More

    ಇದು ಸಾವಿನ ಸಂದೇಶ ಹುಷಾರ್‌! ಶಿಕ್ಷಕನ ಮನೆಗೆ ಬಂದ ಪಾರ್ಸೆಲ್‌ನಲ್ಲಿ ಬುಲೆಟ್‌ಗಳ ಜತೆಗೆ ಬೆದರಿಕೆ

    ದಹಿಸರ್‌ (ಮುಂಬೈ): ‘ಯೇ ಮೌತ್ ಕಾ ಪೈಗಾಮ್ ಹೈ (ಇದು ಸಾವಿನ ಸಂದೇಶ)’ ಎಂದು ಬರೆದಿರುವ ಪಾರ್ಸೆಲ್‌ ಒಂದು ಇಲ್ಲಿಯ ಶಿಕ್ಷಕನ ಮನೆ ಬಾಗಿಲಿಗೆ ಬಂದಿದೆ. ಈ ಪಾರ್ಸೆಲ್‌ ಒಳಗೆ ಎರಡು 7.66 ಎಂಎಂ ಬುಲೆಟ್‌ಗಳನ್ನು ಇಡಲಾಗಿದ್ದು, ಸಾವಿನ ಎಚ್ಚರಿಕೆ ನೀಡಲಾಗಿದೆ.

    ಮುಂಬೈ ದಹಿಸರ್‌ನ ಜಿಲ್ಲಾ ಪರಿಷತ್ ಶಾಲೆಯಲ್ಲಿ ಉದ್ಯೋಗದಲ್ಲಿರುವ ಶಿಕ್ಷಕನಿಗೆ ಈ ಕೊಲೆ ಬೆದರಿಕೆ ಬಂದಿದೆ. ಅದರಲ್ಲಿ ಕಳುಹಿಸಿರುವ ವ್ಯಕ್ತಿಗಳ ಹೆಸರು, ವಿಳಾಸ ಏನೂ ಇಲ್ಲ. ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಈ ಶಿಕ್ಷಕ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ನಡೆದಂಥ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬ. ತಮ್ಮ ವಿರುದ್ಧ ವಿನಾಕಾರಣ ದೂರು ದಾಖಲು ಮಾಡಲಾಗಿದೆ ಎನ್ನುವುದು ಶಿಕ್ಷಕನ ಆರೋಪವಾಗಿತ್ತು. ಈಗ ಅದೇ ದೂರು ದಾಖಲು ಮಾಡಿರುವ ವ್ಯಕ್ತಿಯೇ ಈ ಬೆದರಿಕೆ ಪತ್ರ ಮತ್ತು ಸಂದೇಶ ಕಳುಹಿಸಿರುವುದಾಗಿ ಶಿಕ್ಷಕ ಹೇಳಿದ್ದು, ಪೊಲೀಸರ ತನಿಖೆಯಿಂದ ಸತ್ಯಾಂಶ ಬಯಲಾಗಬೇಕಿದೆ.

    VIDEO: ನಾವು ಬದಲಾಗಿದ್ದೇವೆ ಎಂದರು… ನಂಬಿ ಕಚೇರಿಗೆ ಹೋದೆ.. ಆದರೆ… ಕರಾಳ ಅನುಭವ ಬಿಚ್ಚಿಟ್ಟ ಪತ್ರಕರ್ತೆ

    ಜೈಲಲ್ಲೇ ವರಮಹಾಲಕ್ಷ್ಮಿ ಹಬ್ಬ- ಜಾಮೀನು ಸಿಕ್ಕರೂ ಬಿಡುಗಡೆಯಿಲ್ಲ… ಕೊಟ್ಟ ಭದ್ರತೆಯೂ ವಾಪಸ್‌!

    ಆಸ್ತಿಗಾಗಿ ಮಗನನ್ನು ಕಾಲುವೆಗೆ ನೂಕಿ ಕೊಂದಿದ್ದ ತಂದೆಗೆ ಜೈಲಲ್ಲಿ ಕಾದುಕುಳಿತಿದ್ದ ಯಮರಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts