More

    ₹3.59 ಕೋಟಿಗೆ ಮಾರಾಟವಾಯ್ತು ಆರು ತಿಂಗಳ ಕುರಿಮರಿ!

    ಸ್ಕಾಟ್‌ಲೆಂಡ್‌: ಕುರಿಯ ವಿಶೇಷ ತಳಿಗಳಲ್ಲಿ ಒಂದಾಗಿರುವ ಟೆಕ್ಸೆಲ್‌ ರಾಮ್‌ 368,000 ಪೌಂಡ್‌ಗೆ (ಸುಮಾರು 3.59 ಕೋಟಿ ರೂಪಾಯಿ) ಮಾರಾಟವಾಗಿದ್ದು, ಇದೀಗ ದಾಖಲೆ ಮಾಡಿದೆ.

    ಸ್ಕಾಟ್‌ಲೆಂಡ್‌ನಲ್ಲಿ ನಡೆದ ಹರಾಜಿನಲ್ಲಿ ಈ ಕುರಿಯನ್ನು ಮಾರಾಟ ಮಾಡಲಾಗಿದೆ. ಕುರಿಯಲ್ಲಿಯೇ ಅತ್ಯಂತ ದುಬಾರಿ ಹಾಗೂ ವಿಶೇಷ ತಳಿ ಎಂದು ಇದನ್ನು ಗುರುತಿಸಲಾಗಿದೆ.

    2009ರಲ್ಲಿ ಈ ತಳಿಯ ಕುರಿಮರಿಯೊಂದು 230,000 ಪೌಂಡ್‌ಗೆ (ಅಂದರೆ ಸುಮಾರು 2.25 ಕೋಟಿ ರೂಪಾಯಿ) ಮಾರಾಟವಾಗಿ ದಾಖಲೆ ಸೃಷ್ಟಿಸಿತ್ತು. ಈ ದಾಖಲೆಯನ್ನು ಈ ಬಾರಿ ಮುರಿಯಲಾಗಿದೆ.

    ಇದನ್ನೂ ಓದಿ: ಐಸ್‌ಕ್ರೀಂಗೆ ₹10 ಹೆಚ್ಚು ಪಡೆದ ರೆಸ್ಟೋರೆಂಟ್‌ಗೆ ಬಿತ್ತು ₹2 ಲಕ್ಷ ದಂಡ- ಉಳಿದವರಿಗೂ ಪಾಠ!

    ಚಾರ್ಲಿ ಬೋಡೆನ್ ಎಂಬಾತ ಈ ಕುರಿಮರಿಯ ಮಾಲೀಕ. ಈ ಕುರಿತು ಈತ ಇಟ್ಟಿರುವ ಹೆಸರು ಡಬಲ್ ಡೈಮಂಡ್. ಈ ತಳಿಗಳ ಕುರಿಗಳ ಮಾಂಸಕ್ಕೆ ಕೂಡ ಬಲು ದುಬಾರಿ ಬೆಲೆಯಿದೆ. ಅಷ್ಟೇ ಅಲ್ಲದೇ ಇದರ ತುಪ್ಪಳ ಕೂಡ ಬಹಳ ಬೆಲೆ ಬಾಳುವ ಹಿನ್ನೆಲೆಯಲ್ಲಿ ಇದು ಇಷ್ಟು ದುಬಾರಿಯಾಗಲು ಕಾರಣ ಎನ್ನುತ್ತಾರೆ ಕುರಿ ಸಾಕಣೆಕಾರರು.

    ಜೆಫ್ ಐಕೆನ್ ಎಂಬಾತ ಇದನ್ನು ಖರೀದಿ ಮಾಡಿದ್ದಾನೆ. ಈ ತಳಿಯ ಕುರಿಯನ್ನು ಸಾಕಣೆ ಮಾಡಿ ಅದರ ವಂಶವನ್ನು ಇನ್ನಷ್ಟು ಬೆಳೆಸಲು ತಾನು ನಿರ್ಧರಿಸಿರುವುದಾಗಿ ಜೆಫ್‌ ಹೇಳಿದ್ದಾನೆ.

    ಬ್ಲ್ಯಾಕ್‌ಲಿಸ್ಟ್‌ ಭೀತಿಯಲ್ಲಿ ಪಾಕ್‌ ಪ್ರಧಾನಿ ಗಡಗಡ: ಮಾಧ್ಯಮದೆದುರು ಗೋಳು ತೋಡಿಕೊಂಡಿದ್ದೇನು?

    ಚಾಲಕನ ಜತೆ ಆಕಾಶದಲ್ಲಿ ಹಾರಿತು ಕಾರು: ಕೆಲವೇ ವರ್ಷಗಳಲ್ಲಿ ವಿಶ್ವದೆಲ್ಲೆಡೆ ಓಡಾಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts