More

    ವಿಧ್ವಂಸಕ ಕೃತ್ಯಕ್ಕೆ ಯೋಜನೆ ರೂಪಿಸಿದ್ದು ನಿಜ ಎಂದು ಬಾಯ್ಬಿಟ್ಟ ಉಗ್ರ

    ವಾಷಿಂಗ್ಟನ್: ಅಮೆರಿಕದ ಶ್ವೇತಭವನ, ಟ್ರಂಪ್‌ ಟವರ್ ಸೇರಿದಂತೆ ವಿವಿಧ ತಾಣಗಳ ಮೇಲೆ ಬಾಂಬ್‌ ದಾಳಿ ನಡೆಸುವ ಮೂಲಕ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದು ನಿಜ ಎಂದು ದಕ್ಷಿಣ ಕೊರೊಲಿನಾದ ಕ್ರಿಸ್ಟೋಫರ್ ಸೀನ್ ಮ್ಯಾಥ್ಯೂಸ್‌ ಎಂಬಾತ ತಪ್ಪು ಒಪ್ಪಿಕೊಂಡಿದ್ದಾನೆ.

    34 ವರ್ಷದ ಕ್ರಿಸ್ಟೋಫರ್​ ‘ನಾನು ಇಸ್ಲಾಮಿಕ್‌ ಸ್ಟೇಟ್ ಗುಂಪಿನಿಂದ ಉತ್ತೇಜನಗೊಂಡು ಈ ದಾಳಿಯ ಸಂಚು ರೂಪಿಸಿದ್ದೆ’ ಎಂದು ಹೇಳಿರುವುದಾಗಿ ಫೆಡರಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಈತ ಅಮೆರಿಕದ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರೆದುರು ನಡೆದ ವಿಚಾರಣೆಯಲ್ಲಿ ಉಗ್ರ ಸಂಘಟನೆಗೆ ಬೆಂಬಲ ನೀಡಿದ್ದನ್ನು ಬಾಯ್ಬಿಟ್ಟಿದ್ದಾನೆ, ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಭಯೋತ್ಪಾದಕ ಚಟುವಟಿಕೆಗೆ ಪೂರಕ ವಸ್ತುಗಳನ್ನು ಪೂರೈಸಿದ್ದಾಗಿಯೂ ತಿಳಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಇದನ್ನೂ ಓದಿ: ಅಣ್ಣ-ಅತ್ತಿಗೆ ಅಮ್ಮನ ಸರಿಯಾಗಿ ನೋಡಿಕೊಳ್ತಿಲ್ಲ… ಪ್ಲೀಸ್​ ಕಾನೂನಿನಡಿ ಪರಿಹಾರ ಹೇಳಿ…

    ಮೇ 2019ರಿಂದಲೂ ಟೆಕ್ಸಾಸ್‌ನ ಜಯ್ಲಿಯನ್ ಕ್ರಿಸ್ಟೋಫರ್ ಮೊಲಿನಾ ಎಂಬ ವ್ಯಕ್ತಿಯೊಂದಿಗೆ ಸೇರಿ ಸಂಚು ರೂಪಿಸಿದ್ದ. ಇಸ್ಲಾಮಿಕ್ ಸ್ಟೇಟ್ ಸಂಘಟನೆ ಪರವಾಗಿ ದೇಶ ಮತ್ತು ವಿದೇಶಗಳಲ್ಲಿ ಬಾಂಬ್ ದಾಳಿ ನಡೆಸಲು ಬಾಂಬ್ ತಯಾರಿಕೆ ತರಬೇತಿಯನ್ನು ಕೂಡ ಈತ ಪಡೆದಿದ್ದ.

    ಐಎಸ್ ಪರವಾಗಿ ದೇಶೀಯ ಮತ್ತು ವಿದೇಶಿ ದಾಳಿಯ ಉದ್ದೇಶಗಳಿಗಾಗಿ ಬಾಂಬ್ ತಯಾರಿಕೆಯ ಮಾಹಿತಿ ಹಂಚಿಕೊಳ್ಳಲು ಮತ್ತು ಹಲವರನ್ನು ಸಂಘಟನೆಗೆ ನೇಮಕ ಮಾಡಿಕೊಳ್ಳುವ ಉದ್ದೇಶದಿಂದ ಟೆಕ್ಸಾಸ್‌ನ ಕಾಸ್ಟ್​ನ  ಜೇಲಿನ್ ಕ್ರಿಸ್ಟೋಫರ್ ಮೊಲಿನಾ ಎಂಬಾತನ ಸೇರಿ ಸಂಚು ರೂಪಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

    ಫೆಡರಲ್ ಕಸ್ಟಡಿಯಲ್ಲಿ ಉಳಿದಿರುವ ಮೊಲಿನಾರ ಅಪರಾಧ ಸಾಬೀತಾದರೆ 40 ವರ್ಷಗಳವರೆಗೆ ಜೈಲು ಶಿಕ್ಷೆ ಇದೆ.

    ಗಾಂಧಿ ಕುಟುಂಬದಲ್ಲಿ ತಲ್ಲಣ ಸೃಷ್ಟಿಸಿರುವ ಒಬಾಮಾ ಪುಸ್ತಕ ವಾರದಲ್ಲಿ 17 ಲಕ್ಷ ಕಾಪಿ ಸೇಲ್​

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಥಾನದಿಂದ ಇಮರ್ತಿದೇವಿ ರಾಜೀನಾಮೆ

    ಹೊರಗಡೆ ಇಂಟೀರಿಯರ್​ ಡಿಸೈನಿಂಗ್​ ಬೋರ್ಡ್​- ಒಳಗಡೆ ಅಂಗಾಂಗ ಪ್ರದರ್ಶನದ ತರಬೇತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts