More

    ಶ್ರೀಗಂಧದ ಮರ ಕಡಿದವನಿಗೆ 10 ವರ್ಷ ಜೈಲು

    ಸಿದ್ದಾಪುರ: ಶ್ರೀಗಂಧದ ಕಟ್ಟಿಗೆ ಕಳ್ಳತನ ಮಾಡಿ ಸಾಗಿಸುತ್ತಿರುವಾಗ ಸಿಕ್ಕಿ ಬಿದ್ದ ಕಳ್ಳನಿಗೆ ಶಿರಸಿ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ 10 ವವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

    ಸಿದ್ದಾಪುರ ತಾಲೂಕಿನ ಮಹದೇವ ಬೀರಾ ನಾಯ್ಕ ಶಿಕ್ಷೆಗೆ ಗುರಿಯಾದ ಅಪರಾಧಿ. ಪ್ರಕರಣದ ಮೊದಲ ಅಪರಾಧಿ ಮೃತಪಟ್ಟಿದ್ದಾನೆ. 2019 ರಲ್ಲಿ ಸಿದ್ದಾಪುರದ ಕುಣಜಿ ಗ್ರಾಮದ ಅರಣ್ಯದಲ್ಲಿ ಶ್ರೀಗಂಧದ ಮರ ಕಡಿದು, ಅದನ್ನು ತುಂಡುಗಳನ್ನು ಮಾಡಿ ಬೈಕ್‌ನಲ್ಲಿ ಸಾಗಿಸುತ್ತಿರುವಾಗ ಇಬ್ಬರು ಸಿಕ್ಕಿ ಬಿದ್ದಿದ್ದರು.

    ಸಿದ್ದಾಪುರ ಆರ್‌ಎಫ್‌ಒ ಕಿರಣಕುಮಾರ ವೈ.ಕೆ.ಇಬ್ಬರನ್ನು ಬಂಧಿಸಿ ತನಿಖೆ ನಡೆಸಿದ್ದರು. ನಂತರ ಆರ್‌ಎಫ್‌ಒ ಶಿವಾನಂದ ನಿಂಗಾಣಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

    ವಿಚಾರಣೆ ನಡೆಸಿದ ಶಿರಸಿ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರಾದ ಕಿರಣ ಕಿಣಿ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಜೇಶ ಮಳಗೀಕರ್ ವಾದ ಮಂಡಿಸಿದ್ದರು.

    ಇದನ್ನೂ ಓದಿ: ಡಿಸಿ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಹಣ ಲಪಟಾಯಿಸಿದ ಖದೀಮರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts