More

    ಶಿಕ್ಷಕಿ ಜತೆ ಸರಸದಲ್ಲಿ ತೊಡಗಿದ್ದ ಪುತ್ರನನ್ನು ಹಿಡಿದುಕೊಟ್ಟ Life 360 ಆ್ಯಪ್​ ಹಿಂದಿದೆ ವಿವಾದದ ಕರಿನೆರಳು!

    ವಾಷಿಂಗ್ಟನ್​: ವಿವಾದಾತ್ಮಕ ಆ್ಯಪ್​ ನೆರವಿನಿಂದ ಅಮೆರಿಕದ ಮಹಿಳೆಯೊಬ್ಬಳು, ಶಿಕ್ಷಕಿ ಜತೆ ದೈಹಿಕ ಸಂಬಂಧ ಹೊಂದಿದ್ದ ತನ್ನ ಪುತ್ರನನ್ನು ರೆಡ್​ಹ್ಯಾಂಡ್​ ಆಗಿ ಹಿಡಿಯುವ ಮೂಲಕ ಭಾರಿ ಸುದ್ದಿಯಾಗಿದ್ದಾರೆ.

    18 ವರ್ಷದ ಯುವಕನನ್ನು ಸಂಭೋಗಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಿಕ್ಷಕಿ ಗೇಬ್ರಿಯೆಲಾ ಕಾರ್ಟಾಯಾ ನ್ಯೂಫೆಲ್ಡ್ (26) ಎಂಬಾಕೆಯನ್ನು ಅಮೆರಿಕ ಪೊಲೀಸರು ಬಂಧನ ಮಾಡಿದ್ದಾರೆ.

    ಪುತ್ರನನ್ನು ಪತ್ತೆಹಚ್ಚಲು ಮಹಿಳೆ ಬಳಸಿದ ಆ್ಯಪ್​ ಹೆಸರು ಲೈಫ್​ 360. ಇದನ್ನು 2008ರಲ್ಲಿ ಲಾಂಚ್​ ಮಾಡಲಾಯಿತು. ಕಾಲ್​ ಲೀಸ್ಟ್​ನಲ್ಲಿರುವ ಕುಟುಂಬದ ಸದಸ್ಯರಿಂದ ಹಿಡಿದು ಸ್ನೇಹಿತರವರೆಗೂ ಅವರಿರುವ ಸ್ಥಳವನ್ನು ಟ್ರ್ಯಾಕ್ ಮಾಡಲು ಈ ಆ್ಯಪ್​ ಸಹಾಯ ಮಾಡುತ್ತದೆ. ಆದರೆ, ಈ ಆ್ಯಪ್​ ಬಹುದೊಡ್ಡ ವಿವಾದವನ್ನೇ ಹುಟ್ಟುಹಾಕಿದೆ. ಅದನ್ನು ತಿಳಿಯುವ ಮುನ್ನ ಮಗನನ್ನು ತಾಯಿ ಪತ್ತೆ ಹಚ್ಚಿದ್ದು ಹೇಗೆ ಎಂಬುದನ್ನು ಮೊದಲು ತಿಳಿಯೋಣ.

    ತನ್ನ ಮಗ ಪಾರ್ಕ್ ರೋಡ್‌ನಲ್ಲಿರುವ ಬಗ್ಗೆ ಮಹಿಳೆ ಆ್ಯಪ್‌ ನೋಟಿಫಿಕೇಶನ್​ ಸ್ವೀಕರಿಸಿದರು. ತಕ್ಷಣ ಆ ಸ್ಥಳಕ್ಕೆ ಹೋದಾದ ಆಕೆಗೆ ಆಘಾತ ಕಾದಿತ್ತು. ತನ್ನ ಮಗ ಮತ್ತು ಆತನ ಶಿಕ್ಷಕಿ ಕಾರಿನಲ್ಲಿ ಸಂಭೋಗಿಸುತ್ತಿದ್ದುದನ್ನು ನೋಡಿದಳು. ಕೂಡಲೇ ವಾಹನದ ದೃಶ್ಯಾವಳಿಗಳನ್ನು ಸೆರೆಹಿಡಿದು ಆಕೆ ಪೊಲೀಸರಿಗೆ ನೀಡಿದಳು. ಬಳಿಕ ಮಹಿಳೆಯ ದೂರಿನ ಮೇರೆಗೆ ಆರೋಪಿ ಶಿಕ್ಷಕಿ ನ್ಯೂಫೆಲ್ಡ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

    ತನ್ನ ಮಗ ಸರಿಯಾಗಿ ಶಾಲೆಗೆ ಹಾಜರಾಗುತ್ತಿಲ್ಲ ಎಂಬ ಸುದ್ದಿ ಕೇಳಿ ಮಹಿಳೆ, ಕೆಲಕಾಲ ಗಲಿಬಿಲಿಗೊಂಡಿದ್ದಳು. ಇತ್ತೀಚೆಗಷ್ಟೇ ಶಿಕ್ಷಕಿ ನ್ಯೂಫೆಲ್ಡ್ ಜೊತೆಗಿನ ಮಗನ ಸಂಬಂಧದ ಬಗ್ಗೆ ಅನುಮಾನ ಬಂದಿತ್ತು. ವಿಜ್ಞಾನ ಶಿಕ್ಷಕಿಯಾಗಿರುವ ನ್ಯೂಫೆಲ್ಡ್, ವಿದ್ಯಾರ್ಥಿಯನ್ನು ಆಕೆಯ ತಾಯಿಯ ಮನೆ ಸೇರಿದಂತೆ ವಿವಿಧೆಡೆ ಕರೆದುಕೊಂಡು ಹೋಗಿ ಸಂಭೋಗ ನಡೆಸಿರುವುದು ತಿಳಿದುಬಂದಿದೆ. ಬಂಧನದ ಬಳಿಕ ಒಂದು ತಿಂಗಳ ಕಾಲ ರಿಮ್ಯಾಂಡ್‌ನಲ್ಲಿದ್ದ ನ್ಯೂಫೆಲ್ಡ್‌ಗೆ ನಂತರ ಜಾಮೀನು ಮೂಲಕ ಬಿಡುಗಡೆ ಮಾಡಿ ಕಳುಹಿಸಲಾಗಿದೆ.

    ಲೈಫ್​ 360 ಆ್ಯಪ್​ ವಿವಾದ ಏನು?
    ಕುಟುಂಬದ ಟ್ರ್ಯಾಕಿಂಗ್ ಅಪ್ಲಿಕೇಶನ್ ಎಂದೇ ಖ್ಯಾತಿ ಪಡೆದಿರುವ ಲೈಫ್​ 360 ಆ್ಯಪ್​ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಅಲ್ಲದೆ, ದೂರು ಕೂಡ ದಾಖಲಾಗಿದೆ. ಅನುಮತಿಯಿಲ್ಲದೆ ಬಳಕೆದಾರರ ಸ್ಥಳದ ಮಾಹಿತಿ ಸೇರಿದಂತೆ ಅನೇಕ ದತ್ತಾಂಶಗಳನ್ನು ಬ್ರೋಕರ್​ಗಳಿಗೆ ಮಾರಾಟ ಮಾಡಿದೆ ಎಂದು ಆರೋಪಿಸಲಾಗಿದೆ. ಈ ಸಂಗತಿ ಅಮೆರಿಕದಲ್ಲಿ ಭಾರಿ ವಿವಾದವನ್ನೇ ಸೃಷ್ಟಿ ಮಾಡಿದೆ. ಆದರೆ, ಇದಕ್ಕೆ ಲೈಫ್​ 360 ಆ್ಯಪ್​ ಕಂಪನಿ ನಿರಾಕರಿಸಿದೆ. ಪ್ರತಿಯೊಬ್ಬರ ದತ್ತಾಂಶವನ್ನು ಬಹಳ ಸುರಕ್ಷಿತವಾಗಿ ಇರಿಸಲಾಗಿದೆ. ಅದಕ್ಕಾಗಿಯೇ ಕೆಲವನ್ನು ನೇಮಿಸಲಾಗಿದೆ ಎಂದು ಹೇಳಿದೆ. ಆದರೂ, ಈ ಕಂಪನಿ ವಿರುದ್ಧ ದತ್ತಾಂಶ ಸೋರಿಕೆಯ ಕರಿನೆರಳು ಇದೆ. ಏಕೆಂದರೆ, ಬಳಕೆದಾರ ಮಹತ್ವದ ದಾಖಲೆಗಳು ಈ ಆ್ಯಪ್​ನಲ್ಲಿದ್ದು, ಭಾರಿ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಡೇಟಾ ಮಾರಾಟವಾಗುತ್ತಿದೆ ಎಂಬ ಆರೋಪ ಆಗಾಗಿ ಕೇಳಿಬರುತ್ತಲೇ ಇದೆ.

    ವಿವಾದ ನಡುವೆಯೂ ಪ್ರಸಿದ್ಧಿ
    ಇತ್ತೀಚಿಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಲೈಫ್​ 360 ಆ್ಯಪ್​ ಸರಿಸುಮಾರು 5 ಕೋಟಿ ಸಕ್ರಿಯ ಮಾಸಿಕ ಬಳಕೆದಾರರನ್ನು ಹೊಂದಿದೆ. ಸ್ನೇಹಿತರು ಮತ್ತು ಕುಟುಂಬಗಳ ನಡುವೆ ಸ್ಥಳ ಹಂಚಿಕೆಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಅದರಲ್ಲೂ ತಮ್ಮ ಕಾಲ್​ ಲೀಸ್ಟ್​ನಲ್ಲಿರುವವರ ಟ್ರ್ಯಾಕ್​ ಮಾಡಲು ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಲೈಫ್360 ಪ್ರಸಕ್ತ ವರ್ಷದಲ್ಲಿ ಕೋಟಿ ಡಾಲರ್ ಗಳಿಕೆ ಮಾಡುವ ನಿರೀಕ್ಷೆಯಿದೆ, ಮಾರುಕಟ್ಟೆಯಲ್ಲಿ ಈ ಆ್ಯಪ್​ನ ಯಶಸ್ಸನ್ನು ಇದು ತೋರಿಸುತ್ತದೆ. (ಏಜೆನ್ಸೀಸ್​)

    ವಿದ್ಯಾರ್ಥಿ ಜತೆ ಶಿಕ್ಷಕಿಯ ರತಿಕ್ರೀಡೆ: ಇದನ್ನು ಪತ್ತೆ ಮಾಡಲು ತಾಯಿ ಬಳಸಿದ ಟ್ರ್ಯಾಕಿಂಗ್ ಆ್ಯಪ್​ ಯಾವುದು ಗೊತ್ತೆ?

    ಮಹಿಳೆಯ ಕಿಡ್ನಿಯಲ್ಲಿತ್ತು 300ಕ್ಕೂ ಅಧಿಕ ಕಲ್ಲುಗಳು! ಕಾರಣ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

    20 ವರ್ಷಗಳಿಂದ ಹೆಂಡತಿಯೊಂದಿಗೆ ಮಾತನಾಡೋದೆ ಬಿಟ್ಟ ಪತಿ; ಕಾರಣವೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts