More

    ಮಚ್ಚೆಯಿಂದಾಗಿ ಮಗ ಅಂಜುತ್ತಿದ್ದ ಎಂದು ಈ ಅಪ್ಪ ಮಾಡಿದನೊಂದು ಉಪಾಯ- ಎಲ್ಲರಿಂದಲೂ ಭೇಷ್​ ಭೇಷ್​…

    ಆಲ್​ಬರ್ಟಾ (ಕೆನಡಾ): ಮಕ್ಕಳ ಸಲುವಾಗಿ ಅಪ್ಪ-ಅಮ್ಮ ಮಾಡುವ ತ್ಯಾಗಗಳಿಗೆ ಲೆಕ್ಕವೇ ಇಲ್ಲ ಬಿಡಿ. ದೇಶ,ಪ್ರಾಂತ್ಯ ಯಾವುದಾದರೇನು ಪಾಲಕರ ತ್ಯಾಗಕ್ಕೆ ಬೆಲೆ ಕಟ್ಟಲಾಗದ್ದು. ಮಗನಿಗಾಗಿ ಅಪ್ಪ ಮಾಡಿದ ಒಂದು ಕೆಲಸ ಇದೀಗ ಭಾರಿ ವೈರಲ್​ ಆಗಿದ್ದು, ಈ ಅಪ್ಪ ಎಲ್ಲರಿಂದಲೂ ಭೇಷ್​ ಭೇಷ್ ಎನಿಸಿಕೊಂಡಿದ್ದಾರೆ.

    ಡೆರೆಕ್​ ಪ್ರೂ ಸೀನಿಯರ್​ ಮಾಡಿರುವ ಈ ಸಾಹಸ ತನ್ನ ಎಂಟು ವರ್ಷದ ಮಗನಿಗಾಗಿ. ಆತನ ಮಗನ ಹೆಸರು ಡೆರೆಕ್​ ಪ್ರೂ ಜ್ಯೂನಿಯರ್​. ಈ ಜ್ಯೂನಿಯರ್​ಗೆ ಹುಟ್ಟಿನಿಂದಲೇ ದೇಹದ ಮೇಲೆ ದೊಡ್ಡ ಮಚ್ಚೆಯಿದೆ. ಮಗ ಬೆಳೆದಂತೆ ಮಚ್ಚೆಯ ಗಾತ್ರವೂ ಬೆಳೆಯುತ್ತಾ ಸಾಗಿದೆ.

    ಇದೇನು ದೊಡ್ಡ ವಿಷಯ ಆಗಿರಲಿಲ್ಲ. ಅದೂ ದೇಹದ ಮೇಲೆ ಇರುವ ಕಾರಣ, ಮಗ ಅಂಜುವ ಪ್ರಮೇಯವೇ ಇರಲಿಲ್ಲ. ಆದರೂ ಈ ಜ್ಯೂನಿಯರ್​ಗೆ ತುಂಬಾ ಸಂಕೋಚವಾಗುತ್ತಿತ್ತು. ಸ್ವಿಮ್ಮಿಂಗ್​ ಎಂದರೆ ಮಗನಿಗೆ ಪಂಚಪ್ರಾಣ. ಆದರೆ ಬೇರೆ ಟೈಂನಲ್ಲಿ ಅಲ್ಲದಿದ್ದರೂ ಸ್ವಿಮ್ಮಿಂಗ್​ ವೇಳೆ ಷರ್ಟ್​ ಬಿಚ್ಚಲೇಬೇಕಲ್ಲ. ಅದೇ ಈ ಮಗನಿಗೆ ಅಂಜಿಕೆಯಾಗುತ್ತಿತ್ತು.

    ಯಾರಾದರೂ ತನ್ನನ್ನು ನೋಡಿ ನಕ್ಕರೆ ಎಂಬ ಅಳುಕು ಮಗನಿಗೆ ಇದ್ದುದರಿಂದ ಷರ್ಟ್​ ಬಿಚ್ಚಲು ಕೊಡುತ್ತಿರಲಿಲ್ಲ. ಆದ್ದರಿಂದ ತಾನು ಈಜುಗಾರನಾಗಬೇಕೆಂಬ ಮಗನ ಆಸೆಗೆ ಪೆಟ್ಟು ಬಿದ್ದದ್ದು ಈ ಅಪ್ಪ ಸೀನಿಯರ್​ಗೆ ನೋಡಲು ಆಗಲಿಲ್ಲ. ಆದರೆ ಆ ಮಚ್ಚೆಯನ್ನು ಶಸ್ತ್ರಚಿಕತ್ಸೆಯೋ ಅಥವಾ ಇನ್ನಾವುದೇ ರೀತಿಯಲ್ಲಿ ತೆಗೆದುಹಾಕಿ ಮಗನ ಜೀವಕ್ಕೆ ಅಪಾಯ ತಂದೊಡ್ಡಲು ಅಪ್ಪನಿಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಅವನೊಂದು ಪ್ಲ್ಯಾನ್​ ಮಾಡಿದ. ಈ ಪ್ಲ್ಯಾನೇ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಪ್ಪನಿಗೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

    ಅಷ್ಟಕ್ಕೂ ಡೆರೆಕ್​ ಪ್ರೂ ಸೀನಿಯರ್​ ಮಾಡಿದ್ದು ಏನೆಂದರೆ, ತನ್ನ ಶರೀರದ ಮೇಲೆ ಅಂದರೆ ಮಗನಿಗೆ ಎಲ್ಲಿ ಮಚ್ಚೆ ಇದೆಯೋ ಅದೇ ಜಾಗದಲ್ಲಿ, ಅದೇ ಶೇಪ್​ನಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾನೆ. ಹಚ್ಚೆ ಎಂದರೆ ಅದು ಸಾಮಾನ್ಯವಾದುದಲ್ಲ. ಬದಲಿಗೆ ಶಾಶ್ವತವಾಗಿ ಇರುವಂಥದ್ದು. ಸೂಜಿಯ ಮೊನೆಯನ್ನು ಬೆಂಕಿಯಲ್ಲಿ ಕಾಯಿಸಿ ಚುಚ್ಚಿ ಅದರ ಮಾರ್ಕ್​ ಶಾಶ್ವತವಾಗಿ ಇರುವಂತೆ ಮಾಡುವ ಹಚ್ಚೆ ಇದು.

    ಇದಕ್ಕಾಗಿ ಸತತ 30 ಗಂಟೆ ಹಚ್ಚೆ ಪ್ರಕ್ರಿಯೆಗೆ ಒಳಗಾಗಿರುವ ಡೆರೆಕ್​ ಪ್ರೂ ಸೀನಿಯರ್​ ಕೊನೆಗೂ ತನ್ನ ಮಗನಂತೆಯೇ ಮಚ್ಚೆಯನ್ನು ಹಾಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ತನ್ನ ಅಪ್ಪನಿಗೂ ಹೀಗೆ ಮಚ್ಚೆ ಇದೆ ಎಂದು ಮಗನಿಗೆ ತಿಳಿದರೆ, ಆತನ ಅಂಜಿಕೆ ದೂರವಾಗುತ್ತದೆ ಎನ್ನುವುದು ತಂದೆಯ ಅನಿಸಿಕೆ. ತಾನು ಷರ್ಟ್​ ಬಿಚ್ಚಿ ಆರಾಮಾಗಿ ತಿರುಗಾಡಿದರೆ ತನ್ನ ಮಗನಿಗೂ ಧೈರ್ಯ ಬರುತ್ತದೆ ಎನ್ನುವ ಕಾರಣಕ್ಕೆ ಸತತ 30 ಗಂಟೆ ಸೂಜಿಯ ನೋವನ್ನು ಸಹಿಸಿಕೊಂಡಿದ್ದಾನೆ ಈ ಅಪ್ಪ.

    ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಶೇರ್​ ಆಗುತ್ತಿದೆ. ಅಂದಹಾಗೆ ಅಪ್ಪನ ಯೋಚನೆಯೂ ಫಲಿಸಿದೆಯಂತೆ. ಮಗನಿಗೆ ಈಗ ಯಾವುದೇ ರೀತಿಯ ಅಂಜಿಕೆ ಇಲ್ಲವಂತೆ. ಇದರಿಂದ ಡೆರೆಕ್​ ಪ್ರೂ ಸೀನಿಯರ್​ ತುಂಬಾ ಖುಷಿಯಿಂದ ಇದ್ದಾರೆ.

    ನಿಗೂಢವಾಗಿ ಮೃತಪಟ್ಟ’ಡರ್ಟಿ ಪಿಕ್ಚರ್’ ನಟಿ ಆರ್ಯಾ ಬ್ಯಾನರ್ಜಿ ಮರಣೋತ್ತರ ಪರೀಕ್ಷೆಯಲ್ಲಿ ಅಸಲಿಯತ್ತು ಬಯಲು…

    ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಆಹ್ವಾನ

    ಸರ್ಕಾರಿ ನೌಕರರಾಗಬೇಕೆಂದು ಮುಷ್ಕರಕ್ಕೆ ಹೋದವರಿಗೆ ಬಿಎಂಟಿಸಿಯಿಂದ ಬಿಗ್​ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts