More

    ಆಂಧ್ರಕ್ಕೆ ಮೂರು ರಾಜಧಾನಿ- ಸಿಎಂಗೆ ಭಾರಿ ಹಿನ್ನಡೆ: ಪ್ರಣಾಳಿಕೆಯಲ್ಲಿರುವಂತೆ ನಡೆದುಕೊಳ್ಳಿ ಎಂದ ಹೈಕೋರ್ಟ್​

    ಹೈದರಾಬಾದ್: ಆಂಧ್ರ ಪ್ರದೇಶದ ಅಭಿವೃದ್ಧಿಯ ದೃಷ್ಟಿಯಿಂದ ಮೂರು ರಾಜಧಾನಿ ಇರಬೇಕು ಎಂದು ರಾಜ್ಯ ಸರ್ಕಾರ ನಡೆಸಿದ್ದ ಕಾನೂನು ಹೋರಾಟ ಇಂದು ಮುಗಿದಿದ್ದು, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ಭಾರಿ ಹಿನ್ನಡೆಯುಂಟಾಗಿದೆ.

    ಅಮರಾವತಿ ಶಾಸಕಾಂಗ ರಾಜಧಾನಿ ವಿಶಾಖಪಟ್ಟಣಂ, ಕಾರ್ಯಾಂಗ ರಾಜಧಾನಿ ಮತ್ತು ಕರ್ನೂಲ್ ನ್ಯಾಯಾಂಗ ರಾಜಧಾನಿ ಆಗಬೇಕೆಂದು ರಾಜ್ಯ ಸರ್ಕಾರ ಬಯಸಿತ್ತು. ಇದರ ವಿರುದ್ಧ ರೈತರು ಹೈಕೋರ್ಟ್​ ಮೆಟ್ಟಿಲೇರಿದ್ದರು. ರಾಜಧಾನಿ ನಿರ್ಮಾಣಕ್ಕೆ ತಮ್ಮ ಜಮೀನು ಕೇಳಿದ್ದನ್ನು ಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು.

    ಅದರ ಅಂತಿಮ ತೀರ್ಪು ಈಗ ಹೊರಬಂದಿದೆ. ಮೂರು ರಾಜಧಾನಿ ಮತ್ತು ಸಿಆರ್​ಡಿಪಿ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಪೀಠ, ಸಿಆರ್​ಡಿಪಿ ಕಾಯ್ದೆ ಪ್ರಕಾರವೇ ಸರ್ಕಾರ ಆಡಳಿತ ನಡೆಸಬೇಕು. ಒಂದು ರಾಜ್ಯಕ್ಕೆ ಮೂರು ರಾಜಧಾನಿಗಳಿರಲು ಸಾಧ್ಯವಿಲ್ಲ ಎಂದು ಕೋರ್ಟ್​ ಹೇಳಿದೆ.

    ಅಮರಾವತಿಯಿಂದ ಯಾವುದೇ ಕಚೇರಿ ಸ್ಥಳಾಂತರ ಮಾಡದಂತೆ ಆದೇಶಿಸಿರುವ ಆಂಧ್ರ ಹೈಕೋರ್ಟ್, ಮಾಸ್ಟರ್ ಪ್ಲಾನ್​ನಲ್ಲಿ ಏನಿದೆಯೋ ಅದನ್ನು ಅನುಷ್ಠಾನಗೊಳಿಸಬೇಕು. ಕಾಲಕಾಲಕ್ಕೆ ಅಭಿವೃದ್ಧಿ ಕಾಮಗಾರಿಗಳ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

    ಪ್ರಣಾಳಿಕೆಯಲ್ಲಿ ನೀಡಿದಂತೆ 6 ತಿಂಗಳಲ್ಲಿ ಅಮರಾವತಿ ಅಭಿವೃದ್ಧಿಗೊಳಿಸಬೇಕು. ಭೂಮಿ ನೀಡಿದ ರೈತರಿಗೆ 3 ತಿಂಗಳಲ್ಲಿ ಪರ್ಯಾಯ ಭೂಮಿ ನೀಡಿ ಎಂದು ಸರ್ಕಾರಕ್ಕೆ ತಾಕೀತು ಮಾಡಿದೆ.ಅಲ್ಲದೇ, ಅಮರಾವತಿ ರಾಜಧಾನಿ ಮಾಡಲು ಭೂಮಿ ನೀಡಿದ ರೈತರಿಗೆ ಮೂಲಸೌಕರ್ಯ ಒದಗಿಸಿದ ನಿವೇಶನಗಳನ್ನು ನೀಡಬೇಕು. ಅಧೀನಕ್ಕೆ ಪಡೆದ ಭೂಮಿಯನ್ನು ರಾಜಧಾನಿ ಅಭಿವೃದ್ಧಿಗಾಗಿ ಮಾತ್ರ ಬಳಕೆ ಮಾಡಬೇಕು. ಪ್ರಕರಣದಲ್ಲಿ ಎಲ್ಲಾ ಅರ್ಜಿದಾರರಿಗೆ ವೆಚ್ಚವಾಗಿ 50 ಸಾವಿರ ರೂ. ಪಾವತಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ.

    ಅಮರಾವತಿ ರಾಜಧಾನಿಗಾಗಿ ಈ ಹಿಂದೆಯೇ ರೂಪಿಸಿದ ಯೋಜನೆಯನ್ನೇ ಮುಂದುವರಿಸಬೇಕು. ರಾಜಧಾನಿ ವಿಚಾರದಲ್ಲಿ ನಿರ್ಣಯಿಸುವ ಅಧಿಕಾರ ಶಾಸಕಾಂಗಕ್ಕೆ ಇಲ್ಲ. ಸಿಆರ್​ಡಿಪಿ ಕಾಯ್ದೆ ಪ್ರಕಾರವೇ ಸರ್ಕಾರ ಆಡಳಿತ ನಡೆಸಬೇಕು ಎಂದು ಹೇಳಿದೆ.

    ವಿದೇಶದ ಎಂಬಿಬಿಎಸ್​ಗೆ ಭಾರತದಲ್ಲಿ ಉದ್ಯೋಗವೂ ಸುಲಭವಲ್ಲ, ಇಲ್ಲಿ ಪಾಸಾಗೋದು ಕಷ್ಟ- ಇಲ್ಲಿದೆ ನೋಡಿ ಡಿಟೇಲ್ಸ್​…

    ಅಮ್ಮನನ್ನು ನೋಡಿಕೋ ಎಂದರೆ ಟಾಯ್ಲೆಟ್​ ಕ್ಲೀನರ್​​ ಹಾಕಿ ಕಣ್ಣಿನ ದೃಷ್ಟಿಯನ್ನೇ ತೆಗೆದ ಕೇರ್​ ಟೇಕರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts