More

    ಲ್ಯಾಪ್‌ಟಾಪ್‌, ಫೋನ್‌ಗಳನ್ನೂ ಸೋಪ್‌ ಹಾಕಿ ತೊಳೀತಾಳೆ, ಆರು ಸಲ ಸ್ನಾನ ಮಾಡ್ತಾಳೆ… ಬೆಂಗಳೂರಿನ ಟೆಕ್ಕಿಯಿಂದ ಕೇಸ್‌

    ಬೆಂಗಳೂರು: ಮನಸ್ಸು ಯಾವಾಗ ಹೇಗೆ ವರ್ತಿಸುತ್ತದೆ ಎಂದು ಹೇಳಲು ಬರುವುದಿಲ್ಲ. ಅದರಲ್ಲಿಯೂ ಮಾನಸಿಕವಾಗಿ ಆಘಾತಕ್ಕೆ ಒಳಗಾಗಾದ ಮನಸ್ಸು ನಮ್ಮ ಅರಿವಿಗೆ ಬಾರದಂತೆ ವಿಚಿತ್ರವಾಗಿ ವರ್ತಿಸುತ್ತದೆ. ನೋಡುಗರಿಗೆ, ಕೇಳುಗರಿಗೆ ಇದು ವಿಚಿತ್ರ, ಹಾಸ್ಯಾಸ್ಪದ ಎನ್ನಿಸಿದರೆ, ವಿಚಿತ್ರವಾಗಿ ಆಡುವ ವ್ಯಕ್ತಿಗಳ ಕುಟುಂಬಸ್ಥರಿಗೆ ಅದು ಹಿಂಸೆಯೆನಿಸುತ್ತದೆ. ಆದರೆ ಇದರಲ್ಲಿ ತಪ್ಪು ಯಾರದ್ದೂ ಅಲ್ಲ, ಇಂಥವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎನ್ನುತ್ತಾರೆ ತಜ್ಞರು.

    ಬೆಂಗಳೂರಿನ ಸುಮಾ ಎನ್ನುವವರು ತಮ್ಮ ತಾಯಿಯ ಸಾವಿನ ನಂತರ ಮಾನಸಿಕ ಆಘಾತಕ್ಕೆ ಒಳಗಾಗಿ ಕೆಲವೊಂದು ಅತಿರೇಕ ಎನಿಸುವ ಕೆಲಸ ಮಾಡುತ್ತಿದ್ದು, ಇದನ್ನು ಸಹಿಸಿಕೊಳ್ಳಲಾಗದೇ ಅವರ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ನಡೆದಿದೆ.

    ಅಷ್ಟಕ್ಕೂ ಆಗಿರುವುದೇನೆಂದರೆ, ಕರೊನಾದಿಂದಾಗಿ ಸ್ವಚ್ಛತೆಯ ಬಗ್ಗೆ ಅತೀ ಎನಿಸುವಂತೆ ಕಾಳಜಿ ತೋರುತ್ತಿದ್ದ ಸುಮಾ ಅವರಿಗೆ ಅವರ ತಾಯಿಯ ನಿಧನದ ನಂತರ ಮಾನಸಿಕ ಆಘಾತವಾಗಿದೆ. ಇದು ಯಾವ ಪರಿ ಹೋಗಿದೆಯೆಂದರೆ, ದಿನಕ್ಕೆ ಐದಾಗು ಬಾರಿ ಸ್ನಾನ ಮಾಡುತ್ತಿದ್ದಾರೆ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ತಾವು ಬಳಸಿದ ಸೋಪನ್ನು ಮತ್ತೊಂದು ಸೋಪಿನಿಂದ ಸ್ವಚ್ಛಗೊಳಿಸುತ್ತಿದ್ದಾರೆ. ವರ್ಕ್‌ ಫ್ರಂ ಹೋಂನಲ್ಲಿರುವ ಪತಿಯ ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌ಗಳನ್ನೂ ಸೋಪಿನಿಂದ ಹಾಕಿ ತಿಕ್ಕುತ್ತಿದ್ದಾರೆ.

    ಇದರಿಂದ ಬೇಸತ್ತಿರುವ ಅವರ ಪತಿ ಇದೀಗ ವಿವಾಹ ವಿಚ್ಛೇದನಕ್ಕೆ ಮುಂದಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇಂಥ ಮಾನಸಿಕ ಸಮಸ್ಯೆಗೆ ಒಸಿಡಿ ಎನ್ನುತ್ತಾರೆ.

    2009ರಲ್ಲಿ ಸುಮಾ ಮತ್ತು ಜಯಂತ್ ಮದುವೆಯಾಗಿದೆ. ಎಂಬಿಎ ಪದವೀಧರೆಯಾಗಿರುವ ಸುಮಾ ಹಾಗೂ ಸಾಫ್ಟ್‌ವೇರ್‌ ಇಂಜಿನಿಯರ್‌ ಜಯಂತ್‌ ಮದುವೆಯಾದ ಮೇಲೆ ಲಂಡನ್‍ಗೆ ಹೋಗಿದ್ದರು. ಮೊದಲಿನಿಂದಲೂ ಸುಮಾ ಅವರಿಗೆ ಸ್ವಚ್ಛತೆಯ ಗೀಳು. ಮಗು ಹುಟ್ಟಿದ ಮೇಲೆ ಇದು ಇನ್ನಷ್ಟು ಹೆಚ್ಚಾಯಿತು. ಪತಿ ಕೆಲಸ ಮುಗಿಸಿ ಮನೆಗೆ ಬಂದಾಗ ಶೂ, ಬಟ್ಟೆ, ಸೆಲ್‍ಫೋನ್ ಸ್ವಚ್ಛ ಮಾಡುವಂತೆ ಪದೇಪದೆ ಹೇಳುತ್ತಿದ್ದಳು. ಆಗಲೇ ಗಂಡನಿಗೆ ಇದು ಅತಿ ಎನಿಸಲು ಶುರುವಾಗಿತ್ತು.

    ಇದರಿಂದ ಆಗಲೇ ಕೌಟುಂಬಿಕ ಸಮಾಲೋಚನೆಗೂ ಸುಮಾಳನ್ನು ಜಯಂತ್‌ ಕರೆದುಕೊಂಡು ಹೋಗಿದ್ದರು. ಈ ನಡುವೆ ಎರಡನೆಯ ಮಗುವಾಯಿತು. ಆಗ ಸ್ವಚ್ಛತೆ ಮತ್ತಷ್ಟು ಹೆಚ್ಚಿತು. ಕೌಟುಂಬಿಕ ಸಮಾಲೋಚನೆ ನಂತರ ಇನ್ನೇನು ಪತ್ನಿ ಒಂದು ಹಂತಕ್ಕೆ ಬರುತ್ತಿದ್ದಾಳೆ ಎಂದಾಗ ಕರೊನಾ ಒಕ್ಕರಿಸಿ ಮತ್ತೆ ಸ್ವಚ್ಛತೆ ಶುರುಹಚ್ಚಿಕೊಂಡರು. ತಾಯಿಯ ನಿಧನದ ನಂತರ ಮಾನಸಿಕ ಆಘಾತಕ್ಕೆ ಒಳಗಾಗಿ ಮತ್ತಷ್ಟು ಸ್ವಚ್ಛತೆ ಶುರು ಮಾಡಿರುವುದರಿಂದ ಬೇಸತ್ತು ಈಗ ವಿಚ್ಛೇದನಕ್ಕೆ ಮುಂದಾಗಿದ್ದಾರೆ.

    ಪದೇಪದೆ ಸ್ಯಾನಿಟೈಸರ್ ಬಳಸುವುದು, ಪೀಠೋಪಕರಣಗಳು, ಚಮಚ, ಪ್ಲೋರ್, ಮ್ಯಾಟ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಮತ್ತೆ ಮತ್ತೆ ಸ್ವಚ್ಛ ಮಾಡುತ್ತಾಳೆ. ಮಕ್ಕಳ ಶಾಲೆಗೆ ಹೋಗಿ ಬಂದರೆ ಅವರ ಬ್ಯಾಗ್, ಯೂನಿಫಾರ್ಮ್, ಶೂಗಳನ್ನು ಅತೀ ಎನಿಸುವಷ್ಟು ಶುಚಿಮಾಡುತ್ತಾಳೆ. ಇದನ್ನೆಲ್ಲಾ ಹೇಗೋ ಸಹಿಸಿಕೊಳ್ಳುತ್ತಿದ್ದೆ. ಇದೀಗ ನನ್ನ ಲ್ಯಾಪ್‌ಟಾಪ್‌, ಫೋನ್‌ ಎಲ್ಲವನ್ನೂ ಸೋಪಿನಿಂದ ತಿಕ್ಕಿತಿಕ್ಕಿ ತೊಳೆಯಲು ಶುರು ಮಾಡಿದ್ದು, ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ ಗಿರೀಶ್‌.

    ಸದ್ಯ ಪೊಲೀಸರು ಈ ಕೇಸ್‌ ಅನ್ನು ವನಿತಾ ಸಹಾಯವಾಣಿಗೆ ಕಳುಹಿಸಿದ್ದಾರೆ. ಅಲ್ಲಿ ಆಪ್ತಸಮಾಲೋಚನೆ ನಡೆಸಲು ಕೋರಲಾಗಿದೆ.

    ರಸ್ತೆ ಉದ್ಘಾಟನೆ ವೇಳೆ ಕಾಯಿ ಒಡೆದಾಗ ನಡೆಯಿತು ಅನಾಹುತ!ಮುಜುಗರಕ್ಕೊಳಗಾದ ಶಾಸಕಿ ಕೆಂಡಾಮಂಡಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts