More

    ಹೊರಗಡೆ ಇಂಟೀರಿಯರ್​ ಡಿಸೈನಿಂಗ್​ ಬೋರ್ಡ್​- ಒಳಗಡೆ ಅಂಗಾಂಗ ಪ್ರದರ್ಶನದ ತರಬೇತಿ!

    ವಡೋದರ (ಗುಜರಾತ್​): ಇಂಟೀರಿಯರ್ ಡಿಸೈನಿಂಗ್ ಆ್ಯಂಡ್ ಆರ್ಕಿಟೆಕ್ಟ್ ಹೆಸರಿನ ಬೋರ್ಡ್​ ಹಾಕಿಕೊಂಡು ಒಳಗಡೆ ಆನ್​ಲೈನ್​ ಸೆಕ್ಸ್​ ದಂಧೆ ಮಾಡುತ್ತಿರುವ ಗ್ಯಾಂಗ್​ ಒಂದನ್ನು ಪೊಲೀಸರು ಬಂಧಿಸಿದ್ದಾರೆ.

    ವಡೋದರ ನಗರದಲ್ಲಿ ವರ್ಚುವಲ್ ಸೆಕ್ಸ್ ದಂಧೆ ನಡೆಯುತ್ತಿರುವ ಖಚಿತ ಮಾಹಿತಿ ಆಧರಿಸಿದ ಪೊಲೀಸರು ದಾಳಿ ನಡೆಸಿ ದಂಧೆಯ ಮಾಸ್ಟರ್ ಮೈಂಡ್ ನೀಲೇಶ್ ಗುಪ್ತಾ ಸೇರಿದಂತೆ ಕೆಲವರನ್ನು ಬಂಧಿಸಿದ್ದಾರೆ.

    ಇಲ್ಲಿ ಬೇರೆ ರಾಜ್ಯಗಳಿಂದ ಬರುತ್ತಿದ್ದ ಯುವತಿಯರ ಸಂಖ್ಯೆ ಹೆಚ್ಚಾಗುತ್ತಿತ್ತು. ಇಂಟೀರಿಯರ್ ಡಿಸೈನಿಂಗ್ ಆ್ಯಂಡ್ ಆರ್ಕಿಟೆಕ್ಟ್ ಕೋರ್ಸ್​ ಕಲಿಯಲು ಯುವತಿಯರು ಬರುತ್ತಿದ್ದಾರೆ ಎಂದೇ ಮೊದಲು ಎಲ್ಲರೂ ಅಂದುಕೊಂಡಿದ್ದರು. ಇದು ಅವ್ಯಾಹತವಾಗಿ ನಡೆದುಕೊಂಡೇ ಬರುತ್ತಿತ್ತು.

    ಇದನ್ನೂ ಓದಿ: ಕಣ್ಣಿನ ಕೆಳಗಿರುವ ಕಪ್ಪು ವರ್ತುಲ: ವೈದ್ಯರು ಹೇಳಿರುವ ಪರಿಹಾರ ಇಲ್ಲಿದೆ…

    ಆದರೆ ಇದೀಗ ಕರೊನಾ ಹಿನ್ನೆಲೆಯಲ್ಲಿ ಕೋಚಿಂಗ್​ ಕ್ಲಾಸ್​ಗಳು ಬಂದ್​ ಆಗಿವೆ. ಆದರೂ ಯುವತಿಯರ ಸುಳಿದಾಟವು ಸಂಶಯಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಸಂಬಂಧ ಪೊಲೀಸರಲ್ಲಿ ದೂರು ದಾಖಲು ಮಾಡಲಾಗಿತ್ತು. ಯುವತಿಯರ ಚಲನವಲನದ ಮೇಲೆ ನಿಗಾ ಇಟ್ಟಿದ್ದ ಪೊಲೀಸರಿಗೆ ಇಲ್ಲಿ ದಂಧೆ ನಡೆಯುತ್ತಿರುವುದು ತಿಳಿದಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ.

    ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರಿಗೆ ತಿಳಿದುಬಂದದ್ದೇನೆಂದರೆ, ಆನ್​ಲೈನ್​ ಸೆಕ್ಸ್​ ದಂಧೆ ಇಲ್ಲಿ ವರ್ಷಗಳಿಂದ ನಡೆಯುತ್ತಿದೆ. ಪೋರ್ನ್ ವೆಬ್‍ಸೈಟ್​ಗಳಿಗೆ ಅಂಗಾಂಗ ಹೇಗೆ ಪ್ರದರ್ಶಿಸಬೇಕು ಎಂಬುದರ ಕುರಿತು ಇಲ್ಲಿ ತರಬೇತಿ ನೀಡಲಾಗುತ್ತಿತ್ತು. ಹೀಗಾಗಿ ಬೇರೆ ರಾಜ್ಯಗಳಿಂದಲೂ ಯುವತಿಯರನ್ನು ಇಲ್ಲಿಗೆ ಕರೆತರಲಾಗುತ್ತಿದೆ. ಆದರೆ ಕೋರ್ಸ್​ ಕಲಿಯಲು ಬರುತ್ತಿರುವುದಾಗಿ ಅಂದುಕೊಳ್ಳುವ ಅಕ್ಕಪಕ್ಕದವರು ಇದುವರೆಗೂ ಈ ಬಗ್ಗೆ ತಲೆಯೇ ಕೆಡಿಸಿಕೊಂಡಿರಲಿಲ್ಲ!

    ಅಷ್ಟಕ್ಕೂ ಇಂಥದ್ದೊಂದು ದಂಧೆ ಶುರು ಮಾಡಿರುವುದು ನೀಲೇಶ್ ಗುಪ್ತಾನ ಪತ್ನಿ. ಈಕೆ ರಷ್ಯದ ಮೂಲದವಳು. ಬಿಟ್ ಕಾಯಿನ್ ಮೂಲಕ ಹಣಕಾಸಿನ ವ್ಯವಹಾರ ನಡೆಯುತ್ತಿತ್ತು. ದಾಳಿ ವೇಳೆ 30 ಬಿಟ್ ಕಾಯಿನ್ ವಾಲೆಟ್ ಮತ್ತು 25 ಲಕ್ಷ ಮೌಲ್ಯದ 9.45 ಬಿಟ್ ಕಾಯಿನ್ ವಶಕ್ಕೆ ಪಡೆಯಲಾಗಿದೆ. ಇದರ ಜತೆಗೆ ಲ್ಯಾಪ್‍ಟಾಪ್, ವೆಬ್​ಕ್ಯಾಮ್ ಹಾಗೂ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಇದರ ಹಿಂದೆ ದೊಡ್ಡ ಜಾಲವೇ ಇರುವುದಾಗಿ ಪೊಲೀಸರಿಗೆ ತಿಳಿದಿದ್ದು, ಈ ಕುರಿತು ತನಿಖೆ ಮುಂದುವರೆಸಿದ್ದಾರೆ.
    ಕೆಲ ದಾಖಲೆ ಪತ್ರ ವಶಕ್ಕೆ ಪಡೆದು ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ. ಈ ಸೆಕ್ಸ್ ದಂಧೆಯಲ್ಲಿ ಹಲವರು ಭಾಗಿಯಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಸಂದೀಪ್ ಚೌಧರಿ ಹೇಳಿದ್ದಾರೆ.

    ಗಾಂಧಿ ಕುಟುಂಬದಲ್ಲಿ ತಲ್ಲಣ ಸೃಷ್ಟಿಸಿರುವ ಒಬಾಮಾ ಪುಸ್ತಕ ವಾರದಲ್ಲಿ 17 ಲಕ್ಷ ಕಾಪಿ ಸೇಲ್​

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಥಾನದಿಂದ ಇಮರ್ತಿದೇವಿ ರಾಜೀನಾಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts