲಿ!

    ಪತ್ನಿಗೆ ಕೋಪ ಬಂದಾಗ ಒದೀತಾಳೆ, ಸೌಟಿನಿಂದ ಹೊಡೀತಾಳೆ, ಸಂಶಯ ಪಿಶಾಚಿ ಬೇರೆ- ನಾ ಏನು ಮಾಡಲಿ?

    ತವರಿನಿಂದ ಮಹಿಳೆಗೆ ಬಂದಿರುವ ಆಸ್ತಿಯಲ್ಲಿ ಯಾವ ಮಕ್ಕಳಿಗೂ ಪಾಲು ಸಿಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts