More

    ಅಮೆರಿಕದ ವಿಮಾನನಿಲ್ದಾಣದಲ್ಲಿ 3 ತಿಂಗಳು ಅಡಗಿದ್ದ ಈತ! ಕಾರಣ ಕೇಳಿದ್ರೆ ನೀವೂ ನಗ್ತೀರಾ

    ಲಾಸ್‌ ಏಂಜಲೀಸ್‌: ಕರೊನಾ ಕಾಲಿಟ್ಟು ವರ್ಷವೇ ಆಗುತ್ತಾ ಬಂದಿತು. ಇದು ಸೃಷ್ಟಿಸಿರುವ ಆವಾಂತರ ಅಷ್ಟಿಷ್ಟಲ್ಲ. ಆದರೆ ಕರೊನಾ ವೈರಸ್​ ಜತೆಗೆನೇ ನಾವು ಬದುಕಲೇಬೇಕು ಎಂದು ಎಲ್ಲರಿಗೂ ತಿಳಿದಿರುವ ಕಾರಣ, ಈಗ ಈ ವೈರಸ್​ ಬಗ್ಗೆ ಹೆಚ್ಚಿನವರು ಅಷ್ಟು ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ 3-4 ತಿಂಗಳ ಹಿಂದಿನ ವಾತಾವರಣ ಒಮ್ಮೆ ನೆನಪಿಸಿಕೊಳ್ಳಿ…

    ಮನೆಯಿಂದ ಹೊರಕ್ಕೆ ಕಾಲಿಡಲೂ ಹೆದರುತ್ತಿದ್ದ ದಿನಗಳವು. ಅದರಲ್ಲಿಯೂ ಹೊರದೇಶಗಳಿಂದ ಬರುವ ಪ್ರಯಾಣಿಕರನ್ನು ಬಹುತೇಕ ಎಲ್ಲಾ ದೇಶಗಳೂ ಭಯೋತ್ಪಾದಕರಂತೆಯೇ ಕಾಣುತ್ತಿದ್ದ ದಿನಗಳೆಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಯಾವ್ಯಾವುದೋ ದೇಶಗಳಿಂದ ಕರೊನಾ ವೈರಸ್​ ಹೊತ್ತು ತಮ್ಮ ದೇಶಕ್ಕೆ ತಂದರೆ ಎಂಬ ಭೀತಿಯಿಂದ ಅವರ ಮೇಲೆ ನಿಗಾ ಇಡಲಾಗುತ್ತಿತ್ತು.

    ಇದೇ ಕಾರಣಕ್ಕೆ ವಿದೇಶದಿಂದ ಪ್ರಯಾಣ ಮಾಡಿ ಬಂದ ವ್ಯಕ್ತಿಯೊಬ್ಬ ವಿಮಾನ ನಿಲ್ದಾಣದಲ್ಲಿಯೇ ಅಡಗಿಕುಳಿತಿರುವ ಘಟನೆ ಅಮೆರಿಕದ ಶಿಕಾಗೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ! ಕೋವಿಡ್​ ಭೀತಿಯಿಂದಾಗಿ ಈತ ಯಾರ ಕಣ್ಣಿಗೂ ಬೀಳದಂತೆ ಅಲ್ಲಿಯೇ ಮೂರು ತಿಂಗಳಿನಿಂದ ಅಡಗಿದ್ದು, ಇದೀಗ ಪೊಲೀಸರು ಬಂಧಿಸಿದ್ದಾರೆ.

    ಅಮೆರಿಕದಂಥ ದೇಶದಲ್ಲಿ ಯಾವುದೋ ಒಬ್ಬ ವ್ಯಕ್ತಿ, ಅಷ್ಟೆಲ್ಲಾ ಭದ್ರತೆ ಇದೆ ಎನ್ನುವ ವಿಮಾನ ನಿಲ್ದಾಣದಲ್ಲಿ ಮೂರು ತಿಂಗಳು ಅಡಗಿಕುಳಿತಿದ್ದರೂ ಯಾರ ಗಮನಕ್ಕೂ ಬಾರದೇ ಇರುವುದು ಒಂದೆಡೆ ಆತಂಕ ಉಂಟುಮಾಡಿದ್ದರೆ, ಈತ ಕೋವಿಡ್​ಗೆ ಹೆದರಿ ಹೀಗೆ ಮಾಡಿದ್ದ ಎನ್ನುವುದನ್ನು ಕೇಳಿ ನಗುವಂತಾಗಿದೆ.

    ಭಾರತದ ಮೂಲದ ಲಾಸ್‌ ಏಂಜಲೀಸ್‌ನ ನಿವಾಸಿಯಾಗಿರುವ ಆದಿತ್ಯ ಸಿಂಗ್‌ ಇಂಥ ಕೃತ್ಯ ಎಸಗಿದವನು. ಓ ಹರೇಯಿಂದ ಶಿಕಾಗೊಗೆ ಬಂದಿದ್ದ ಸಿಂಗ್‌, ಕೋವಿಡ್‌ ಭಯದಿಂದಾಗಿ ವಿಮಾನ ನಿಲ್ದಾಣದ ಭದ್ರತಾ ಪ್ರದೇಶದಲ್ಲಿ ವಾಸವಾಗಿದ್ದ. ಪ್ರಯಾಣಿಕರು ನೀಡಿದ ಭಿಕ್ಷೆಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದನಂತೆ!

    ಕಂಪೆನಿಯೊಂದರಲ್ಲಿ ಆಪರೇಶನ್‌ ಮ್ಯಾನೇಜರ್‌ ಆಗಿ ಕೆಲ ನಿರ್ವಹಿಸುತ್ತಿದ್ದು, ಅಕ್ಟೋಬರ್‌ನಿಂದ ಕಾಣೆಯಾಗಿದ್ದಾನೆ ಎಂದು ದೂರು ದಾಖಲಾಗಿತ್ತು. ಅದರೆ ಇದೀಗ ವಿಮಾನನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದು, ಆತನ ವಿರುದ್ಧ ಕೇಸ್​ ದಾಖಲು ಮಾಡಲಾಗಿದೆ.

    ಈತನಿಗೆ ಜಾಮೀನು ನೀಡಲು ನಿರಾಕರಿಸಿರುವ ಕೋರ್ಟ್​, ಏರ್‌ಪೋರ್ಟ್‌ ಅಧಿಕಾರಿಗಳ ಗಮನಕ್ಕೆ ಬಾರದೇ ಇಷ್ಟು ದಿನ ಅಲ್ಲೇ ಉಳಿದುಕೊಂಡಿರುವುದಕ್ಕೆ ಕಳವಳ ವ್ಯಕ್ತಪಡಿಸಿದೆ. ಭದ್ರತಾ ನಿಯಮದ ಉಲ್ಲಂಘನೆ ಎಂದು ಹೇಳಿದೆ.
    ಲಾಸ್‌ ಏಂಜಲೀಸ್‌ನ ಉಪನಗರ ನಿವಾಸಿಯಾಗಿರುವ ಸಿಂಗ್‌ ಸ್ನೇಹಿತರೊಂದಿಗೆ ವಾಸ ಮಾಡುತ್ತಿದ್ದ. ಆತನಿಗೆ ಯಾವುದೇ ಕ್ರಿಮಿನಲ್‌ ಹಿನ್ನಲೆಗಳಿಲ್ಲ ಎಂದು ಕೋರ್ಟ್‌ ಹೇಳಿದೆ.

    ಕಾರಿನೊಳಗೆ ಪ್ರೇಯಸಿ ಜತೆ… ಪತ್ನಿ ಕೈಲಿ ಸಿಕ್ಕಿಬಿದ್ದ ಇಂಜಿನಿಯರ್! ಮುಂದೆ?

    ನಿನ್ನ ಜತೆ ಮಲಗಲ್ಲ- ಡಿವೋರ್ಸೂ ಕೊಡಲ್ಲ ಎಂದರೆ ಕಾನೂನಿನಲ್ಲಿ ಪತಿ ಏನು ಮಾಡಬಹುದು?

    ಗಂಡ ಊರಿನಲ್ಲಿ ಇಲ್ಲದಾಗ ನನ್ನ ಕರೆದು ಏನೇನೋ ಮಾಡಿದಳು- ಈಗ ದಿಕ್ಕೇ ತೋಚದಾಗಿದೆ, ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts