More

    ಚಾಲಕನ ಜತೆ ಆಕಾಶದಲ್ಲಿ ಹಾರಿತು ಕಾರು: ಕೆಲವೇ ವರ್ಷಗಳಲ್ಲಿ ವಿಶ್ವದೆಲ್ಲೆಡೆ ಓಡಾಟ!

    ಟೊಕಿಯೊ: ಬೆಂಗಳೂರಿನಂಥ ಮಹಾನಗರಗಳಲ್ಲಿನ ಟ್ರಾಫಿಕ್‌ಗಳನ್ನು ಕಂಡವರೆಲ್ಲಾ ಅಬ್ಬಾ ಬೈಕು, ಕಾರು ಆಕಾಶದಲ್ಲಿ ಹಾರಿಸಿಕೊಂಡು ಹೋಗುವ ಹಾಗೆ ಇದ್ದರೆ ಚೆನ್ನಾಗಿತ್ತು ಅಂದುಕೊಳ್ಳುವುದುಂಟು.

    ಆದರೆ ಇವೆಲ್ಲಾ ಕನಸಿನ ಮಾತೇ ಅಂದುಕೊಳ್ಳುವವರೇ ಎಲ್ಲಾ. ಆದರೆ ಈ ಕನಸನ್ನು ನನಸು ಮಾಡಿ ತೋರಿಸಿದೆ ಜಪಾನ್‌. ಸದಾ ವಿಭಿನ್ನ ತಂತ್ರಜ್ಞಾನದೊಂದಿಗೆ ಹೊಸಹೊಸ ಆವಿಷ್ಕಾರಗಳನ್ನು ಮಾಡುವಲ್ಲಿ ನಿರತವಾಗಿರುವ ಜಪಾನ್‌, ಕಳೆದ ವರ್ಷವೇ ಹಾರುವ ಕಾರಿನ ಪರಿಕ್ಷಾರ್ಥ ಹಾರಾಟ ನಡೆಸಿತ್ತು. ಆದರೆ ಇದೀಗ ಚಾಲಕನ ಜತೆ ಯಶಸ್ವಿಯಾಗಿ ಹಾರಾಟ ನಡೆಸಿದೆ.

    ಇದರ ವಿಡಿಯೋ ಬಿಡುಗಡೆ ಮಾಡಿರುವ ಜಪಾನ್‌ನ ಸ್ಕೈಡ್ರೈವ್ ಇಂಕ್ ಕಂಪೆನಿ, ನೆಲದಿಂದ 2 ಮೀಟರ್‌ಗಳಷ್ಟು ಮೇಲಕ್ಕೆ ಈ ಕಾರನ್ನು

    ಚಾಲಕನ ಜತೆ ಯಶಸ್ವಿಯಾಗಿ ಹಾರಾಟ ನಡೆಸಲಾಗಿದೆ ಎಂದಿದೆ. ಆದರೆ ಇದು ಎಲ್ಲಾ ಅಪಾಯಗಳನ್ನು ಮೀರಿ ಹಾರಾಟ ನಡೆಸಲು ಇನ್ನೂ ಎರಡು ವರ್ಷ ಕಾಯಬೇಕು ಎಂದಿದ್ದಾರೆ ಸ್ಕೈಡ್ರೈವ್ ಪ್ರಯತ್ನದ ಮುಖ್ಯಸ್ಥರಾಗಿರುವ ಟೊಮೊಹಿರೊ ಫುಕುಜಾವಾ.

    ಇದನ್ನೂ ಓದಿ: ಬ್ಲ್ಯಾಕ್‌ಲಿಸ್ಟ್‌ ಭೀತಿಯಲ್ಲಿ ಪಾಕ್‌ ಪ್ರಧಾನಿ ಗಡಗಡ: ಮಾಧ್ಯಮದೆದುರು ಗೋಳು ತೋಡಿಕೊಂಡಿದ್ದೇನು?

    ಸದ್ಯ 10 ನಿಮಿಷಗಳವರೆಗೆ ಈ ಕಾರು ಯಶಸ್ವಿಯಾಗಿ ಚಾಲಕನ ಜತೆ ಹಾರಾಟ ನಡೆಸಿದೆ. ಆದರೆ ಕನಿಷ್ಠ 30 ನಿಮಿಷ ಹಾರಾಟ ನಡೆಸಲು ಶಕ್ಯವಾದಲ್ಲಿ ಮಾತ್ರ ಅದನ್ನು ಸಂಪೂರ್ಣ ಯಶಸ್ವಿ ಹಾರಾಟ ಎನ್ನಬಹುದು. ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆ ಮಾಡಬೇಕಿದೆ. ಅದಕ್ಕೆ ಅಗತ್ಯವಾಗಿರುವ ತಂತ್ರಜ್ಞಾನವನ್ನು ರೂಪಿಸಬೇಕಿದೆ. ಆದ್ದರಿಂದ 2023ರ ವೇಳೆಗೆ ಕನಿಷ್ಠ 30 ನಿಮಿಷಗಳ ಹಾರಾಟ ಮಾಡುವ ಮೂಲಕ ನಮ್ಮ ಕನಸನ್ನು ಸಂಪೂರ್ಣವಾಗಿ ನನಸು ಮಾಡಲಿದ್ದೇವೆ ಎಂದಿದ್ದಾರೆ ಟಿಮೊಹಿರೊ.

    ಕಳೆದ ವರ್ಷ ನೆಲದಿಂದ 10 ಅಡಿ ಎತ್ತರದಲ್ಲಿ ಒಂದು ನಿಮಿಷದ ಕಾಲ ಕಾರನ್ನು ಹಾರಿಸುವಲ್ಲಿ ಯಶಸ್ವಿಯಾಗಿತ್ತು. ಯಾವ ಪ್ರಯಾಣಿಕರೂ ಇಲ್ಲದೇ ಪರೀಕ್ಷಾರ್ಥ ಹಾರಾಟ ನಡೆಸಿದ್ದು, ನೋಡಲು ದೊಡ್ಡ ಪ್ರಮಾಣದ ಡ್ರೋನ್ ರೀತಿಯಲ್ಲಿಯೇ ಇತ್ತು. ಈ ವಾಹನ ಬ್ಯಾಟರಿಯ ಸಹಾಯದಿಂದ ಹಾರಾಟ ನಡೆಸಿತ್ತು. ಇದೀಗ ಚಾಲಕನ ಜತೆ ಹಾರಾಟ ನಡೆಸುವ ಮೂಲಕ ವಾಹನ ಪ್ರಪಂಚದಲ್ಲಿ ಮತ್ತೊಂದು ಇತಿಹಾಸ ಬರೆದಿದೆ ಜಪಾನ್‌.

    ಇದೇ ರೀತಿ ಮುಂದುವರೆದರೆ 2030ರ ವೇಳೆಗೆ ಬೇರೆ ದೇಶಗಳಿಗೂ ಈ ವಾಹನವನ್ನು ರಫ್ತು ಮಾಡುವ ಚಿಂತನೆಯನ್ನು ಜಪಾನ್‌ ನಡೆಸಿದೆ.

    ಪಿಪಿಇ ಕಿಟ್‌ ಹಾಗೂ ಮುಟ್ಟಿನ ದಿನಗಳು: ಕರೊನಾ ವಾರಿಯರ್ಸ್‌ ನೋವನ್ನು ಬಿಚ್ಚಿಟ್ಟ ವೈದ್ಯೆಯರು

    ಅಣ್ಣಾಮಲೈ ಬಿಜೆಪಿ ಸೇರುತ್ತಿದ್ದಂತೆಯೇ ದಾಖಲಾಯ್ತು ಕೇಸ್‌!

    ಗೆಳೆಯನ ಜತೆ ದೈಹಿಕ ಸಂಪರ್ಕ ಬೆಳೆಸಿ ಅತ್ಯಾಚಾರ ಎಂದಳು: ಹೈಕೋರ್ಟ್‌ ಮಾಡಿತು ತಕ್ಕಶಾಸ್ತಿ

    ಭಾರತದಲ್ಲಿ 20 ಸಾವಿರಕ್ಕೂ ಅಧಿಕ ಜನರ ಜೀವ ಉಳಿಸಿದ ಕರೊನಾ!

    ಬ್ಲ್ಯಾಕ್‌ಲಿಸ್ಟ್‌ ಭೀತಿಯಲ್ಲಿ ಪಾಕ್‌ ಪ್ರಧಾನಿ ಗಡಗಡ: ಮಾಧ್ಯಮದೆದುರು ಗೋಳು ತೋಡಿಕೊಂಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts