More

    ಗಡಿಯ ತುಂಬಾ ಸಿಹಿ ಸಿಹಿ: ಪಾಕಿಸ್ತಾನ- ಭಾರತದ ಯೋಧರು ಪುನಃ ಹಂಚಿಕೊಂಡರು ಸ್ವೀಟ್ಸ್‌

    ಜಮ್ಮು: ಸದಾ ಪರಸ್ಪರ ಶತ್ರುಗಳಾಗಿ ಕಾಣುತ್ತಿರುವ ಭಾರತ ಮತ್ತು ಪಾಕಿಸ್ತಾನದ ಯೋಧರು ಗಡಿಯಲ್ಲಿ ಸಿಹಿ ಹಂಚಿಕೊಂಡಿರುವ ಘಟನೆ ಇಂದು ನಡೆದಿದೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಪಾಕಿಸ್ತಾನ ರೇಂಜರ್ಸ್ ಈದ್-ಉಲ್-ಅಧಾ ಸಂದರ್ಭದಲ್ಲಿ ಗಡಿಯಲ್ಲಿ ವಿವಿಧ ಸ್ಥಳಗಳಲ್ಲಿ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.

    ಹಾಗೆಂದು ಈ ರೀತಿ ಸಿಹಿ ಹಂಚಿಕೊಳ್ಳುತ್ತಿರುವು ಇದೇ ಮೊದಲೇನಲ್ಲ. ದೀಪಾವಳಿ, ಈದ್, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮತ್ತು ಆಗಸ್ಟ್ 14 ರಂದು ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಈ ರೀತಿ ಪರಸ್ಪರ ಗಡಿಯಲ್ಲಿ ಸಿಹಿ ವಿನಿಯಮ ಮಾಡಿಕೊಳ್ಳಾಗುತ್ತದೆ.

    ಆದರೆ 2019 ರಲ್ಲಿ ನಡೆದ ಪುಲ್ವಾಮಾ ದಾಳಿಯ ನಂತರ ಉಭಯ ದೇಶಗಳ ನಡುವೆ ವೈರತ್ವ ಹೆಚ್ಚಾಗಿದ್ದ ನಡುವೆಯೇ ಪಾಕಿಸ್ತಾನದ ಕಡೆಯವರು ಈ ಪದ್ಧತಿಯನ್ನು ಬಿಟ್ಟುಬಿಟ್ಟಿದ್ದರು. ಆದರೆ ಇದೀಗ ಎರಡು ವರ್ಷಗಳ ನಂತರ ಪುನಃ ಸಂಪ್ರದಾಯವನ್ನು ಮುಂದುರೆಸಿದ್ದಾರೆ.

    ಪುಲ್ವಾಮಾ ದಾಳಿಯ ಬಳಿಕ ಅದೇ ವರ್ಷ ಆಗಸ್ಟ್ 5 ರಂದು ಕೇಂದ್ರ ಸರ್ಕಾರ ಸಂವಿಧಾನದ 370 ನೇ ವಿಧಿ ನಿಬಂಧನೆಗಳನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹೋದ ಬಳಿಕ ಪಾಕಿಸ್ತಾನವು ಮೊದಲಿನ ಸಿಹಿ ಹಂಚುವ ಪದ್ಧತಿಯನ್ನು ನಿಲ್ಲಿಸಿತ್ತು. ಇದು ಪಾಕಿಸ್ತಾನ ತೆಗೆದುಕೊಂಡಿದ್ದ ಏಕಪಕ್ಷೀಯ ನಿರ್ಧಾರವಾಗಿತ್ತು. ಈಗ ಪುನಃ ಸಿಹಿ ಹಂಚಲಾಗಿದೆ ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.

    ಪಾಕಿಸ್ತಾನದ ವಾಗಾ ಗಡಿಯ ಮುಂಭಾಗದಲ್ಲಿರುವ ಪಂಜಾಬ್‌ನ ಅಮೃತಸರ ಜಿಲ್ಲೆಯ ಜೆಸಿಪಿ (ಜಂಟಿ ಚೆಕ್ ಪೋಸ್ಟ್) ಅತ್ತಾರಿ ಈದ್ ಸಂದರ್ಭದಲ್ಲಿ ಬಿಎಸ್‌ಎಫ್ ಮತ್ತು ಪಾಕಿಸ್ತಾನ ರೇಂಜರ್ಸ್ ನಡುವೆ ಸಿಹಿತಿಂಡಿಗಳ ವಿನಿಮಯ ನಡೆದಿದೆ. ರಾಜಸ್ಥಾನ ಮುಂಭಾಗದಲ್ಲಿ ಉಭಯ ಪಡೆಗಳ ನಡುವೆ ಇದೇ ರೀತಿಯ ಸಿಹಿತಿಂಡಿ ವಿನಿಮಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಜಸ್ಥಾನದ ಜಮ್ಮು, ಪಂಜಾಬ್‌ನಿಂದ ಗುಜರಾತ್‌ವರೆಗೆ ಭಾರತದ ಪಶ್ಚಿಮ ಪಾರ್ಶ್ವದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಚಲಿಸುವ ಸುಮಾರು 2,290 ಕಿ.ಮೀ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯನ್ನು ಬಿಎಸ್‌ಎಫ್ ಕಾವಲು ಮಾಡುತ್ತದೆ.ಈದ್-ಉಲ್-ಅಧಾ ಸಂದರ್ಭದಲ್ಲಿ ಸಿಹಿತಿಂಡಿಗಳ ವಿನಿಮಯವೂ ಜಮ್ಮುವಿನ ಗಡಿಯುದ್ದಕ್ಕೂ ನಡೆಯಿತು.

    1000 ಕೆ.ಜಿ ಮೀನು, 250 ಕೆ.ಜಿ ಸಿಗಡಿ, 50 ಕೆ.ಜಿ ಚಿಕನ್‌, 10 ಕುರಿ…. ಇಂಥ ಮಾವ ಸಿಗಬೇಕೆಂದ ಅಳಿಯಂದಿರು!

    ರಾಜ್​ ಕುಂದ್ರಾ ತಯಾರಿಸಿದ್ದು ಬ್ಲೂ ಫಿಲ್ಮ್​ ಅಲ್ಲಪ್ಪಾ… ಇದು ಮಾಮೂಲು ಎಂದ ಮಾಡೆಲ್​ ಗೆಹನಾ!

    ಎಸ್​ಎಸ್ಎಲ್​ಸಿ ಪರೀಕ್ಷೆ ಫಲಿತಾಂಶದ ಡೇಟ್​ ಫಿಕ್ಸ್​: ಸಚಿವ ಸುರೇಶ್​ ಕುಮಾರ್​ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts