More

    ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪ್ರತಿಭಟನಾ‌ ಪರೇಡ್‌: ಪ್ರತಿ ಹಳ್ಳಿಯಿಂದಲೂ ಟ್ರ್ಯಾಕ್ಟರ್‌

    ನವದೆಹಲಿ: ಇಂದು ಭಾರತಕ್ಕೆ 72ನೇ ಗಣರಾಜ್ಯೋತ್ಸವದ ಸಂಭ್ರಮವಾದರೆ, ಈ ಬಾರಿ ದೆಹಲಿಯ ರಾಜಪಥ್‌ದಲ್ಲಿ ನಡೆಯುವ ಮುಖ್ಯ ಕಾರ್ಯಕ್ರಮ ಕೆಲವು ವಿಶೇಷತೆಗಳಿಗೆ ಕಾರಣವಾಗಿದೆ.

    ಮೊದಲನೆಯದ್ದಾಗಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದಲ್ಲಿ ಟ್ರ್ಯಾಕ್ಟರ್‌ ಪರೇಡ್‌ ನಡೆಯಲಿದೆ. ಸಿಂಘು, ಟಿಕ್ರಿ, ಘಾಜಿಪುರ್ ಗಡಿಯ ಮೂಲಕ ಟ್ರ್ಯಾಕ್ಟರ್‌ ಬರಲಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಈಗ ಗಣರಾಜ್ಯೋತ್ಸವ ನಡೆಯಲಿರುವ ಪ್ರದೇಶಕ್ಕೂ ಲಗ್ಗೆ ಇಡಲಿದೆ. ಆದ್ದರಿಂದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರತಿಭಟನಾ ರ್ಯಾಲಿಗೆ ಗಣರಾಜ್ಯೋತ್ಸವ ಸಾಕ್ಷಿಯಾಗಲಿದೆ.

    ವಿಶೇಷ ಎಂದರೆ ಈ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಪಂಜಾಬ್ ರೈತರು ಪ್ರತಿ ಹಳ್ಳಿಯಿಂದಲೂ ಟ್ರ್ಯಾಕ್ಟರ್ ಮೂಲಕ ದೆಹಲಿಗೆ ಆಗಮಿಸುತ್ತಿದ್ದಾರೆ. ರೈತರ ಸೋಗಿನಲ್ಲಿ ಕೆಲವು ಪಟ್ಟಭದ್ರಹಿತಾಸಕ್ತಿಗಳು ಹಾನಿ ಮಾಡುವ ಸಂಭವ ಇರುವ ಹಿನ್ನೆಲೆಯಲ್ಲಿ ಭಾರಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

    ಇದಾಗಲೇ ರೈತರು ತಮ್ಮ ಗ್ರಾಮಗಳಿಂದ ಹೊರಟಿದ್ದು, ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಕುಂಡ್ಲಿ ಮತ್ತು ಮುರ್ತಾಲ್ ನಡುವಿನ ವಿಶಾಲವಾದ ಪ್ರದೇಶದಲ್ಲಿ ಟ್ರಾಕ್ಟರುಗಳ ಚುಕ್ಕೆ.ಗಳು ಕಾಣುತ್ತಿರುವ ದೃಶ್ಯ ಸೆರೆಯಾಗಿದೆ. ಇನ್ನೂ ಕೆಲವೇ ಕ್ಷಣಗಳಲ್ಲಿ ದೆಹಲಿ ತಲುಪಲಿರುವ ಈ ಲಕ್ಷಾಂತರ ಟ್ರ್ಯಾಕ್ಟರ್‌ಗಳು ಕೃಷಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಭಾಗವಹಿಸಲಿದೆ.
    ರಾಜಪಥದಲ್ಲಿ ಗಣರಾಜ್ಯೋತ್ಸವ ಪರೇಡ್​ಗೆ ಸಿದ್ಧತೆ ಪೂರ್ಣಗೊಂಡಿದ್ದರೆ, ರೈತರ ಟ್ರ್ಯಾಕ್ಟರ್ ಪರೇಡ್​ಗೆ ಭರ್ಜರಿ ಸಿದ್ಧತೆ ನಡೆದಿದೆ. ಇಂದು ಗಣರಾಜ್ಯೋತ್ಸವ ಪರೇಡ್ ಮುಗಿದ ಕೆಲವೇ ಕ್ಷಣಗಳಲ್ಲಿ ರೈತರ ಟ್ರಾಕ್ಟರ್ ಪರೇಡ್ ಆರಂಭವಾಗಲಿದೆ ಎಂದು ಮೂಲಗಳು ಹೇಳಿವೆ.

    ದೆಹಲಿಯಲ್ಲಿ ನಡೆಯೋ ಟ್ರ್ಯಾಕ್ಟರ್ ಱಲಿಗೆ ಎಂಜಿನ್​ ತರೋದಕ್ಕೆ ಮಾತ್ರ ಅವಕಾಶ ಇದ್ದು, ಯಾರೂ ಟ್ರಾಲಿ ತರುವಂತಿಲ್ಲ. ಅಷ್ಟೇ ಅಲ್ಲ ಱಲಿ ಆರಂಭವಾದ ನಂತರ ಯಾರೂ ಓವರ್ ಟೇಕ್ ಮಾಡದೇ, ರೈತ ಮುಖಂಡರ ಕಾರುಗಳನ್ನ ಹಿಂಬಾಲಿಸಬೇಕು. ರ್ಯಾಲಿ ಸುಗಮವಾಗಿ ನಡೆಯಲು ಸ್ವಯಂಸೇವಕರನ್ನ ನಿಯೋಜಿಸಲಾಗಿದ್ದು, ಅವರು ನೀಡುವ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಷರತ್ತು ವಿಧಿಸಲಾಗಿದೆ.

    ಆರನೇ ಪತ್ನಿ ಸೆಕ್ಸ್‌ಗೆ ಒಪ್ಪಲಿಲ್ಲ ಎಂದು ಏಳನೇ ವಧುವಿಗಾಗಿ ಹುಡುಕಾಡುತ್ತಿದ್ದಾನೆ ಈ ವೃದ್ಧ!

    ಸಚಿವ ಅಶೋಕ್‌ ಪಿ.ಎ ಲಂಚ ಕೇಳಿದ್ರು, ನನ್ ಬಳಿ ಆಡಿಯೋ ಇದೆ ಎಂದ ಸಬ್‌ ರಿಜಿಸ್ಟ್ರಾರ್‌ ಹೀಗೂ ಹೇಳಿದ್ರು…

    ಬಿಗಿ ಬಂದೋಬಸ್ತ್‌ ನಡುವೆ ಇಂದು ಗಣರಾಜ್ಯೋತ್ಸವ- ಶುಭ ಕೋರಿದ ರಾಷ್ಟ್ರಪತಿ, ಪ್ರಧಾನಿ

    ರಾಹುಲ್‌ಗಾಂಧಿ ಬಾಯಲ್ಲಿ ‘ನಿಕ್ಕರ್‌ವಾಲಾ’… ಟ್ರಾನ್ಸ್‌ಲೇಟರ್‌ ಬಾಯಲ್ಲಿ ‘ಲಿಕ್ಕರ್‌ವಾಲಾ’ ಆದಾಗ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts